ಶನಿವಾರ, ಮಾರ್ಚ್ 6, 2021
29 °C

ಆರು ಜನ ಸುಲಿಗೆಕೋರರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆರು ಜನ ಸುಲಿಗೆಕೋರರ ಬಂಧನ

ಆನೇಕಲ್‌: ತಾಲ್ಲೂಕಿನ ಜಿಗಣಿ ಹಾಗೂ ಎಲೆಕ್ಟ್ರಾನಿಕ್‌ ಸಿಟಿಯ ಕೈಗಾ­ರಿಕಾ ಪ್ರದೇಶಗಳಲ್ಲಿ ಸಾರ್ವಜನಿ­ಕ­ರನ್ನು ಸುಲಿಗೆ ಮಾಡುತ್ತಿದ್ದ ಆರು ಜನ ದುಷ್ಕರ್ಮಿಗಳನ್ನು ಜಿಗಣಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.ಆರೋಪಿಗಳನ್ನು ಬೆಂಗಳೂರಿನ ಹೊಂಗ­ಸಂದ್ರದ ಬಾಲಾಜಿ ಬಡಾವ­ಣೆಯ ಎಂ. ಪ್ರತಾಪ್‌ (20), ರಾಜೇಂದ್ರ ಪ್ರಸಾದ್‌ (18), ರಂಜಿತ್ ಕುಮಾರ್‌ ಅಲಿಯಾಸ್‌ ಬಂಬು (19), ಅಜಯ್‌ಕುಮಾರ್‌ (19), ವಿರಾ­ಟ್‌ನಗರದ ಶಂಕರ್‌ (19) ಮತ್ತು ಮಾಸ್ತೇನಹಳ್ಳಿ ದಿನ್ನೆಯ ಡ್ರೈವರ್ ಶ್ರೀಕಾಂತ್‌ (19) ಎಂದು ಗುರುತಿಸಲಾಗಿದೆ.‘ಆರೋಪಿ­ಗಳಾದ ಜೋಸೆಫ್‌, ವೆಂಕಟೇಶ್‌ ಮತ್ತು ಚಂದ್ರಶೇಖರ್ ತಲೆ ಮರೆಸಿ­ಕೊಂಡಿ­ದ್ದಾರೆ. ಅವರನ್ನು ಶೀಘ್ರವೇ ಪತ್ತೆಹಚ್ಚಲಾಗುವುದು’ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್ಪಿ ರಮೇಶ್‌ ಬಾನೋಟ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.