ಗುರುವಾರ , ಮಾರ್ಚ್ 4, 2021
29 °C

ಆರ್‌ಸಿಬಿ ಸಾಮ್ರಾಜ್ಯ ಈಗ ಹೇಗಿದೆ...?

ಕೆ.ಓಂಕಾರ ಮೂರ್ತಿ Updated:

ಅಕ್ಷರ ಗಾತ್ರ : | |

ಆರ್‌ಸಿಬಿ ಸಾಮ್ರಾಜ್ಯ ಈಗ ಹೇಗಿದೆ...?

ರಾಯಲ್ ಚಾಲೆಂಜರ್ಸ್ ತಂಡದಿಂದ ಉದ್ಯಮಿ ವಿಜಯ್ ಮಲ್ಯ ಲಾಭ ಗಿಟ್ಟಿಸುತ್ತಿದ್ದಾರೆಯೇ?ಕ್ರೀಡಾ ಅಭಿಮಾನಿಗಳು ಇಂತಹದೊಂದು ಪ್ರಶ್ನೆಯನ್ನು ಪದೇಪದೇ ಕೇಳುತ್ತಿರುತ್ತಾರೆ. ಅದರಲ್ಲೂ ಕಿಂಗ್‌ಫಿಷರ್ ವಿಮಾನಯಾನ ಸಂಸ್ಥೆ ಆರ್ಥಿಕ ನಷ್ಟ ಅನುಭವಿಸಿರುವುದು ಈ ಪ್ರಶ್ನೆಗೆ ಮತ್ತಷ್ಟು ಬಲ ನೀಡಿದೆ. ಜೊತೆಗೆ ಜನರಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ.`ಕಿಂಗ್‌ಫಿಷರ್ ವಿಮಾನಯಾನದ ವ್ಯವಹಾರವೇ ಬೇರೆ. ಐಪಿಎಲ್ ನಿರ್ವಹಣೆಯೇ ಬೇರೆ. ಅದಕ್ಕೂ ಐಪಿಎಲ್‌ಗೂ ಯಾವುದೇ ಸಂಬಂಧವಿಲ್ಲ. ಹಾಗಾಗಿ ಫ್ರಾಂಚೈಸಿ ಅಥವಾ ಆಟಗಾರರಿಗೆ ಸಮಸ್ಯೆ ಉಂಟಾಗುವ ವಿಷಯವೇ ಬರೋದಿಲ್ಲ~ ಎಂದು ಆರ್‌ಸಿಬಿ ಆಡಳಿತದ ಮೂಲಗಳು ಹೇಳುತ್ತವೆ.ಆದರೆ ಈಗ ಮಲ್ಯ ಸಂಕಷ್ಟದ್ಲ್ಲಲಿರುವುದು ನಿಜ. ಇದಕ್ಕೆ ಕಾರಣ ಕಿಂಗ್‌ಫಿಷರ್ ವಿಮಾನಯಾನದಲ್ಲಿನ ಸಮಸ್ಯೆ. ಸಿಬ್ಬಂದಿಯನ್ನು ತೆಗೆದು ಹಾಕುತ್ತಿರುವ ಸುದ್ದಿ ಇದೆ. ಜೊತೆಗೆ ಕೆಲ ತಿಂಗಳಿನಿಂದ ವೇತನ ನೀಡಿಲ್ಲದ ಕಾರಣ ಉದ್ಯೋಗಿಗಳು ಮಾಲೀಕ ಮಲ್ಯ ಅವರಿಗೆ ಪತ್ರ ಕೂಡ ಬರೆದ್ದ್ದಿದಾರೆ.ಆರ್‌ಸಿಬಿ ತಂಡದ ಆಟಗಾರರು ಈ ಬಾರಿಯ ಐಪಿಎಲ್ ಬಹಿಷ್ಕರಿಸಬೇಕು ಎಂದು ಕೋರಿದ್ದಾರೆ. ಹಾಗಾದಲ್ಲಿ ತಮಗೆ ಬರಬೇಕಾದ ಹಣ ಸಿಗಬಹುದು ಎಂಬುದು ಉದ್ಯೋಗಿಗಳ ವಿನಂತಿ.ಇದೇ ಕಾರಣಕ್ಕೆ ಈ ಬಿಕ್ಕಟ್ಟು ರಾಯಲ್ ಚಾಲೆಂಜರ್ಸ್ ತಂಡದ ಮೇಲೂ ಪರಿಣಾಮ ಬೀರಬಹುದೇ ಎಂಬುದು ಈಗ ಎಲ್ಲರ ಪ್ರಶ್ನೆ. ಒಂದು ಮೂಲದ ಪ್ರಕಾರ ಈ ಫ್ರಾಂಚೈಸಿಯ ಮೊದಲಿನ ಧಾರಾಳತನ ನಿಧಾನವಾಗಿ ಮರೆಯಾಗುತ್ತಿರುವುದು ನಿಜ. ಹಾಗಾಗಿಯೇ ಕೆಲ ಆಟಗಾರರು ಕೂಡ ಆತಂಕದಲ್ಲಿದ್ದಾರೆ. ಜೊತೆಗೆ  ಆರ್‌ಸಿಬಿ ತಂಡದಲ್ಲಿ ಎಂದಿನ ಅಬ್ಬರ ಸದ್ಯಕ್ಕೆ ಕಾಣುತ್ತಿಲ್ಲ.ನಿಜ, ಐಪಿಎಲ್ ಟೂರ್ನಿಗೆ `ಮಿಲಿಯನ್ ಡಾಲರ್ ಬೇಬಿ~ ಎನ್ನುತ್ತಾರೆ. ಇದಕ್ಕೆ ಕಾರಣ ಇಲ್ಲಿ ನೀರಿನಂತೆ ಹರಿದಾಡುತ್ತಿರುವ ಹಣ. ಇಷ್ಟೆಲ್ಲಾ ಇದ್ದರೂ ಹೆಚ್ಚಿನ ಫ್ರಾಂಚೈಸಿಗಳು ನಷ್ಟದಲ್ಲಿವೆ. ಇದು ಅಚ್ಚರಿ ಎನಿಸಬಹುದು. ಆದರೆ ನಿಜವನ್ನು ಒಪ್ಪಿಕೊಳ್ಳಲೇಬೇಕು. ಇದಕ್ಕೆ ಕಳೆದ 4 ಐಪಿಎಲ್ ಟೂರ್ನಿಗಳೇ ಉದಾಹರಣೆ.ಆರ್ಥಿಕ ಮುಗ್ಗಟ್ಟು ಫ್ರಾಂಚೈಸಿಗಳನ್ನು ಆತಂಕದ ಸ್ಥಾನದಲ್ಲಿ ನಿಲ್ಲಿಸಿದೆ. ಅದರಲ್ಲೂ ಮಲ್ಯ ಮತ್ತಷ್ಟು ಸಮಸ್ಯೆಯಲ್ಲಿದ್ದಾರೆ. ಹಾಗಾಗಿ ಈ ಬಾರಿ ಆರ್‌ಸಿಬಿಗೆ ಮತ್ತೊಂದು `ಚಾಲೆಂಜ್~ ಎದುರಾಗಿದೆ! ಚೊಚ್ಚಲ ಐಪಿಎಲ್ ಟೂರ್ನಿಗೆ 2007ರಲ್ಲಿ ನಡೆದ ತಂಡಗಳ ಹರಾಜಿನಲ್ಲಿ ಮಲ್ಯ 430 ಕೋಟಿ ರೂ. ನೀಡಿ ಆರ್‌ಸಿಬಿ ಫ್ರಾಂಚೈಸಿ ಖರೀದಿಸಿದ್ದರು. ಮೂಲಗಳ ಪ್ರಕಾರ ಕಳೆದ ನಾಲ್ಕು ವರ್ಷಗಳಲ್ಲೂ ಈ ತಂಡ ನಷ್ಟ ಅನುಭವಿಸಿದೆ.ಸಮೀಕ್ಷೆಯೊಂದರ ಪ್ರಕಾರ ಐಪಿಎಲ್ ಫ್ರಾಂಚೈಸಿಗಳ ಪೈಕಿ ಲಾಭ ಗಿಟ್ಟಿಸಿದ್ದು ಶಾರೂಖ್ ಖಾನ್ ಒಡೆತನದ ನೈಟ್    ರೈಡರ್ಸ್ ಕೋಲ್ಕತ್ತ ಮಾತ್ರ. ನೈಟ್ ರೈಡರ್ಸ್ ಲಾಭ ಗಳಿಸಲು ಕಾರಣ ಇದರ ಒಡೆಯ ಶಾರೂಖ್. ಇವರ ಮಾರುಕಟ್ಟೆ ಹಾಗೂ ತಾರಾ ಮೌಲ್ಯ ತಂಡದ ಹಿತಕ್ಕೆ ಕಾರಣವಾಗಿದೆ.ಹಾಗಾಗಿ ಸಾಕಷ್ಟು ಜಾಹೀರಾತುದಾರರು ಅವರನ್ನು ಹುಡುಕಿಕೊಂಡು ಬರುತ್ತಿದ್ದಾರೆ. ತಂಡದ ಪ್ರಾಯೋಜಕತ್ವಕ್ಕೂ ಕೊರತೆ ಇಲ್ಲ. ಏಳೆಂಟು ಕಂಪೆನಿಗಳು ಈ ತಂಡಕ್ಕೆ ಪ್ರಾಯೋಜಕತ್ವ ವಹಿಸಿವೆ.2009-10ರ ಸಂಸತ್‌ನ ಸ್ಥಾಯಿ ಸಮಿತಿ ವರದಿ ಪ್ರಕಾರ ಆರ್‌ಸಿಬಿ ಆರು ಕೋಟಿ ನಷ್ಟ ಅನುಭವಿಸಿತ್ತು. ಆದರೆ ತಮ್ಮ ಉತ್ಪನ್ನಗಳಿಗೆ ಪ್ರಚಾರ ಗಿಟ್ಟಿಸಲು ಇದು ವೇದಿಕೆ ಆಗಿರುವುದು ನಿಜ. ಹಾಗಾಗಿ ಹೊರಗಿನ ಪ್ರಾಯೋಜಕರಿಗೆ ಅವಕಾಶ ಇಲ್ಲಿಲ್ಲ.  2011ರ ಐಪಿಎಲ್‌ನಲ್ಲಿ ಪ್ರತಿ ತಂಡ ಕ್ರೀಡಾಂಗಣದ ಭೋಗ್ಯಕ್ಕೆ 3.5 ಕೋಟಿ, ತಂಡದ ಪ್ರಚಾರಕ್ಕೆ 7 ಕೋಟಿ, ಆಟಗಾರರ ಸಂಭಾವನೆಗೆ ಹಾಗೂ ಆಡಳಿತಾತ್ಮಕ ವ್ಯವಹಾರಗಳಿಗೆ 90 ಕೋಟಿ ರೂ. ವ್ಯಯಿಸಿದ್ದವು ಎಂದು ಅಂದಾಜಿಸಲಾಗಿತ್ತು.ಆದರೆ ಆರ್‌ಸಿಬಿ ಮೂಲಗಳ ಪ್ರಕಾರ ಈ ಫ್ರಾಂಚೈಸಿಯವರು ಖರ್ಚು ಮಾಡುತ್ತಿರುವ ಅರ್ಧದಷ್ಟು ಹಣವನ್ನೂ ವಾಪಸ್ ಪಡೆಯಲು ಸಾಧ್ಯವಾಗುತ್ತಿಲ್ಲ. ಈ ತಂಡ ವಾರ್ಷಿಕ 45 ಕೋಟಿ ರೂ. ಆದಾಯ ಗಿಟ್ಟಿಸಿದರೆ, 88 ಕೋಟಿ ಖರ್ಚು ಮಾಡಿತ್ತು ಎನ್ನುತ್ತವೆ ಮೂಲಗಳು.ದಕ್ಷಿಣ ಆಫ್ರಿಕಾ ಮೂಲದ ವೈಟ್ ಮಿಶ್ಚೀಫ್ ಗರ್ಲ್ಸ್ (ಚಿಯರ್ ಲೀಡರ್ಸ್) ಹಾಗೂ ಪ್ರಚಾರ ರಾಯಭಾರಿಗಳಿಗೆ ಹಣ ಖರ್ಚು ಮಾಡಿತ್ತು. ಜೊತೆಗೆ ಫೇರ್ ಪ್ಲೇ ಪ್ರಶಸ್ತಿ, ಅಂಪೈರ್ ಪ್ರಾಯೋಜಕತ್ವವನ್ನು ಆರ್‌ಸಿಬಿ ವಹಿಸಿಕೊಂಡಿತ್ತು. ಆದರೆ ಇದರಲ್ಲಿ ಕೆಲವಕ್ಕೆ ಈ ಬಾರಿ ಕೊಕ್ಕೆ ಬಿದ್ದರೂ ಅಚ್ಚರಿ ಇಲ್ಲ.ಟಿಕೆಟ್ ಮಾರಾಟ, ಜಾಹೀರಾತು, ಪ್ರಸಾರ ಹಕ್ಕು ಹಣ ಹಂಚಿಕೆ,  ಐಪಿಎಲ್ ಪ್ರಾಯೋಜಕತ್ವದ ಹಣ ಹಂಚಿಕೆಯಿಂದ ಈ ತಂಡಕ್ಕೆ ಹಣ ಬರುತ್ತಿದೆ, ಆದರೆ ಖರ್ಚು ಮಾಡುತ್ತಿರುವ ಹಣಕ್ಕೆ ಹೋಲಿಸಿದರೆ ಅದು ಕಡಿಮೆಯೇ!ಆದರೆ ಮಲ್ಯ ಅವರಿಗೆ ಕ್ರೀಡೆ ಮೇಲೆ ವಿಪರೀತ ಪ್ರೇಮ. ಫಾರ್ಮುಲಾ ಒನ್, ಕುದುರೆ ರೇಸ್, ಫುಟ್‌ಬಾಲ್, ಕ್ರಿಕೆಟ್‌ನಲ್ಲಿ ಅವರು ಕೋಟ್ಯಂತರ ರೂಪಾಯಿ ಹಣ ಹೂಡಿದ್ದಾರೆ. ಫಾರ್ಮುಲಾ ಒನ್‌ನಲ್ಲಿ ಫೋರ್ಸ್ ಇಂಡಿಯಾ ತಂಡ ಹೊಂದಿದ್ದಾರೆ. ಐ-ಲೀಗ್ ಫುಟ್‌ಬಾಲ್ ಟೂರ್ನಿಯಲ್ಲಿ ಆಡುತ್ತಿರುವ ಮೋಹನ್ ಬಾಗನ್, ಈಸ್ಟ್ ಬೆಂಗಾಲ್ ತಂಡಗಳಿಗೆ ಪ್ರಾಯೋಜಕತ್ವ ವಹಿಸುತ್ತಿದ್ದಾರೆ.

 

ಕರ್ನಾಟಕ ಕ್ರಿಕೆಟ್ ಅಕಾಡೆಮಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಕಿಂಗ್ ಫಿಷರ್ ಡರ್ಬಿ ರೇಸ್ ಆಯೋಜಿಸುತ್ತಾರೆ.ಕಳೆದ ಎರಡು ವರ್ಷಗಳಿಂದ ಆರ್‌ಸಿಬಿ ತಂಡ ಉತ್ತಮ ಪ್ರದರ್ಶನವನ್ನೇ ನೀಡುತ್ತಿದೆ. ಐಪಿಎಲ್‌ನಲ್ಲಿ ಎರಡು ಬಾರಿ ಹಾಗೂ   ಚಾಂಪಿಯನ್ಸ್ ಲೀಗ್‌ನಲ್ಲಿ ಒಮ್ಮೆ ಫೈನಲ್ ತಲುಪಿತ್ತು. ಆ ಬಗ್ಗೆ ಮಲ್ಯಗೂ ಖುಷಿ ಇದೆ. ಹಾಗಾಗಿಯೇ ಈ ಹಿಂದೆ ಆಟಗಾರರಿಗೆ ಅದ್ಭುತ ಸೌಲಭ್ಯಗಳನ್ನು ನೀಡಿದ್ದೂ ಖರೆ.ಈ ತಂಡದ ಮುಖ್ಯ ಸಲಹೆಗಾರ ಅನಿಲ್ ಕುಂಬ್ಳೆ. ಇದ್ಲ್ಲಲದೇ, 9-10 ಮಂದಿ ಸಹಾಯಕ ಸಿಬ್ಬಂದಿ ಇದ್ದಾರೆ. 22 ದೇಶಿ ಆಟಗಾರರು ಹಾಗೂ 10 ಮಂದಿ ವಿದೇಶಿ ಆಟಗಾರರಿದ್ದಾರೆ. ಕ್ರಿಸ್ ಗೇಲ್, ವಿರಾಟ್ ಕೊಹ್ಲಿ, ಡೇನಿಯಲ್ ವೆಟೋರಿ, ತಿಲಕರತ್ನೆ ದಿಲ್ಶಾನ್, ಎಬಿ ಡಿವಿಲಿಯರ್ಸ್, ಮುತ್ತಯ್ಯ ಮುರಳೀಧರನ್, ಜಹೀರ್ ಖಾನ್, ಆರ್.ವಿನಯ್ ಕುಮಾರ್ ಅವರಂಥ ಅತ್ಯುತ್ತಮ ಆಟಗಾರರಿದ್ದಾರೆ.ಹಾಗಾಗಿ ಇದೊಂದು ದುಬಾರಿ ವೆಚ್ಚದ ಹಾಗೂ ಪ್ರತಿಭಾವಂತ ಆಟಗಾರರಿಂದ ಕೂಡಿರುವ ತಂಡ ಕೂಡ. ಜೊತೆಗೆ ಕತ್ರಿನಾ ಕೈಫ್, ದೀಪಿಕಾ ಪಡುಕೋಣೆ, ಪುನೀತ್ ರಾಜ್‌ಕುಮಾರ್, ರಮ್ಯಾ ಅವರಂಥವರು ಈ ತಂಡದ ರಾಯಭಾರಿಗಳಾಗಿದ್ದರು.ಮೊದಲ ಅವತರಣಿಕೆಯಲ್ಲಿ ರಾಹುಲ್ ದ್ರಾವಿಡ್, ಜಾಕ್ ಕಾಲೀಸ್ ಹಾಗೂ ವಾಸೀಮ್ ಜಾಫರ್ ಅವರಂಥ ಆಟಗಾರರತ್ತ ಒಲವು ತೋರಿತ್ತು. ಹಾಗಾಗಿ ಆರ್‌ಸಿಬಿ ಒಂದು ಟೆಸ್ಟ್ ತಂಡ ಎಂಬ ಟೀಕೆ ಎದುರಿಸಬೇಕಾಗಿತ್ತು. ಆ ಬಳಿಕ ಮಲ್ಯ ಯುವ ಆಟಗಾರರತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ.ಕಳೆದ ಬಾರಿ ವಿಜಯ್ ಮಲ್ಯ ಪುತ್ರ ಸಿದ್ದಾರ್ಥ ಮಲ್ಯ ಹಾಗೂ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಂಡಕ್ಕೆ ಚಿಯರ್ ಮಾಡುತ್ತಾ ಆಟಗಾರರನ್ನು ಹುರಿದುಂಬಿಸುತ್ತಿದ್ದರು. ಅವರ ಸಂಬಂಧದ ಬಗ್ಗೆ ಗುಸುಗುಸು ಶುರುವಾಗಿತ್ತು. ಆದರೆ ಇತ್ತೀಚಿಗಿನ ಸುದ್ದಿ ಎಂದರೆ ಅವರು ದೂರವಾಗಿದ್ದಾರೆ ಎಂಬುದು.ಈ ತಂಡ ಐದನೇ ಆವೃತ್ತಿಯಲ್ಲಿ ಸದ್ಯ ಒಂದು ಪಂದ್ಯ ಆಡಿದೆ.  ಮೊದಲಿನ ಅಬ್ಬರ, ಅಡಂಬರ ಇಲ್ಲದೇ ಇರುವುದು ಜನರಲ್ಲಿ ಹಲವು ಅನುಮಾನಗಳು ಉದ್ಭವಿಸಲು ಕಾರಣವಾಗಿದೆ. ಆದರೆ ಮೊದಲೇ ಹೇಳಿದಂತೆ ಮಲ್ಯ ಕ್ರೀಡಾ ಪ್ರೇಮಿ. ಯಾವುದೇ ಸಮಸ್ಯೆಗೆ ಅವರು ದಾರಿ ಮಾಡಿಕೊಡಲಾರರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.