ಸೋಮವಾರ, ಮೇ 17, 2021
21 °C

ಆಯ್ದ ಕಂಪೆನಿ ಬೀಜ ಬಿತ್ತನೆಗೆ ಶಿಫಾರಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಮಾರುಕಟ್ಟೆಯಲ್ಲಿ ಲಭ್ಯ ಇರುವ ಬಿಟಿ ಹತ್ತಿ ಹೈಬ್ರೀಡ್ ವಿವಿಧ ತಳಿಗಳನ್ನು ರಾಯಚೂರು ಕೃಷಿ ವಿಶ್ವವಿದ್ಯಾಲಯದ ಸಂಶೋಧನಾ ಕೇಂದ್ರಗಳಲ್ಲಿ 2012-13ರಲ್ಲಿ ಕೂಲಂಕುಷವಾಗಿ ಪರೀಕ್ಷೆ ಮಾಡಲಾಗಿದೆ.

ಇವು ಹೆಚ್ಚು ಇಳುವರಿ ತಳಿಗಳಾಗಿದ್ದು, ಹೈದರಾಬಾದ್ ಕರ್ನಾಟಕ ಭಾಗದ ಆರು ಜಿಲ್ಲೆಗಳಲ್ಲಿ ಬೆಳೆಯಲು ಈ ತಳಿ ಯೋಗ್ಯ ಇವೆ ಎಂದು ಕೃಷಿ ವಿವಿ ಸಂಶೋಧನಾ ಕೇಂದ್ರ ನಿರ್ದೇಶಕರು ತಿಳಿಸಿದ್ದಾರೆ.

ಜಾಡೋ (ಕೆಸಿಎಚ್-14ಕೆ 59),ಬಿಜಿ-11, ಬಿಂದಾಸ್ 7213, ಮಾಲಿನಿ(ಎನ್‌ಸಿಎಸ್ 9015),ಪೋಲಾರಿಸ್(ಜೆಡ್‌ಸಿಎಸ್ 9015), ಆರ್ಯಾ 12, ಸರಸ್ವತಿ, ಅಜೀತ್-33, ಎಟಿಎಂ, ಡೆನಿಮ್(ಪಿಆರಸಿಎಚ್-703), ಮಗಾಗಯ ಎಸಿಎಚ್-111, ಎಂಆರ್‌ಸಿ-7351, 7347, 7201, 7383,  ಎನ್‌ಎಸ್‌ಸಿ -955 ಮತ್ತು ಎಸ್‌ಪಿ +7149 ಹಾಗೂ ರಾಶಿ-668 ಈ ತಳಿಗಳು ಹೆಚ್ಚಿನ ಇಳುವರಿ ನೀಡುವಂತಾಗಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.