ಶುಕ್ರವಾರ, ಜನವರಿ 17, 2020
20 °C

ಆರ್‌ಟಿಪಿಎಸ್: 2 ಘಟಕ ಬಂದ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು:  ಕಲ್ಲಿದ್ದಲು ಕೊರತೆ ಹಾಗೂ ತಾಂತ್ರಿಕ ಸಮಸ್ಯೆ ಕಾರಣದಿಂದ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಿದ್ದ ಆರ್‌ಟಿಪಿಎಸ್‌ನ 6 ಮತ್ತು 8 ಈ ಎರಡು ಘಟಕಗಳಲ್ಲಿ 6ನೇ ಘಟಕವು ಸೋಮವಾರ ಮಧ್ಯಾಹ್ನ ವಿದ್ಯುತ್ ಉತ್ಪಾದನೆ ಆರಂಭಿಸಿತು. ಆದರೆ ಆವಿ ಪೂರೈಸುವ ಕೊಳವೆಯಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡು 2ನೇ ಘಟಕವು ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಿದೆ.ಒಟ್ಟು 8 ಘಟಕಗಳಲ್ಲಿ 6 ಘಟಕಗಳು ಸದ್ಯ ವಿದ್ಯುತ್ ಉತ್ಪಾದಿಸುತ್ತಿವೆ. ಸೋಮವಾರ ಇವು 1,200 ಮೆಗಾವಾಟ್ ವಿದ್ಯುತ್ ಉತ್ಪಾದಿಸಿವೆ. 10ರಿಂದ 15 ಸಾವಿರ ಮೆಟ್ರಿಕ್ ಟನ್ ಕಲ್ಲಿದ್ದಲು ಸಂಗ್ರಹ ಇದೆ. ನಿತ್ಯ ಆರೇಳು ರೇಕ್ ಕಲ್ಲಿದ್ದಲು ಪೂರೈಕೆ ಆಗುತ್ತಿದೆ ಎಂದು ಆರ್‌ಟಿಪಿಎಸ್‌ನ ಅಧಿಕಾರಿಗಳು ತಿಳಿಸಿದ್ದಾರೆ.

 

ಪ್ರತಿಕ್ರಿಯಿಸಿ (+)