ಸೋಮವಾರ, ಜೂನ್ 14, 2021
27 °C

ಆಧಾರ್: 13.5 ಕೋಟಿ ಕಾರ್ಡ್ ವಿತರಣೆ: ನಿಲೇಕಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ದೇಶದಲ್ಲಿ ಈ ವರೆಗೆ 20 ಕೋಟಿ ಜನರು ಆಧಾರ್ ಯೋಜನೆಗೆ ನೋಂದಣಿಯಾಗಿದ್ದು, ಇದರಲ್ಲಿ 13.5 ಕೋಟಿ ಆಧಾರ್ ಕಾರ್ಡ್‌ಗಳ ವಿತರಣೆಯಾಗಿದೆ~ ಎಂದು ಆಧಾರ್ ಯೋಜನೆಯ ಮುಖ್ಯಸ್ಥ ನಂದನ್ ನಿಲೇಕಣಿ ಹೇಳಿದರು.ನಗರದಲ್ಲಿ ಶನಿವಾರ ಸಪ್ನ ಬುಕ್ ಹೌಸ್ ಆಯೋಜಿಸಿದ್ದ ಅವರ `ಇಮ್ಯಾಜಿನಿಂಗ್ ಇಂಡಿಯಾ~ ಕೃತಿಯ ಕನ್ನಡಾನುವಾದ `ಬಿಂಬ ಭಾರತ~ ಪುಸ್ತಕ ಬಿಡುಗಡೆ ಸಮಾರಂಭಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಆಧಾರ್ ಯೋಜನೆಯ ನೋಂದಣಿ ಪ್ರಕ್ರಿಯೆ ಸರಾಗವಾಗಿ ನಡೆದಿದೆ. ಪ್ರತಿ ತಿಂಗಳೂ ಎರಡು ಕೋಟಿ ಜನರನ್ನು ಆಧಾರ್ ಕಾರ್ಡ್‌ಗಾಗಿ ನೋಂದಣಿ ಮಾಡಲಾಗುತ್ತಿದೆ. ಏಪ್ರಿಲ್ ಅಂತ್ಯದಿಂದ 40 ಕೋಟಿ ಆಧಾರ್ ನೋಂದಣಿಯ ಗುರಿ ಹೊಂದಲಾಗಿದೆ.ಒಂದಕ್ಕಿಂತ ಹೆಚ್ಚು ಬಾರಿ ಆಧಾರ್‌ಗೆ ನೋಂದಣಿಯಾಗಿರುವವರ ಮಾಹಿತಿಗಳನ್ನು ಬಯೋ ಮೆಟ್ರಿಕ್ ವ್ಯವಸ್ಥೆಯ ಮೂಲಕ ಗುರುತಿಸಿ ತೆಗೆದುಹಾಕುವ ಕಾರ್ಯ ಕೈಗೊಳ್ಳಲಾಗಿದೆ. ಆಧಾರ್ ಕಾರ್ಡ್‌ನ ಮುದ್ರಣ ಗುಣಮಟ್ಟ ಹೆಚ್ಚಿಸಲು ತಲಾ ಐದು ಕೋಟಿ ರೂ.ಗಳ ಮೂರು ಹೊಸ ಮುದ್ರಣ ಯಂತ್ರಗಳನ್ನು ಖರೀದಿಸಲಾಗಿದೆ ಎಂದರು.

ಯೋಜನೆಗಾಗಿ ಪ್ರಾಧಿಕಾರಕ್ಕೆ ಯಾವುದೇ ಹಣಕಾಸಿನ ತೊಂದರೆ ಇಲ್ಲ. ಪ್ರಾಧಿಕಾರದ ಬಳಿ ಎಂಟು ಸಾವಿರ ಕೋಟಿ ರೂಪಾಯಿ ಅನುದಾನವಿದೆ~ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.