ಶನಿವಾರ, ಜೂನ್ 19, 2021
27 °C

ಆರ್‌ಬಿಐ: ಸಿಆರ್‌ಆರ್ ಕಡಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಉದಾರವಾಗಿ ಸಾಲ ನೀಡಲು ವಾಣಿಜ್ಯ ಬ್ಯಾಂಕ್‌ಗಳ ಬಳಿ ಹೆಚ್ಚು ಹಣ ಲಭ್ಯವಾಗುವುದಕ್ಕೆ ಪೂರಕವಾಗಿ ಭಾರತೀಯ ರಿಸರ್ವ್ ಬ್ಯಾಂಕ್, ಶುಕ್ರವಾರ ನಗದು ಮೀಸಲು ಅನುಪಾತವನ್ನು  (ಸಿಆರ್‌ಆರ್) ಶೇ 0.75ರಷ್ಟು ತಗ್ಗಿಸಿದೆ.`ಸಿಆರ್‌ಆರ್~, ಸದ್ಯದ ಶೇ 5.5ರಿಂದ ಶೇ 4.75ಕ್ಕೆ ಇಳಿಯುವುದರಿಂದ ಬ್ಯಾಂಕ್‌ಗಳ ಬಳಿ ಹೆಚ್ಚುವರಿಯಾಗಿ 48 ಸಾವಿರ ಕೋಟಿಗಳಷ್ಟು ನಗದು ಲಭ್ಯವಾಗಲಿದೆ. ಇದು ಶನಿವಾರದಿಂದಲೇ ಜಾರಿಗೆ ಬರಲಿದೆ.ಬ್ಯಾಂಕ್‌ಗಳು ತಮ್ಮ ಠೇವಣಿಗಳ ಕೆಲ ಭಾಗವನ್ನು `ಆರ್‌ಬಿಐ~ನಲ್ಲಿ ಇರಿಸುವ ಮೊತ್ತವು ನಗದು ಮೀಸಲು ಅನುಪಾತವಾಗಿರುತ್ತದೆ. ಅದರ ಪ್ರಮಾಣ ತಗ್ಗಿಸುವುದರಿಂದ ಸಾಲ ನೀಡಲು ಬ್ಯಾಂಕ್‌ಗಳ  ಬಳಿ ಹೆಚ್ಚು ಹಣ ಲಭ್ಯವಾಗುತ್ತದೆ.ಮಾರುಕಟ್ಟೆಯಲ್ಲಿನ ನಗದು ಲಭ್ಯತೆ ಪರಿಸ್ಥಿತಿ ಸುಧಾರಿಸಲು  `ಆರ್‌ಬಿಐ~, ಜನವರಿಯಲ್ಲಿಯೂ ಶೇ 0.5ರಷ್ಟು `ಸಿಆರ್‌ಆರ್~ ತಗ್ಗಿಸಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.