ನವದೆಹಲಿ (ಪಿಟಿಐ): ಭಾರತದ ಅಭಿಷೇಕ್ ವರ್ಮಾ ಬ್ಯಾಂಕಾಕ್ನಲ್ಲಿ ನಡೆಯುತ್ತಿರುವ ಏಷ್ಯನ್ ಗ್ರ್ಯಾನ್ ಪ್ರಿ ಆರ್ಚರಿ ಚಾಂಪಿಯನ್ಷಿಪ್ನ ಫೈನಲ್ ಪ್ರವೇಶಿಸಿದ್ದು, ಚಿನ್ನದ ಪದಕದ ಭರವಸೆ ಮೂಡಿಸಿದ್ದಾರೆ.

ಪುರುಷರ ಕಾಂಪೌಂಡ್ ವೈಯಕ್ತಿಕ ವಿಭಾಗದ ಸ್ಪರ್ಧೆಯಲ್ಲಿ ಅಭಿಷೇಕ್ ಚಿನ್ನದ ಪದಕಕ್ಕಾಗಿ ಇರಾನ್ನ ಇಸ್ಮಾಯಿಲ್ ಎಬಾದಿ ಜೊತೆ ಪೈಪೋಟಿ ನಡೆಸುವರು. ಶುಕ್ರವಾರ ನಡೆದ ಎಲಿಮಿನೇಷನ್ ಸುತ್ತಿನಲ್ಲಿ ಅಭಿಷೇಕ್ ಎರಡು ಸಲ 150 ಪಾಯಿಂಟ್ ಗಿಟ್ಟಿಸಿ ಫೈನಲ್ ಪ್ರವೇಶಿಸಿದರು.

ಇದೇ ವಿಭಾಗದಲ್ಲಿ ಕಂಚಿನ ಪದಕಕ್ಕಾಗಿ ನಡೆಯುವ ಪಂದ್ಯದಲ್ಲಿ ಭಾರತದ ಸಂದೀಪ್ ಕುಮಾರ್ ಥಾಯ್ಲೆಂಡ್ನ ದೆಚಾಯ್ ತೆಪ್ಚಾಯ್ ಅವರ ಸವಾಲನ್ನು ಎದುರಿಸುವರು. ಮಹಿಳೆಯರ ರಿಕರ್ವ್ ವಿಭಾಗದಲ್ಲಿ ಕಂಚಿನ ಪದಕಕ್ಕಾಗಿ ನಡೆಯುವ ಪಂದ್ಯದಲ್ಲಿ ಭಾರತದ ಎಲ್. ಬೊಂಬ್ಯಾಲ ದೇವಿ ಮತ್ತು ಜಪಾನ್ನ ಕವೊರಿ ಕವಾನಾಕ ಪೈಪೋಟಿ ನಡೆಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.