ಮಂಗಳವಾರ, ಮೇ 18, 2021
24 °C

ಆಮೆಗತಿಯಲ್ಲಿ ಮುಖ್ಯ ರಸ್ತೆ ಅಭಿವೃದ್ಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಳಬಾಗಲು: ಕಳೆದ ಎಂಟು ವರ್ಷ ಗಳಿಂದ ಮಳೆಯೇ ಇರಲಿ, ಬಿಸಿಲೇ ಇರಲಿ ಅದರಲ್ಲಿಯೇ ಇವರದ್ದು ವ್ಯಾಪಾರ.    ಪಟ್ಟಣದ ಮುಖ್ಯರಸ್ತೆಯಲ್ಲಿ ದಶಕದಿಂದ ಸಣ್ಣಪುಟ್ಟ ವ್ಯಾಪಾರ ಮಾಡುತ್ತಾ ಜೀವನ ಸಾಗಿಸುತ್ತಿರುವ ಇವರು ಸೌಕರ್ಯಕ್ಕಾಗಿ ಚಾತಕ ಪಕ್ಷಿ ಯಂತೆ ಕಾಯುತ್ತಿದ್ದಾರೆ. ಈ ರಸ್ತೆ ವಿಸ್ತರಣೆಯು ರಾಷ್ಟ್ರೀಯ ಹೆದ್ದಾರಿ ಮೂಡುಗೆರೆಯವರೆಗೂ ಹೋಗಲಿದೆ ಎನ್ನಲಾಗಿತ್ತು. ಅದಕ್ಕಾಗಿ ಪಕ್ಕದ ಕಟ್ಟಡಗಳು ಸಹ ನೆಲ ಸಮ ವಾಗಿದ್ದವು. ಆಗ ಒಂದೆರಡು ಅಡಿಯಲ್ಲಿ ಯೇ ಕೆಲವರು ಬಹಳ ಪ್ರಯಾ ಸದಿಂದ ಪೆಟ್ಟಿಗೆ, ಸಣ್ಣ ಅಂಗಡಿಗಳನ್ನು ನಿರ್ಮಿಸಿ ಕೊಂಡರು. ಇದುವರೆಗೂ ಕೇವಲ ಭರವಸೆ ಸಿಗುತ್ತಿದೆಯೇ ಹೊರತು ಯಾವುದೂ ಕೂಡಾ ಕಾರ್ಯ ಗತವಾಗು ತ್ತಿಲ್ಲ ಎಂದು ಇಲ್ಲಿನ ವ್ಯಾಪಾರಸ್ಥರು ಅಲವತ್ತು ಕೊಳ್ಳುತ್ತಾರೆ.ರಸ್ತೆ ವಿಸ್ತೀರ್ಣವಾಗಬಹುದು ಎಂಬ ಕೂಗಿಗೆ ಯಾವುದೇ ಅಧಿಕೃತ ಪ್ರಕಟಣೆ ಬಂದಿಲ್ಲ. ಇದರಿಂದ ಕನಿಷ್ಠ ಅಗೆದು ಹಾಕಿ ದ ರಸ್ತೆಯನ್ನು ಯಾರು ಅಭಿವೃದ್ಧಿ ಪಡಿಸಬೇಕು ಎಂಬುದರ ಬಗ್ಗೆ ಯಾವ ಇಲಾಖೆಯು ಸರಿಯಾದ ಮಾಹಿತಿ ನೀಡುತ್ತಿಲ್ಲ ಎನ್ನುತ್ತಾರೆ ಸಾರ್ವಜನಿಕರು.`ಚರಂಡಿ ಹಾಗೂ ವಿದ್ಯುತ್ ಕಂಬಗಳ ಸ್ಥಳಾಂತರ ಬಿಟ್ಟರೇ ಮತ್ಯಾವ ಕಾಮಗಾರಿಯು ಮುಗಿದಿಲ್ಲ. ರಸ್ತೆಯೆಲ್ಲ ಉಬ್ಬುತಗ್ಗುಗಳಿಂದ ತುಂಬಿದೆ. ಮಳೆ ಗಾಲದಲ್ಲಿ ಇಲ್ಲಿ ಸಂಚಾರ ಮಾಡುವುದು ಕಷ್ಟದಾಯಕ. ರಸ್ತೆ ಯನ್ನು ವಿಸ್ತರಣೆ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅವರನ್ನು ಕೇಳಿದರೆ ತಮಗೂ ರಸ್ತೆಗೂ ಸಂಬಂಧವಿಲ್ಲ ಎನ್ನುತ್ತಾರೆ~ ಎಂದು ನಿವಾಸಿ ಕಿಶಾನ್‌ಲಾಲ್ `ಪ್ರಜಾವಾಣಿ~ಗೆ ಜತೆ ಹಂಚಿಕೊಂಡರು.ಇದೇ ಅಭಿಪ್ರಾಯವನ್ನು ಹಂಚಿ ಕೊಳ್ಳುವ ಇಲ್ಲಿ ನಿವಾಸಿಗಳಾದ ಧನಸೆಟ್, ಅನಿಲ್ ಅವರು ಸ್ಥಳೀಯ ಆಡಳಿತ ಹಾಗೂ ಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.