ಗುರುವಾರ , ಮಾರ್ಚ್ 4, 2021
18 °C

ಆನ್‌ಲೈನ್ ಆಭರಣ ಖರೀದಿಗೆ ‘ಕಾರಟ್‌ಲೇನ್’

ಮಂಜುಶ್ರೀ ಎಂ. ಕಡಕೋಳ Updated:

ಅಕ್ಷರ ಗಾತ್ರ : | |

ಆನ್‌ಲೈನ್ ಆಭರಣ ಖರೀದಿಗೆ ‘ಕಾರಟ್‌ಲೇನ್’

* ‘ಝರೋಕಾ’ ವಿನ್ಯಾಸದ ಒಡವೆಗಳ ವೈಶಿಷ್ಟ್ಯವೇನು?

‘ಝರೋಕಾ’ ಮಧ್ಯಕಾಲೀನ ರಜಪೂತರು ಹಾಗೂ ಮೊಘಲರ  ಭವ್ಯ ಮ್ಯೂರಲ್‌ಗಳಿಂದ ಪ್ರೇರಿತವಾಗಿರುವ ಸಂಗ್ರಹ. ಇಂದಿನ ಆಧುನಿಕ ಅಭಿರುಚಿಗೆ ತಕ್ಕಂತೆ ಈ ಒಡವೆಗಳನ್ನು ಮನೋಹರವಾಗಿ ವಿನ್ಯಾಸಗೊಳಿಸಲಾಗಿದೆ.  ‘ಝರೋಕಾ’ ವಿನ್ಯಾಸದ ಆಭರಣಗಳು ನಿಮ್ಮ ದಿನವನ್ನು ವಿಶೇಷವಾಗಿಸುತ್ತವೆ ಅನ್ನುವ ಭರವಸೆ ನಮ್ಮದು.* ಒಡವೆಗಳಂಥ ದುಬಾರಿ ವಸ್ತುಗಳನ್ನು  ಜನರು ಆನ್‌ಲೈನ್‌ನಲ್ಲಿ ಖರೀದಿಸಲು ಬಯಸುತ್ತಾರೆಯೇ?

ಖಂಡಿತಾ ಬಯಸುತ್ತಾರೆ. ಆನ್‌ಲೈನ್ ಒಡವೆ ಖರೀದಿ ಭಾರತದಲ್ಲಿ ಸಣ್ಣಮಟ್ಟದಲ್ಲಿದೆ. ಆದರೆ, ಗ್ರಾಹಕರ ಜೀವನಶೈಲಿ ಮತ್ತು ಆದ್ಯತೆ ದಿನದಿಂದ ದಿನಕ್ಕೆ ಬದಲಾವಣೆಗಳಾಗುತ್ತಿರುವ ಈ ದಿನಗಳಲ್ಲಿ ಆನ್‌ಲೈನ್ ಒಡವೆ ಖರೀದಿಗೆ ಭವಿಷ್ಯವಿದೆ. ಆಧುನಿಕ ಮಹಿಳೆಯರು ಭಾರವಾದ ಸಾಂಪ್ರದಾಯಿಕ ವಿನ್ಯಾಸಗಳ ಬದಲು ಆಧುನಿಕ– ಹಗುರ ವಿನ್ಯಾಸದ ಆಭರಣಗಳನ್ನು ಧರಿಸಲು ಬಯಸುತ್ತಾರೆ. ಅದನ್ನು ಕಾರಟ್ ಲೇನ್ ಆನ್‌ಲೈನ್‌ ಮೂಲಕ ಸುಗಮವಾಗಿಸಿದೆ.* ಆನ್‌ಲೈನ್ ಒಡವೆ ಖರೀದಿಯ ಲಾಭಗಳೇನು?

ಆನ್‌ಲೈನ್ ಖರೀದಿಯಲ್ಲಿ ಮೂರು ಲಾಭಗಳಿವೆ. ಮೊದಲನೆಯದಾಗಿ ಸಾಮಾನ್ಯವಾಗಿ ಒಡವೆ ಖರೀದಿಸಬೇಕಾದಲ್ಲಿ ಜ್ಯುವೆಲ್ಲರಿ ಅಂಗಡಿಗೆ ಹೋಗಬೇಕಾಗುತ್ತದೆ. ಆದರೆ, ಕಾರಟ್ ಲೇನ್‌ನಲ್ಲಿ ಆ ಪ್ರಮೇಯವೇ ಇಲ್ಲ. ಎರಡನೆಯದಾಗಿ ನೀವು ಎಲ್ಲೇ ಇದ್ದರೂ ನಿಮ್ಮ ಮೊಬೈಲ್‌ನಲ್ಲಿಯೇ ಕಾರಟ್‌ಲೇನ್ ಆಭರಣಗಳನ್ನು ನೋಡಬಹುದು. ಇದರಿಂದ ಗ್ರಾಹಕರ ಬಜೆಟ್‌ ಸರಿ ಹೊಂದುವ ಅವರಿಷ್ಟದ ಆಭರಣಗಳನ್ನು ಸುಲಭವಾಗಿ ಖರೀದಿಸಬಹುದು. ಮೂರನೆಯದಾಗಿ ನಾವು ಗ್ರಾಹಕರಿಗೆ ಹೆಚ್ಚು ಅನುಕೂಲಕರವಾದ, ಹೆಚ್ಚು ಉಳಿತಾಯದ ಸೇವೆಯನ್ನು ಒದಗಿಸುತ್ತೇವೆ.* ಒಡವೆಗಳ ಗುಣಮಟ್ಟ ಮತ್ತು ಪರಿಶುದ್ಧತೆಯ ಗ್ಯಾರಂಟಿ ಹೇಗೆ ನೀಡುವಿರಿ?

ಪ್ರಮಾಣೀಕೃತವಾದ ಒಡವೆಗಳನ್ನೇ ನಾವು ಮಾರಾಟ ಮಾಡುತ್ತೇವೆ. ನಮ್ಮಲ್ಲಿ ಮಾರಾಟಕ್ಕಿರುವ ವಜ್ರಗಳು ಜಿಐಎ, ಐಜಿಐ ಅಥವಾ ಎಚ್‌ಆರ್‌ಡಿಯ ಪ್ರಮಾಣ ಪಡೆದಿವೆ. ಎಲ್ಲಾ ಒಡವೆಗಳ ಮೇಲೂ ಬಿಐಎಸ್ ಹಾಲ್ ಮಾರ್ಕ್ ಇದ್ದೇ ಇರುತ್ತದೆ.* ಕಾರಟ್‌ಲೇನ್ ಒಡವೆಗಳಿಗೆ ಮರು ಮಾರಾಟ ಮೌಲ್ಯವಿದೆಯೇ?

ಹೌದು ಇದೆ. ಜೀವನಪರ್ಯಂತ ವಿನಿಮಯ ಪಾಲಿಸಿ ಇದೆ. ಒಡವೆಗಳ ಹೊಸ ವಿನ್ಯಾಸಗಳು ಮಾರುಕಟ್ಟೆಗೆ ಬಂದಂತೆ ಹಳೇ ಒಡವೆಗಳ ಮಾರಾಟ ಮಾಡುವುದು ಸಹಜ. ಹಾಗಾಗಿ, ಇದನ್ನು ನಾವು ಗಮನದಲ್ಲಿಟ್ಟುಕೊಂಡೇ ಮರು ಮಾರಾಟಕ್ಕೂ ಅನುಕೂಲ ಕಲ್ಪಿಸಿದ್ದೇವೆ.* ಕಾರಟ್‌ಲೇನ್ ಒಡವೆಗಳ ವೈಶಿಷ್ಟ್ಯವೇನು?

ಆಧುನಿಕ ಮಹಿಳೆಯರನ್ನೇ ಮನದಲ್ಲಿರಿಸಿಕೊಂಡು, ಸುಲಭವಾಗಿ ಕೈಗೆಟುಕುವ ದರದಲ್ಲಿ ದೊರೆಯುವ, ಧರಿಸಲು ಕಂಫರ್ಟೇಬಲ್ ಆಗಿರುವಂಥ ಆಭರಣಗಳು ಕಾರಟ್‌ಲೇನ್‌ನ ವೈಶಿಷ್ಟ್ಯ. ಕಾರಟ್‌ಲೇನ್ ಆರಂಭವಾಗಿ 8 ವರ್ಷವಾಗಿದೆ. ಭಾರತದಲ್ಲಿ ನಮ್ಮ 13 ರಿಟೇಲ್ ಅಂಗಡಿಗಳಿವೆ. ಇವು ಸಾಂಪ್ರದಾಯಿಕ ಬಂಗಾರದ ಅಂಗಡಿಗಳಿಗಿಂತ ಭಿನ್ನವಾಗಿವೆ. ನಮ್ಮ ಅಂಗಡಿಗಳಲ್ಲಿ ಆಭರಣಗಳನ್ನು ಗ್ರಾಹಕರು ನೇರವಾಗಿ ಮುಟ್ಟಿ ನೋಡಬಹುದು. ಇಲ್ಲಿ ಯಾವುದೇ ಗಾಜಿನ ತಡೆಗೋಡೆಗಳಿಲ್ಲ.ಅಷ್ಟೇ ಅಲ್ಲ, ಹೋಮ್ ಚಾನೆಲ್ ಅಪ್ಲಿಕೇಷನ್‌ ಮೂಲಕ ನಾವು ಗ್ರಾಹಕರ ಮನೆಗೇ ನೇರವಾಗಿ ಆಭರಣಗಳನ್ನು  ತೆಗೆದುಕೊಂಡು ಹೋಗಿ ತೋರಿಸುತ್ತೇವೆ.  ಗ್ರಾಹಕರು ಆ ಒಡವೆಗಳನ್ನು ಧರಿಸಿ ಮನೆಯಲ್ಲಿಯೇ ಟ್ರಯಲ್ ನೋಡಬಹುದು. ಭಾರತದಲ್ಲಿ ಈ ರೀತಿಯ ಪ್ರಯೋಗ ಮಾಡಿರುವುದರಲ್ಲಿ ಕಾರಟ್‌ಲೇನ್‌ ಮುಂಚೂಣಿಯಲ್ಲಿದೆ ಎಂಬುದೇ ನಮ್ಮ ಹೆಮ್ಮೆ.‘ದ ಪರ್ಫೆಕ್ಟ್‌ ಲುಕ್ ಆ್ಯಪ್’ ಎನ್ನುವ ಆ್ಯಪ್‌ ಅಭಿವೃದ್ಧಿಪಡಿಸಲಾಗಿದ್ದು,  ಇದರ ಮೂಲಕ ಗ್ರಾಹಕರು ತಾವು ಖರೀದಿಸಬಯಸುವ ಆಭರಣಗಳನ್ನು ಮೂರು ಭಿನ್ನ ಕೋನಗಳಲ್ಲಿ ನೋಡಬಹುದು. ಸದ್ಯಕ್ಕೆ ಇದು ಕಿವಿಯೋಲೆಗಳಿಗೆ ಮಾತ್ರ ಸೀಮಿತವಾಗಿದೆ.

ಹೆಚ್ಚಿನ ಮಾಹಿತಿಗೆ: www.carat*ane.com ವೆಬ್‌ಸೈಟ್ ನೋಡಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.