ಬೆಂಗಳೂರು: ಕೋಳಿ ಮೊಟ್ಟೆ ಧಾರಣೆ ಕಳೆದ ಕೆಲವು ವಾರಗಳಿಂದ ಸತತವಾಗಿ ಏರುತ್ತಲೇ ಇದ್ದು, ಆಮ್ಲೆಟ್ ಪ್ರಿಯರಿಗೆ ಬೆಲೆ ಏರಿಕೆ `ನುಂಗಲಾರದ ತುತ್ತಾಗಿದೆ~!

`ನ್ಯಾಷನಲ್ ಎಗ್ ಕೋ-ಆರ್ಡಿನೇಷನ್ ಕಮಿಟಿ~ (ಎನ್ಇಸಿಸಿ) ಬೆಂಗಳೂರು ವಲಯದಲ್ಲಿ ಶನಿವಾರ 100 ಕೋಳಿ ಮೊಟ್ಟೆಗಳ ಸಗಟು ಬೆಲೆ ರೂ.320ಕ್ಕೂ, ಚಿಲ್ಲರೆ ಮಾರಾಟದಲ್ಲಿ 10 ಮೊಟ್ಟೆಗಳ ದರ ರೂ.35ಕ್ಕೂ ಏರಿದೆ. ತಿಂಗಳ ಹಿಂದೆ ಅಂದರೆ ಮೇ 16ರಂದು ಕ್ರಮವಾಗಿ ರೂ.274 ಮತ್ತು ರೂ.30 ಇದ್ದಿತು.

ಈ ಬಗ್ಗೆ ಪ್ರಜಾವಾಣಿ ಜತೆ ಶನಿವಾರ ಸಂಜೆ ಮಾತನಾಡಿದ ಎನ್ಇಸಿಸಿ ಬೆಂಗಳೂರು ವಲಯದ ಅಧ್ಯಕ್ಷ ಬಿ.ಆರ್.ಸಾಯಿನಾಥ್ ಅವರು, `ಸಾಮಾನ್ಯವಾಗಿ ಈ ಋತುವಿನಲ್ಲಿ ಕೋಳಿಮೊಟ್ಟೆ ಧಾರಣೆ ಏರುಮುಖವಾಗಿಯೇ ಇರುತ್ತದೆ. ನಮ್ಮ ಮಟ್ಟಿಗೆ ಇದು ಮೊಟ್ಟೆ `ಬೆಲೆ ಏರಿಕೆ ಸೀಸನ್~. ಏನಿದ್ದರೂ ಸೆಪ್ಟೆಂಬರ್ ವೇಳೆಗಷ್ಟೇ ಧಾರಣೆ ಇಳಿಮುಖವಾಗಲಿದೆ~ ಎಂದರು.

`ಕೋಳಿ ಮೇವಿನ ಬೆಲೆಯಲ್ಲೂ ಭಾರಿ ಏರಿಕೆ ಆಗಿದೆ. ಜತೆಗೆ ಮೊಟ್ಟೆ ಉತ್ಪಾದನೆ ಪ್ರಮಾಣವೂ ಗಣನೀಯವಾಗಿ ಕುಸಿದಿದೆ. ಹಾಗೆಂದು ಮೊಟ್ಟೆಗೆ ಬೇಡಿಕೆಯೇನೂ ಕಡಿಮೆ ಆಗಿಲ್ಲ. ಬೇಡಿಕೆಗೆ ತಕ್ಕಷ್ಟು ಪೂರೈಕೆ ಇಲ್ಲಿದಿರುವುದರ ಪರಿಣಾಮಧಾರಣೆ ಸತತ ಏರುತ್ತಲೇ ಇದೆ~ ಎಂದು ಸದ್ಯದ ಮೊಟ್ಟೆ ಮಾರುಕಟ್ಟೆ ಪರಿಸ್ಥಿತಿ ವಿವರಿಸಿದರು.

`ಕೋಳಿ ಮೇವಿಗೆ ಮುಖ್ಯವಾಗಿ ಮುಸುಕಿನ ಜೋಳ, ಸೋಯಾ ಮತ್ತು ಕಡಲೆಕಾಯಿ ಹಿಂಡಿ ಬಳಸಲಾಗುತ್ತದೆ. ಈಗ ಇವೆಲ್ಲದರ ಬೆಲೆಯೂ ಗಗನಕ್ಕೇರಿದೆ. ಹಾಗಾಗಿ ಕೋಳಿ ಸಾಕಣೆ ವೆಚ್ಚವೂ ಭಾರಿ ಪ್ರಮಾಣದಲ್ಲಿ ಹೆಚ್ಚಿದೆ. ಕಾರ್ಮಿಕರ ಕೊರತೆಯೂ ಇದರೊಟ್ಟಿಗೆ ಸೇರಿಕೊಂಡು ಪೌಲ್ಟ್ರಿ ಮಾಲೀಕರನ್ನು ಸಂಕಷ್ಟಕ್ಕೆ ದೂಡಿದೆ~ ಎಂದು ಕುಕ್ಕುಟೋದ್ಯಮದ ಸಂಕಷ್ಟದ ಚಿತ್ರಣ ನೀಡಿದರು.

ನಾಮಕಲ್ ಸಮಸ್ಯೆ: ದಕ್ಷಿಣ ಭಾರತದಲ್ಲಿಯೇ ಅತಿ ಹೆಚ್ಚು ಮೊಟ್ಟೆ ಉತ್ಪಾದನೆ ಆಗುವುದು ಸೇಲಂ ಸಮೀಪದ ನಾಮಕಲ್ನಲ್ಲಿ. ಸಾಮಾನ್ಯವಾಗಿ ಇಲ್ಲಿ ನಿತ್ಯ 3.5 ಕೋಟಿಯಷ್ಟು ಕೋಳಿ ಮೊಟ್ಟೆಗಳು ಉತ್ಪಾದನೆ ಆಗುತ್ತವೆ.

ಇಲ್ಲಿಂದ ಬೆಂಗಳೂರಿಗೆ ಪ್ರತಿನಿತ್ಯ 20 ಲಕ್ಷ ಮೊಟ್ಟೆಗಳು ರವಾನೆ ಆಗುತ್ತವೆ. ಆದರೆ ಈಗ ನಾಮಕಲ್ನಲ್ಲಿ ಮೊಟ್ಟೆ ಉತ್ಪಾದನೆ ಭಾರಿ ಪ್ರಮಾಣದಲ್ಲಿ ಕುಸಿದಿದೆ. ಬೆಂಗಳೂರಿಗೆ ಬರುವ ಮೊಟ್ಟೆ ಸಂಖ್ಯೆಯೂ ಕಡಿಮೆ ಆಗಿದೆ. ಮೊಟ್ಟೆ ಬೆಲೆ ಏರಲು ಇದೂ ಒಂದು ಪ್ರಮುಖ ಕಾರಣ ಎಂದು ಸಾಯಿರಾಮ್ ವಿವರಿಸಿದರು.

ಮುಂಗಾರು ವಿಳಂಬವಾಗಿದೆ. ಬಿಸಿಲಿನ ಬೇಗೆಯೂ ಈಗ ಹೆಚ್ಚೇ ಇದೆ. ತಾಪಮಾನ ಜಾಸ್ತಿ ಇರುವುದರಿಂದಾಗಿ ಕೋಳಿಗಳು ಮೊಟ್ಟೆ ಇಡುವ ಪ್ರಮಾಣ ಕಡಿಮೆ ಆಗಿದೆ. ಇದೆಲ್ಲದರ ಮಧ್ಯೆ, ಕೆಲವೆಡೆ ಕೋಳಿಗಳಿಗೆ ರೋಗಗಳು ತಗುಲಿವೆ. `ಐಬಿಡಿ~ ಮತ್ತು `ರ್ಯಾನಿಕೇಟ್~ ಎಂಬ ರೋಗಬಾಧೆಯಿಂದ ಕೋಳಿಗಳು ನರಳುತ್ತಿವೆ. ಮೊಟ್ಟೆ ಉತ್ಪಾದನೆ ಮೇಲೆ ಈ ಅಂಶವೂ ದೊಡ್ಡ ಪರಿಣಾಮ ಬೀರಿದೆ ಎಂದರು.

ಲಾಭವೇನೂ ಇಲ್ಲ: ಈಗ ಮೊಟ್ಟೆ ಬೆಲೆಯಲ್ಲಿ ಏರಿಕೆ ಆಗಿರುವುದರಿಂದ ಪೌಲ್ಟ್ರಿ ಉದ್ಯಮಕ್ಕೇನೂ ಭಾರಿ ಲಾಭವಾಗದು. ಹೆಚ್ಚುವರಿಯಾಗಿ ಬಂದ ಹಣದಲ್ಲಿ ಅಧಿಕ ಭಾಗ ಮೇವಿನ ವೆಚ್ಚಕ್ಕೇ ಹೋಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.

`ಆಹಾರ ಪದಾರ್ಥಗಳ ಸಾಲಿನಲ್ಲಿ ಕೋಳಿ ಮೊಟ್ಟೆ ಧಾರಣೆಯಷ್ಟೇ ಏರಿಕೆ ಆಗಿಲ್ಲ. ತರಕಾರಿ ಬೆಲೆಗಳೂ ಗಗನಕ್ಕೇರಿವೆ. ಬೀನ್ಸ್ ಕೆ.ಜಿ.ಗೆ ರೂ.60-80ರಷ್ಟಿದೆ. ತರಕಾರಿಗೆ ಹೋಲಿಸಿದರೆ ಮೊಟ್ಟೆಯೇ ಸ್ವಲ್ಪ ಅಗ್ಗವಾಗಿದೆ~ ಎಂದು ಗಮನ ಸೆಳೆದ ಈ ಅನುಭವಿ ಕುಕ್ಕಟೋದ್ಯಮಿ, `ತರಕಾರಿಗೆ ಹೋಲಿಸಿದಲ್ಲಿ ಮೊಟ್ಟೆಯಲ್ಲಿ ವಿಟಮಿನ್ ಹೇರಳವಾಗಿವೆ~ ಎಂದೂ ಪ್ರತಿಪಾದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.