ಶಿವಮೊಗ್ಗ: ಸರ್ಕಾರದ ಆದೇಶ ಪಾಲಿಸದ ಅಧಿಕಾರಿಗಳು ಜಿಲ್ಲೆಯಿಂದ ಹೊರ ಹೋಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಸೂಚಿಸಿದರು.ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಕೆಲವು ಅಧಿಕಾರಿ ಗಳನ್ನು ತರಾಟೆಗೆ ತೆಗೆದುಕೊಂಡರು.

ಪಾರಂಪರಿಕ ಅರಣ್ಯ ಹಕ್ಕು ಕಾಯ್ದೆಯ ಅಡಿ ಭೂ ಒಡೆತನ ಕೋರಿ 86 ಸಾವಿರ ಅರ್ಜಿಗಳು ಸಲ್ಲಿಕೆಯಾಗಿವೆ. ಅವುಗಳಲ್ಲಿ ಅರ್ಧಷ್ಟು ಜಮೀನುಗಳಿಗೆ ಸರ್ವೆ ಸ್ಕೆಚ್ ಸಿದ್ಧಗೊಂಡಿಲ್ಲ. ಡಿಸೆಂಬರ್ ಒಳಗೆ ಎಲ್ಲರಿಗೂ ಜಮೀನಿನ ಹಕ್ಕು ನೀಡಬೇಕು. ಕೆಲವು ಅಧಿಕಾರಿಗಳು ಇಲ್ಲಸಲ್ಲದ ಕಾರಣ ನೀಡಿ ಅರ್ಜಿ ಇತ್ಯರ್ಥ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಮೀನು ಸಾಗುವಳಿ ಮಾಡಿರುವ ಕುರಿತು ಒಂದಕ್ಕಿಂತ ಹೆಚ್ಚು ದಾಖಲೆ ಒದಗಿಸಬೇಕು ಎಂದು ನಿಯಮ ಹೇಳುತ್ತದೆ. ಅಂದರೆ, ಯಾವುದಾದರೂ ಎರಡು ದಾಖಲೆ ನೀಡಿದರೆ ಸಾಕು. ಹಕ್ಕು ಮಾನ್ಯ ಮಾಡಬಹುದು. ಆದರೆ, ಅಧಿಕಾರಿಗಳು ಕಾಲಹರಣ ಮಾಡುತ್ತಿ ದ್ದಾರೆ. ಹಣಕ್ಕಾಗಿ ಹೀಗೆ ಮಾಡುತ್ತಿರುವ ದೂರುಗಳೂ ಬಂದಿವೆ. ಹೀಗೆ ಮಾಡಿ
ದರೆ ಮುಂದೆ ತಕ್ಕಶಾಸ್ತಿ ಅನುಭವಿಸ ಬೇಕಾಗುತ್ತದೆ ಎಂದು ಎಚ್ಚರಿಸಿದರು.

ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು, ಗಾಜನೂರಿನಿಂದ ಶಿವಮೊಗ್ಗಕ್ಕೆ ನೀರು ಪೂರೈಸುವ 24X7 ಯೋಜನೆ, ಅಂಗನವಾಡಿಗಳಿಗೆ ನೀರು ಪೂರೈಕೆ ಸೇರಿದಂತೆ ನಿಧಾನಗತಿಯ ಕಾಮಗಾರಿ ಕೈಗೊಂಡಿರುವ ಎಂಜಿನಿಯರ್ಗಳ ವಿರುದ್ಧ ಚಾಟಿ ಬೀಸಿದರು.

ಬೇಸಿಗೆಯಲ್ಲಿ ಕುಡಿಯುವ ನೀರಿನ ಕಾಮಗಾರಿಗಳಿಗಾಗಿ ₹ 3.5 ಕೋಟಿ ಬಿಡುಗಡೆಯಾಗಿತ್ತು. ₹ 4.57 ಕೋಟಿ ಖರ್ಚಾಗಿದ್ದು, ಇನ್ನೂ ₹ 3.07 ಕೋಟಿ ಅಗತ್ಯವಿದೆ ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ವಿಭಾಗದ ಎಂಜಿನಿಯರ್ ಹರೀಶ್ ಮಾಹಿತಿ ನೀಡಿದರು. ಯೋಜನೆಗಳಿಗೆ ಅಳವಡಿಸಿದ ಪೈಪ್ ಗಳ ಗುಣಮಟ್ಟ ಸರಿ ಇಲ್ಲ. ಅರ್ಧ ಅಥವಾ ಒಂದು ಅಡಿ ಆಳದಲ್ಲಿ ಅಳವಡಿಸಲಾಗಿದೆ. ಯೋಜನೆ ಆರಂಭದಲ್ಲೇ ತಾಂತ್ರಿಕ ಅಡಚಣೆಗಳಿಗೆ ಗಮನ ನೀಡಿಲ್ಲ. ಈ ಎಲ್ಲ ಕಾರಣಗಳಿಂದ ಎಡವಟ್ಟುಗಳಾಗಿವೆ ಎಂದು ದೂರಿದರು.

ಶಾಲಾ ಕಟ್ಟಡ ನಿರ್ಮಾಣವೂ ವಿಳಂಬ: ‘ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಯೋಜನೆ ಅಡಿ ಜಿಲ್ಲೆಯಲ್ಲಿ 82 ಶಾಲೆ ಗಳಿಗೆ ಕಟ್ಟಡ ನಿರ್ಮಿಸಲು ಅನುದಾನ ಮಂಜೂರಾಗಿತ್ತು. ಮೂರು ವರ್ಷಗಳಾ ದರೂ 19 ಶಾಲೆಗಳಲ್ಲಿ ಕಟ್ಟಡವೇ ಆರಂಭವಾಗಿಲ್ಲ. ಉಳಿದ ಶಾಲೆಗಳಲ್ಲಿ ಒಂದು ವರ್ಷದಿಂದ ಕಾಮಗಾರಿ ನಿಂತಿದೆ. ಗುತ್ತಿಗೆದಾರ ನಾಪತ್ತೆಯಾಗಿ ದ್ದಾನೆ’ ಎಂದು ಶಾಸಕರಾದ ಕೆ.ಬಿ.ಪ್ರಸನ್ನಕುಮಾರ್, ಶಾರದಾ ಪೂರ್ಯಾನಾಯ್ಕ, ಭಾನುಪ್ರಕಾಶ್ ಮತ್ತಿತರರು ದೂರಿದರು.

ಜಿಲ್ಲೆಯ 607 ಅಂಗನವಾಡಿಗಳಿಗೆ ಕೊಳವೆಬಾವಿ ಕೊರೆಸಿ ಮೂರು ವರ್ಷ ಗಳಾದರೂ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ನೀರು ಇದ್ದರೂ, ಕುಡಿಯಲು ಸಿಗುತ್ತಿಲ್ಲ ಎಂದು ಭಾನುಪ್ರಕಾಶ್ ಆರೋಪಿಸಿದರು.

ಈ ಹಿಂದೆ ಒಬ್ಬರಿಗೇ ಆ ಜವಾಬ್ದಾರಿ ನೀಡಲಾಗಿತ್ತು. ಹಾಗಾಗಿ, ವಿಳಂಬ ವಾಗಿದೆ. ತಿಂಗಳ ಅಂತ್ಯಕ್ಕೆ ಸಮಸ್ಯೆ ಬಗೆಹರಿಸಲಾಗುವುದು ಎಂದು ಸಿಇಒ ಮಾಹಿತಿ ನೀಡಿದರು.ಉದ್ಯೋಗ ಖಾತ್ರಿ ಯೋಜನೆ ಅಡಿ ಹಣ ಬಿಡುಗಡೆಯಾಗಿಲ್ಲ ಎಂಬ ಶಾಸಕ ಬಿ.ವೈ.ರಾಘವೇಂದ್ರ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕೇಂದ್ರದಿಂದ ಹಣ ಬಿಡುಗಡೆ ವಿಳಂಬವಾಗಿತ್ತು. ಹಾಗಾಗಿ, ಹಣ ನೀಡಿಲ್ಲ. ಸದ್ಯದಲ್ಲೇ ಸಮಸ್ಯೆ ಬಗೆಹರಿಯಲಿದೆ ಎಂದರು.

ಸಮಯಕ್ಕೆ ಸರಿಯಾಗಿ ಬೆಳೆವಿಮೆ ಹಾಗೂ ಬರ ಪರಿಹಾರದ ಹಣ ಬಂದಿಲ್ಲ ಎಂದು ಸೊರಬ ಶಾಸಕ ಮಧು ಬಂಗಾರಪ್ಪ ದೂರಿದರು.ಸೊರಬ ಪಟ್ಟಣ ಮುಖ್ಯ ರಸ್ತೆ ವಿಸ್ತರಿಸಲು ವಿಳಂಬ ಮಾಡುತ್ತಿರು ವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. 130 ಶಾಲಾ ಮಕ್ಕಳಿಗೆ ಬಸ್ಪಾಸ್ ನೀಡಲಾಗಿದೆ. ಆದರೆ, ಒಂದೇ ಬಸ್ ಬಿಟ್ಟಿದ್ದಾರೆ. ಹೀಗಾದರೆ ಮಕ್ಕಳು ಹೇಗೆ ಶಾಲೆಗೆ ಹೋಗಬೇಕು ಎಂದು ಕೆಎಸ್ಆರ್ಟಿಸಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ಶಿವಮೊಗ್ಗ ಸುತ್ತಮುತ್ತಲ ಗ್ರಾಮದ ಜನರು ಅಕ್ರಮ–ಸಕ್ರಮ ಅಡಿ 94 ಸಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, 94ಸಿಸಿ ಅಡಿ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ಎರಡೆರಡು ಬಾರಿ ಅರ್ಜಿ ಸಲ್ಲಿಸಲು ಕಷ್ಟವಾಗುತ್ತದೆ. 94ಸಿ ಅರ್ಜಿಗಳನ್ನೇ ಸಿಸಿ ಅರ್ಜಿಯಾಗಿ ಪರಿವರ್ತಿಸಬೇಕು ಎಂದು ಶಾಸಕಿ ಶಾರದಾ ಪೂರ್ಯಾನಾಯ್ಕ ಮನವಿ ಮಾಡಿದರು.

‘ಜೈಲಿಗೆ ಹೋಗುತ್ತಾರೆ ಬಿಡಿ’: ಪ್ರವಾಸೋದ್ಯಮ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಪರಿಶಿಷ್ಟರಿಗೆ ಮೀಸಲಾದ ಸಾಕಷ್ಟು ಹಣ ಬಳಕೆಯಾಗಿಲ್ಲ. ಈ ಹಿಂದಿನ ಸಭೆಗಳಲ್ಲಿ ಪರಿಶೀಲಿಸಲಿಲ್ಲವೇ ಎಂದು ವಿಧಾನ ಪರಿಷತ್ ಸದಸ್ಯ ಭಾನುಪ್ರಕಾಶ್ ಜಿಲ್ಲಾಧಿಕಾರಿಗೆ ಪ್ರಶ್ನಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ, ಎಲ್ಲ ಪರಿಶೀಲನೆ ಮಾಡಲಾಗಿದೆ. ಖರ್ಚು ಮಾಡದವರು ನಿಯಮದಂತೆ ಜೈಲಿಗೆ ಹೋಗುತ್ತಾರೆ ಎಂದರು.

ಜಮೀನಿನಲ್ಲಿ ಮನೆಕಟ್ಟಿಕೊಂಡ 400 ಕುಟುಂಬಗಳಿಗೆ ಇದುವರೆಗೂ ಕಂದಾಯ ಗ್ರಾಮದ ಸ್ಥಾನ ನೀಡಿಲ್ಲ, ಇದರಿಂದ ಆ ಜನರಿಗೆ ಸೌಲಭ್ಯ ಸಿಗುತ್ತಿಲ್ಲ ಎಂದು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ರೇಖಾ ಉಮೇಶ್ ದೂರಿದರು.

ಶಾಲೆಗಳಲ್ಲಿ ಶಿಕ್ಷಕರನ್ನು ಅವೈಜ್ಞಾನಿಕ ವಾಗಿ ವರ್ಗಾವಣೆ ಮಾಡಲಾಗಿದೆ. ಭದ್ರಾವತಿ ತಾಲ್ಲೂಕಿನಲ್ಲಿ ಖಾಲಿ ಇರುವ ಉಪ ತಹಶೀಲ್ದಾರ್ ಹುದ್ದೆ, ಆರ್ಐ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಕೆಡಿಪಿ ಸದಸ್ಯ ಗುಡಮಗಟ್ಟೆ ಮಲ್ಲಯ್ಯ ಒತ್ತಾಯಿಸಿದರು.ಹೊಳಲೂರು–ಸನ್ಯಾಸಿಕೋಡಮಗ್ಗಿ ಸಂಪರ್ಕಿಸುವ ತುಂಗಾಭದ್ರಾ ಸೇತುವೆ ಪೂರ್ಣಗೊಂಡಿದ್ದರೂ, ರಸ್ತೆ ವಿಸ್ತರಣೆ ಮಾಡಿಲ್ಲ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.