ಮಂಗಳವಾರ, ಜನವರಿ 28, 2020
19 °C

ಆರ್ಚರಿ: 8ರಂದು ಆಯ್ಕೆ ಟ್ರಯಲ್ಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜೇಮಷೆಡ್‌ಪುರದಲ್ಲಿ ಜನವರಿ 24ರಿಂದ 29ರ ವರೆಗೆ ನಡೆಯಲಿರುವ 32ನೇ ಸೀನಿಯರ್ ರಾಷ್ಟ್ರೀಯ ಆರ್ಚರಿ ಚಾಂಪಿಯನ್‌ಷಿಪ್‌ಗೆ (ರಿಕರ್ವ್ ಹಾಗೂ ಕಾಂಪೌಂಡ್ ವಿಭಾಗ) ಕರ್ನಾಟಕ ತಂಡವನ್ನು ಆಯ್ಕೆ ಮಾಡಲು ಕರ್ನಾಟಕ ಅಮೆಚೂರ್ ಆರ್ಚರಿ ಸಂಸ್ಥೆ ಇದೇ 8ರಂದು (ಭಾನುವಾರ) ಆಯ್ಕೆ ಟ್ರಯಲ್ಸ್ ಆಯೋಜಿಸಿದೆ.ನೋಂದಾಯಿತ ಆರ್ಚರಿ ಸಂಸ್ಥೆಗಳು ಈ ಟ್ರಯಲ್ಸ್‌ನಲ್ಲಿ ಪಾಲ್ಗೊಳ್ಳಬಹುದಾಗಿದೆ. ಕಂಠೀರವ ಕ್ರೀಡಾಂಗಣದ ಆರ್ಚರಿ ಅಂಗಳದಲ್ಲಿ ಈ ಟ್ರಯಲ್ಸ್ ಬೆಳಿಗ್ಗೆ 8.30ರಿಂದ ನಡೆಯಲಿದೆ.ಅನಂತರಾಜು, ಗೌರವ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಅಮೆಚೂರ್ ಆರ್ಚರಿ ಸಂಸ್ಥೆ, ಕರ್ನಾಟಕ ಒಲಿಂಪಿಕ್ ಸಂಸ್ಥೆ, ಕೊಠಡಿ ಸಂಖ್ಯೆ 3, ಭಾರತೀಯ ಕ್ರೀಡಾ ಪ್ರಾಧಿಕಾರ ಕಟ್ಟಡ, ಶ್ರೀ ಕಂಠೀರವ ಕ್ರೀಡಾಂಗಣ, ಕಸ್ತೂರಿ ಬಾ ರಸ್ತೆ, ಬೆಂಗಳೂರು. ಈ ವಿಳಾಸಕ್ಕೆ ಸಂಪರ್ಕಿಸಬಹುದು.

ಪ್ರತಿಕ್ರಿಯಿಸಿ (+)