ಶುಕ್ರವಾರ, ಮೇ 7, 2021
24 °C

ಆರ್‌ಡಬ್ಲ್ಯುಎಫ್ ತಂಡಕ್ಕೆ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರೈಲ್ವೆ ಗಾಲಿ ಕಾರ್ಖಾನೆ (ಆರ್‌ಡಬ್ಲ್ಯುಎಫ್) ತಂಡದವರು ಇಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯ ಹಾಕಿ ಸಂಸ್ಥೆ ಆಶ್ರಯದ `ಎ~ ಡಿವಿಷನ್ ಹಾಕಿ ಲಿಗ್ ಚಾಂಪಿಯನ್‌ಷಿಪ್‌ನಲ್ಲಿ ಅರ್ಹ ಜಯ ಪಡೆದು ಪೂರ್ಣ ಪಾಯಿಂಟ್ಸ್ ಸಂಗ್ರಹಿಸಿದರು.ಅಕ್ಕಿತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ  ಕ್ರೀಡಾಂಗಣದಲ್ಲಿ  ಮಂಗಳವಾರ ನಡೆದ ಪಂದ್ಯದಲ್ಲಿ ಆರ್‌ಡಬ್ಲ್ಯುಎಫ್ ತಂಡ 2-0 ಗೋಲುಗಳಿಂದ ಸಿನರ್ಜಿ ಹಾಕಿ ಕ್ಲಬ್ ಮೇಲೆ ಗೆಲುವು ಪಡೆಯಿತು.ವಿಜಯಿ ತಂಡಕ್ಕೆ ಎರಡು ಗೋಲುಗಳು ಪಂದ್ಯದ ಉತ್ತರಾರ್ಧದಲ್ಲಿ ಬಂದುವು. ಪ್ರದೀಪ್ ಹಾಗೂ ಜಯರಾಜ್ ಗೋಲು ತಂದಿತ್ತರು.ನಾಳೆ (ಬುಧವಾರ) ಮಧ್ಯಾಹ್ನ 2-30ಕ್ಕೆ ಎಂಇಜಿ ಬಾಯ್ಸ-ಬಿಎಸ್‌ಎನ್‌ಎಲ್ ಹಾಗೂ ಮಧ್ಯಾಹ್ನ 4-00ಕ್ಕೆ ಆರ್‌ಬಿಐ-ಆರ್‌ಡಬ್ಲ್ಯುಎಫ್ ನಡುವೆ ಪಂದ್ಯ ನಡೆಯಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.