ಬುಧವಾರ, ಮೇ 12, 2021
19 °C

ಆರೋಗ್ಯವೇ ಶ್ರೇಷ್ಠ ಸಂಪತ್ತು : ಬೆನ್ನೂರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಜೇಂದ್ರಗಡ: ಆರೋಗ್ಯ ಸಂಪತ್ತಿನ ಮುಂದೆ ಉಳಿದೆಲ್ಲ ಸಂಪತ್ತುಗಳು ಗೌಣವಾಗುತ್ತವೆ. ಈ ಹಿನ್ನೆಲೆಯಲ್ಲಿ ಜನರು ಆರೋಗ್ಯ ರಕ್ಷಣೆಯತ್ತ ಆಸಕ್ತಿ ವಹಿಸಬೇಕು ಎಂದು ಹಿರಿಯ ಆರೋಗ್ಯ ಸಹಾಯಕ ವಿ.ಡಿ.ಬೆನ್ನೂರ ತಿಳಿಸಿದರು.ಇಲ್ಲಿಗೆ ಸಮೀಪದ ಸೂಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈಚೆಗೆ ಜರುಗಿದ `ಸಮುದಾಯ ಆರೋಗ್ಯ ದಿನಾಚರಣೆ~ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಅವರು ಮಾತನಾ ಡಿದರು.ಗ್ರಾಮೀಣ ಭಾಗದ ಜನತೆಯ ಪಾಲಿಗೆ ಸರಕಾರಿ ಆಸ್ಪತ್ರೆಗಳು ಜೀವನಾ ಡಿಗಳಾಗಿವೆ. ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಿಂದಾಗಿ ಆಸ್ಪತ್ರೆ ಗಳ ಚಿತ್ರಣವೇ ಬದಲಾಗಿದೆ. ಎನ್‌ಆರ್‌ಎಚ್‌ಎಂ ನಿಂದಾಗಿ 24x7 ಮಾನವ ಸಂಪನ್ಮೂಲ ಪೂರೈಸಲಾಗಿದೆ.ಹೆರಿಗೆ ಸೌಲಭ್ಯ, ಆಶಾ ಕಾರ್ಯಕರ್ತೆಯರ ನೇಮಕ, ಜನನಿ ಸುರಕ್ಷಾ ಯೋಜನೆ, ಪ್ರಸೂತಿ ಹಾರೈಕೆ, ಮಡಿಲು ಕಿಟ್ಟು ಯೋಜನೆ ಸೇರಿದಂತೆ ಹತ್ತಾರು ಸೌಲಭ್ಯಗಳು ಇದ್ದು, ಜನರು ಯೋಜನೆ ಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಅವರು ತಿಳಿಸಿದರು.ವೈದ್ಯಾಧಿಕಾರಿ ಪಿ.ಕೆ. ಪಾಗಿ ಮಾತನಾಡಿ, ವಾಜಪೇಯಿ ಆರೋಗ್ಯ ಶ್ರೀ ಯೋಜನೆ ಅಡಿಯಲ್ಲಿ ಅತ್ಯುನ್ನತ ಗುಣಮಟ್ಟದ ಆಸ್ಪತ್ರೆಗಳಲ್ಲಿ ಗರಿಷ್ಠ ರೂ. 1.5ಲಕ್ಷ ವೆಚ್ಚದಲ್ಲಿ ಗಂಭೀರ ಕಾಯಿಲೆ ಗಳಿಗೆ ಸೂಕ್ತ ಚಿಕಿತ್ಸೆ ದೊರೆಯುವ ಸೌಲಭ್ಯವನ್ನು ಸರ್ಕಾರ ಜಾರಿಗೆ ತಂದಿದೆ.ಜೊತೆಗೆ ಸುವರ್ಣ ಆರೋಗ್ಯ ಚೈತನ್ಯ ಕಾರ್ಯಕ್ರಮದ ಅಡಿಯಲ್ಲಿ 1ರಿಂದ 10ನೇ ತರಗತಿ ವಿದ್ಯಾರ್ಥಿಗಳ ಗಂಭೀರ ಕಾಯಿಲೆಗಳಿಗೆ ಉನ್ನತ ಮಟ್ಟದ ಉಚಿತ ಚಿಕಿತ್ಸೆಯು ಸಿಗಲಿದೆ ಎಂದು ಹೇಳಿದರು.ಸರ್ಕಾರ 2011-12ನೇ ವರ್ಷವನ್ನು `ರಾಷ್ಟ್ರೀಯ ಲಸಿಕಾ ವರ್ಷ~ ವೆಂದು ಘೋಷಿಸಿದೆ. ಇದರ ಅಡಿಯಲ್ಲಿ ಪ್ರತಿಯೊಂದು ಗ್ರಾಮದ ಜನರು `ನಮ್ಮ ಗ್ರಾಮದಲ್ಲಿ ಏಳು ಮಾರಕ ರೋಗಗಳ ನಿರೋಧಕ ಲಸಿಕೆಯಿಂದ ವಂಚಿತರಾ ಗಿರುವ ಯಾವುದೇ ಮಗು ಇರುವುದಿಲ್ಲ~ ಎಂಬ ಸಂದೇಶವನ್ನು ಸಾರಬೇಕು.ಅದಕ್ಕೆ ತಕ್ಕಂತೆ ಎಲ್ಲ ಮಕ್ಕಳಿಗೂ ಸಕಾಲದಲ್ಲಿ ಲಸಿಕೆ ಕೊಡೆಸಿ ಅವರ ಬಾಲ್ಯದ ಆರೋಗ್ಯವನ್ನು ಶ್ರೀಮಂತಗೊಳಿಸಬೇಕು ಎಂದು ಅವರು ಗ್ರಾಮಸ್ಥರಿಗೆ ಸಲಹೆ ನೀಡಿದರು.ಗ್ರಾ.ಪಂ. ಉಪಾಧ್ಯಕ್ಷ ವೀರಣ್ಣ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತ ನಾಡಿದರು. ತಾ.ಪಂ.ಸದಸ್ಯೆ ಶಂಕ್ರಮ್ಮ ಶೇಖರಗೌಡ ಪಾಟೀಲ, ಗ್ರಾ.ಪಂ.ಸದಸ್ಯ ಬಾಬುಗೌಡ ದೇಸಾಯಿ, ಎಂ.ಕೆ. ಜುಕ್ತಿಹಿರೇಮಠ, ಶರಣಪ್ಪ ವಡ್ಡರ, ಸುಜಾತಾ ಹಿರೇಹಾಳ, ಬಸವರಾಜ ಮಾದರ, ಕಮಲಾಕ್ಷಿ ಸೊಬಗಿನ, ಪಿ.ಎ. ಪಾಟೀಲ, ಗಿರಿಜಮ್ಮ ಹೂಗಾರ ಮತ್ತಿ ತರರು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಗ್ರಾ.ಪಂ. ಸದ ಸ್ಯರು, ಆಶಾ ಕಾರ್ಯಕರ್ತೆಯರು, ಶಾಲಾ ಕಾಲೇಜುಗಳ ಮುಖ್ಯಸ್ಥರು. ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು. ಎಸ್.ಡಿ.ಬೆನ್ನೂರ ಸ್ವಾಗತಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.