ಆರಾಧನೆಗೆ ಭರದ ಸಿದ್ಧತೆ

7

ಆರಾಧನೆಗೆ ಭರದ ಸಿದ್ಧತೆ

Published:
Updated:
ಆರಾಧನೆಗೆ ಭರದ ಸಿದ್ಧತೆ

ರಾಯಚೂರು: ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿಗಳ 341ನೇ ಆರಾಧನೆ ಮಹೋತ್ಸವ ಆಗಸ್ಟ್ ಮೊದಲ ವಾರ ನಡೆಯಲಿದ್ದು, ಮಂತ್ರಾಲಯ ಮಠದಲ್ಲಿ ಆರಾಧನಾ ಮಹೋತ್ಸವ ಪೂರ್ವ ಸಿದ್ಧತೆ ಚಟುವಟಿಕೆಗಳು ಗರಿಗೆದರಿವೆ.ಈ ವರ್ಷ ~ರಾಘವೇಂದ್ರಸ್ವಾಮಿಗಳ ಮಠದ ಆವರಣ~ ಸಂಪೂರ್ಣ ಜಗಮಗಿಸುವ ವಿಶೇಷ ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಮಾಡಲಾಗುತ್ತಿದೆ. ಇದಕ್ಕಾಗಿ ವಿದ್ಯುತ್ ದೀಪಾಲಂಕಾರ ಕ್ಷೇತ್ರದಲ್ಲಿ ಪ್ರಸಿದ್ಧಿ ಪಡೆದ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯ ಕೆನರಾ ಲೈಟಿಂಗ್ಸ್ ಸಂಸ್ಥೆಯು ವಿದ್ಯುತ್ ದೀಪಾಲಂಕಾರ ಜವಾಬ್ದಾರಿ ವಹಿಸಿಕೊಂಡಿದೆ.ಮಂತ್ರಾಲಯ ಮಠವು ಈ ವಿಶೇಷ ವಿದ್ಯುತ್ ದೀಪಾಲಂಕಾರಕ್ಕೆ 50 ಲಕ್ಷ ವೆಚ್ಚ ಮಾಡುತ್ತಿದೆ. ಮಂತ್ರಾಲಯ ಮಠಕ್ಕೆ ಮಂಗಳವಾರ ಕೆನರಾ ಲೈಟಿಂಗ್ಸ್ ಸಂಸ್ಥೆಯ ತಾಂತ್ರಿಕ ಸಿಬ್ಬಂದಿ, ಇತರ ಸಿಬ್ಬಂದಿ ಧಾವಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry