ಶನಿವಾರ, ಮೇ 15, 2021
25 °C

ಆಫ್ಘನ್ ಮಾಜಿ ಅಧ್ಯಕ್ಷ ರಬ್ಬಾನಿ ಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಬೂಲ್ (ಐಎಎನ್‌ಎಸ್): ಆಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಬುರ‌್ಹಾನುದ್ದೀನ್ ರಬ್ಬಾನಿ  ಮಂಗಳವಾರ ಸಂಜೆ ತಮ್ಮ ನಿವಾಸದ ಬಳಿ ಆತ್ಮಾಹುತಿ ದಾಳಿಯಲ್ಲಿ ಹತ್ಯೆಗೀಡಾಗಿದ್ದಾರೆ ಎಂದು ಆಫ್ಘನ್ ಸರ್ಕಾರ ಹೇಳಿದೆ.ತಾಲಿಬಾನ್ ಸಮಸ್ಯೆಗೆ ರಾಜಕೀಯ ಪರಿಹಾರ ಕಂಡು ಹಿಡಿಯಲು ಹಮೀದ್ ಕರ್ಜೈ ಸರ್ಕಾರ ರಚಿಸಿದ್ದ ಶಾಂತಿ ಮಂಡಳಿಯ ನೇತೃತ್ವವನ್ನು ರಬ್ಬಾನಿ ವಹಿಸಿದ್ದರು. ವರ್ಷದ ಹಿಂದೆಯೇ ಇದನ್ನು ರಚಿಸಿದ್ದು ಉದ್ದೇಶ ಸಾಧನೆಗಾಗಿ ಕೆಲ ಮಟ್ಟಿಗೆ ಮಾತ್ರ ಮುಂದುವರಿಯಲು ಸಾಧ್ಯವಾಗಿತ್ತು ಎಂದು ಹೆಸರು ಹೇಳಲು ಬಯಸದ ಮೂಲಗಳು ತಿಳಿಸಿವೆ.ತಾಲಿಬಾನ್ ಸಂಘರ್ಷಕ್ಕೆ ಮೊದಲು ರಬ್ಬಾನಿ ಆಫ್ಘನ್ ಸರ್ಕಾರದ ಅಧ್ಯಕ್ಷರಾಗಿದ್ದರು. ಕಾಬೂಲ್‌ನಿಂದ ಹೊರ ಹಾಕಲಾಗಿದ್ದ ನಂತರ ಅವರು  ಉತ್ತರ ಭಾಗದ ಮೈತ್ರಿಕೂಟ ಮುಖ್ಯಸ್ಥರಾಗಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.