ಶನಿವಾರ, ಮೇ 15, 2021
24 °C

ಆನ್‌ಲೈನ್‌ನಲ್ಲಿ ಟೈಟಾನಿಕ್ ದಾಖಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಪಿಟಿಐ): ಟೈಟಾನಿಕ್ ಹಡಗು ದುರಂತಕ್ಕೆ ಶತಮಾನ ಸಂದ ಪ್ರಯುಕ್ತವಾಗಿ ಅದಕ್ಕೆ ಸಂಬಂಧಿಸಿದ ಸುಮಾರು ಎರಡು ಲಕ್ಷಕ್ಕೂ ಹೆಚ್ಚಿನ ದಾಖಲೆಗಳನ್ನು ಇನ್ನು ಮುಂದೆ ಆನ್‌ನ್‌ನಲ್ಲಿ ಪಡೆಯಬಹುದಾಗಿದೆ.ಬ್ರಿಟಿಷ್ ಕೌಟುಂಬಿಕ ಇತಿಹಾಸವನ್ನು ಒಳಗೊಂಡ Ancestry.co.uk ಎಂಬ ವೆಬ್‌ಸೈಟ್‌ನಲ್ಲಿ ದುರಂತದಲ್ಲಿ ಮಡಿದ 1,500ಕ್ಕೂ ಹೆಚ್ಚು ಜನರು ಮತ್ತು ಬದುಕುಳಿದವರ ಮಾಹಿತಿಯೂ ಲಭ್ಯ. ಅಲ್ಲದೆ ದುರಂತದಲ್ಲಿ ಮಡಿದ ಹಡಗಿನ ಕ್ಯಾಪ್ಟನ್ ಎಡ್ವರ್ಡ್ ಸ್ಮಿತ್, ಅಮೆರಿಕದ ಉದ್ಯಮಿಗಳಾದ ಬೆಂಜಮಿನ್ ಗಗನ್‌ಹೇಮ್ ಮತ್ತು ಜಾನ್ ಜೇಕಬ್ ಆಸ್ಟರ್ ಅವರ ಉಯಿಲು ಮತ್ತಿತರ ವಿವರಗಳೂ ಲಭ್ಯ. ಟೈಟಾನಿಕ್ ಹಡಗು 1912 ಏಪ್ರಿಲ್ 15ರಂದು ತನ್ನ ಪ್ರಥಮ ಯಾನದ ವೇಳೆ ಹಿಮಗುಡ್ಡಕ್ಕೆ ತಗಲಿ ದುರಂತಕ್ಕೀಡಾಗಿತ್ತು. ಅಂದು ಹಡಗಿನಲ್ಲಿ ಪ್ರಯಾಣ ಮಾಡಿದವರ ಸಂಪೂರ್ಣ ಹೆಸರು, ವಯಸ್ಸು ಮುಂತಾದವುಗಳೂ ಆನ್‌ಲೈನ್‌ನಲ್ಲಿ ದೊರೆಯಲಿವೆ. ಮೇ 31ರವರೆಗೆ ಉಚಿತವಾಗಿ ಮಾಹಿತಿ ಪಡೆಯಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.