ವಿರಾಜಪೇಟೆ: ವಿರಾಜಪೇಟೆಯ ಈಗಿನ ಇಕ್ಕಾಟ್ಟಾದ ಬಸ್ಸು ನಿಲ್ದಾಣವನ್ನು ಅಗಲೀಕರಣಗೊಳಿಸಿ, ವಿಸ್ತರಣೆ ಗೊಳಿಸುವುದರೊಂದಿಗೆ ಸೌಲಭ್ಯಗಳಿಂದ ಕೂಡಿದ ಆಧುನಿಕ ಬಸ್ಸು ನಿಲ್ದಾಣವನ್ನು ನಿರ್ಮಿಸಲಾಗುವುದು ಎಂದು ವಿಧಾನಸಭಾ ಅಧ್ಯಕ್ಷ ಕೆ.ಜಿ.ಬೋಪಯ್ಯ ತಿಳಿಸಿದರು.ವಿರಾಜಪೇಟೆ ಖಾಸಗಿ ಬಸ್ಸು ನಿಲ್ದಾಣದ ವಿಸ್ತರಣೆಗೆ ಭಾನುವಾರ ಗುದ್ದಲಿ ಪೂಜೆ ನೆರವೇರಿಸಿದ ಅವರು, ವಿರಾಜಪೇಟೆ ತಾಲ್ಲೂಕು ಕೇಂದ್ರದ ಮುಖ್ಯ ಪಟ್ಟಣ ಆಗಿದ್ದು, ಜನಸಂಖ್ಯೆ ಹಾಗೂ ಪ್ರಯಾಣಿಕರ ಸಂಖ್ಯೆಯ ಆಧಾರದ ಮೇಲೆ ಇಂದಿನ ಪರಿಸ್ಥಿತಿಯಲ್ಲಿ ವಿಶಾಲವಾದ ಬಸ್ಸು ನಿಲ್ದಾಣದ ಅವಶ್ಯಕತೆ ಇದೆ. ಬಸ್ಸು ನಿಲ್ದಾಣದೊಂದಿಗೆ ಆಧುನಿಕ ಶೌಚಾಲಯ ಹಾಗೂ ತಂಗುದಾಣ ನಿರ್ಮಾಣ, ಜೊತೆಯಲ್ಲಿಯೇ ನಿಲ್ದಾಣಕ್ಕೆ ಒತ್ತಾಗಿರುವ ಮಾರುಕಟ್ಟೆ ಸಂಕೀರ್ಣವನ್ನು ಅಭಿವೃದ್ಧಿ ಪಡಿಸಲಾಗುವುದು ಎಂದರು.

ಮುಖ್ಯಮಂತ್ರಿಯವರ ಪಟ್ಟಣ ಅಭಿವೃದ್ಧಿ ಯೋಜನೆಯಡಿಯಲ್ಲಿ ರೂ. ಒಂದು ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಬಸ್ಸು ನಿಲ್ದಾಣ ಹಾಗೂ ಮಾರುಕಟ್ಟೆ ಸಂಕೀರ್ಣದ ಪೂರ್ಣ ಅಭಿವೃದ್ಧಿಗಾಗಿ ನೀಲಿ ನಕಾಶೆ ತಯಾರಿಸಿದ್ದು, ಯೋಜನೆಗೆ ರೂ. 8 ಕೋಟಿ ವೆಚ್ಚವಾಗಲಿದೆ. ಉಳಿದ ರೂ. 7 ಕೋಟಿಯನ್ನು ಸರ್ಕಾರ ಹಂತ ಹಂತವಾಗಿ ಬಿಡುಗಡೆ ಮಾಡಲಿದೆ. ಈಗ ಬಿಡುಗಡೆಯಾದ ಹಣದಲ್ಲಿ ವ್ಯವಸ್ಥಿತ ಆಧುನಿಕ ನಿಲ್ದಾಣ ನಿರ್ಮಾಣವಾಗಲಿದೆ. ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಈ ಹಿಂದೆಯೇ ರೂ. 5 ಕೋಟಿ ಅನುದಾನದ ಹಣ ಬಿಡುಗಡೆಯಾಗಿದೆ. ಈ ಪೈಕಿ ಪಂಚಾಯಿತಿ ರೂ. 3.75 ಕೋಟಿಗೆ ಕ್ರಿಯಾ ಯೋಜನೆ ಸಿದ್ಧಪಡಿಸಿ ಕಾಮಗಾರಿಗೆ ಚಾಲನೆ ನೀಡಿದೆ.

ಇದರಲ್ಲಿ ರಸ್ತೆ ಹಾಗೂ ಕುಡಿಯುವ ನೀರಿಗೆ ಆದ್ಯತೆ ನೀಡಲಾಗಿದೆ. ಪಟ್ಟಣದ ಅಭಿವೃದ್ಧಿಗೆ ವಿವಿಧ ಯೋಜನೆಯಲ್ಲಿ ಅನುದಾನ ಬರುತ್ತಿದ್ದು ಪಟ್ಟಣ ಪಂಚಾಯಿತಿ, ನಿವಾಸಿಗಳಿಗೆ ಮೂಲ ಸೌಲಭ್ಯಗಳನ್ನು ಕಲ್ಪಿಸುವಂತಾಗಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.