ಬುಧವಾರ, ಜನವರಿ 29, 2020
26 °C
ಚುಟುಕು ಚುರುಕು

ಆಲಿವ್‌ನಿಂದ ಆರೋಗ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆರೋಗ್ಯಪೂರ್ಣವಾಗಿ ಇರಲು ಆಲಿವ್ ತೈಲ ಹಲವು ವಿಧಗಳಲ್ಲಿ ಪ್ರಯೋಜನಕಾರಿ ಎಂದು ಅಧ್ಯಯ­ನಗಳು ತಿಳಿಸಿವೆ. ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್ಸ್ ಮತ್ತು ವಿಟಮಿನ್– ಇ ಅಂಶ ಹೇರಳವಾಗಿರುತ್ತದೆ.ಪ್ರತಿದಿನ ಕನಿಷ್ಠ ಎರಡು ಚಮಚ ಪರಿಶುದ್ಧ ಆಲಿವ್ ಎಣ್ಣೆಯನ್ನು ಬಳಸುವ ಮೂಲಕ ಅನೇಕ ಲಾಭಗಳನ್ನು ಪಡೆಯಬಹುದು ಎನ್ನುವುದಕ್ಕೆ ಇಲ್ಲಿವೆ ಕೆಲವು ಉದಾಹರಣೆಗಳು:

*ಇದು ರೋಗನಿರೋಧಕ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ.*ವೈರಾಣುಗಳ ವಿರುದ್ಧ ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತದೆ.*ಆಲಿವ್ ತೈಲದಲ್ಲಿ ಇರುವ ಕೆಲವು ಅಂಶಗಳು ಉರಿಯೂತವನ್ನು ಕಡಿಮೆ ಮಾಡಲು ನೆರವಾಗುತ್ತವೆ.*ಕ್ಯಾನ್ಸರ್‌ನ ಸಂಭಾವ್ಯ ಪರಿಣಾಮಗಳನ್ನು ಕಡಿಮೆ ಮಾಡುವ ಗುಣ ಇದಕ್ಕಿರುವುದನ್ನು ಅಧ್ಯಯನದಿಂದ ಪತ್ತೆ ಹಚ್ಚಲಾಗಿದೆ.*ಹೃದ್ರೋಗಕ್ಕೆ ಕಾರಣ ಆಗಬಹುದಾದ ಕೊಲೆಸ್ಟ್ರಾಲ್‌ನ ಮಟ್ಟವನ್ನು ಕಡಿಮೆ ಮಾಡುತ್ತದೆ.*ಕೀಲುರೋಗ/ ಸಂಧಿವಾತವನ್ನು ತಡೆಯುವಲ್ಲೂ ಪ್ರಮುಖ ಪಾತ್ರವಹಿಸುತ್ತದೆ.

ಪ್ರತಿಕ್ರಿಯಿಸಿ (+)