ಆಧುನಿಕತೆಯಿಂದ ಅನಾರೋಗ್ಯ
ಬೆಂಗಳೂರು: `ಸಮಾಜದಲ್ಲಿ ಆಧುನಿಕತೆ ಹೆಚ್ಚಿದಂತೆ ಅನಾರೋಗ್ಯವೂ ಹೆಚ್ಚಾಗುತ್ತಿದೆ. ಜನರು ಸಾಂಪ್ರದಾಯಿಕ ಆಹಾರ ಪದ್ಧತಿ ಕೈ ಬಿಟ್ಟು ಆಧುನಿಕ ಆಹಾರ ಪದ್ಧತಿಗೆ ಮೊರೆ ಹೋಗಿರುವುದು ಇದಕ್ಕೆ ಕಾರಣ~ ಎಂದು ಹೋಟೆಲ್ ಉದ್ಯಮಿ ಪಿ. ಸದಾನಂದ ಮಯ್ಯ ಪ್ರತಿಪಾದಿಸಿದರು.
ಉನ್ನತ ಶಿಕ್ಷಣ ಪರಿಷತ್ ಹಾಗೂ ತುಮಕೂರು ವಿಶ್ವವಿದ್ಯಾಲಯದ ಆಶ್ರಯದಲ್ಲಿ ಉನ್ನತ ಶಿಕ್ಷಣ ಪರಿಷತ್ನ ಸಭಾಂಗಣದಲ್ಲಿ ಶನಿವಾರ ನಡೆದ `ಆರೋಗ್ಯದಲ್ಲಿ ಆಹಾರ~ ಕುರಿತ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಅವರು ಉಪನ್ಯಾಸ ನೀಡಿದರು.
`ಆರೋಗ್ಯಕರ ದೇಹಕ್ಕೆ ಸಾಂಪ್ರದಾಯಿಕ ಆಹಾರ ಪದ್ಧತಿ ಅನುಸರಿಸುವುದು ಅಗತ್ಯ. ಆಧುನಿಕತೆಯ ಭರಾಟೆಗೆ ಮರುಳಾಗಿ ಆಹಾರ ಪದ್ಧತಿ ಬದಲಾಯಿಸಿದ್ದೇವೆ. ಈ ಹಿಂದೆ ಅಕ್ಕಿಯನ್ನು ಪಾಲಿಷ್ ಮಾಡುತ್ತಿರಲಿಲ್ಲ. ಕಾಫಿಯೂ ಕಲಬೆರಕೆ ಆಗಿದೆ. ಇದರಿಂದ ಅನಾರೋಗ್ಯ ಹೆಚ್ಚುತ್ತಿದೆ. ವಿಜ್ಞಾನದ ನ್ಯಾನೊ ತಂತ್ರಜ್ಞಾನದಂತೆ ಆಹಾರದಲ್ಲೂ ನ್ಯಾನೊ ತಂತ್ರಜ್ಞಾನ ಅಳವಡಿಕೆ ಅಗತ್ಯ~ ಎಂದರು.
ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಎಸ್.ಸಿ. ಶರ್ಮಾ, ಉನ್ನತ ಶಿಕ್ಷಣ ಪರಿಷತ್ ಕಾರ್ಯಕಾರಿ ನಿರ್ದೇಶಕ ಡಾ.ಕೆ.ಎಂ. ಕಾವೇರಿಯಪ್ಪ ಉಪಸ್ಥಿತರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.