ಹಾಸನ: ಈ ಬಾರಿ ಆಲೂಗೆಡ್ಡೆ ಬಿತ್ತನೆ ಬೀಜಕ್ಕೆ ಕೊರತೆ ಆಗಲಾರದು. ಆದರೆ, ಶುಂಠಿ ಬಿತ್ತನೆ ಹೆಚ್ಚಾಗಿರುವುದರಿಂದ ಆಲೂಗೆಡ್ಡೆ ಬಿತ್ತನೆಯ ಪ್ರಮಾಣ ಕಡಿಮೆಯಾಗಬಹುದು ಎಂದು ತೋಟಗಾರಿಕಾ ಇಲಾಖೆ ಅಧಿಕಾರಿಗಳು ನಿರೀಕ್ಷಿಸಿದ್ದಾರೆ.

ಕಳೆದ ವರ್ಷ ಜಿಲ್ಲೆಯಲ್ಲಿ 21,500 ಹೆಕ್ಟೇರ್ನಲ್ಲಿ ಆಲೂಗೆಡ್ಡೆ ಬಿತ್ತನೆಯಾಗಿತ್ತು. ಈ ಬಾರಿ ಹಾಸನಕ್ಕೆ 27 ಸಾವಿರ ಟನ್ ಬಿತ್ತನೆ ಆಲೂಗೆಡ್ಡೆ ಬಂದಿದ್ದು, 21 ಸಾವಿರ ಹೆಕ್ಟೇರ್ಗೂ ಹೆಚ್ಚು ಪ್ರದೇಶದ ಬಿತ್ತನೆಗೆ ಸಾಕಾಗುತ್ತದೆ ಎಂದು ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಶಕೀಲ್ ಅಹಮದ್ ತಿಳಿಸಿದ್ದಾರೆ.

ಮಳೆ ಕೊರತೆಯ ಭೀತಿ: ಈ ಬಾರಿ ಜೂನ್ ತಿಂಗಳಲ್ಲಿ ಮುಂಗಾರು ದುರ್ಬಲವಾಗಿರುತ್ತದೆ ಎಂದು ಹವಾಮಾನ ಇಲಾಖೆಯವರು ಮುನ್ಸೂಚನೆ ನೀಡಿದ್ದಾರೆ.

ಆದ್ದರಿಂದ ಆಲೂಗೆಡ್ಡೆ ಬಿತ್ತನೆ ಮಾಡುವ ರೈತರು ಸ್ವಲ್ಪ ತಡವಾಗಿ ಬಿತ್ತನೆ ಮಾಡುವುದು ಸೂಕ್ತ ಎಂದು ಅಧಿಕಾರಿಗಳು ನುಡಿಯುತ್ತಾರೆ.
‘ಮೇ 15ರಿಂದ ಜೂನ್ 15ರೊಳಗಿನ ಅವಧಿ ಆಲೂಗೆಡ್ಡೆ ಬಿತ್ತನೆಗೆ ಸೂಕ್ತ. ಆದರೆ ಆರಂಭದಲ್ಲಿ ಬರುವ ಮಳೆಯನ್ನು ನಂಬಿ ಬಿತ್ತನೆ ಮಾಡಿದರೆ ನಷ್ಟ ಅನುಭವಿಸುವ ಪ್ರಸಂಗ ಬರಬಹುದು. ಆದ್ದರಿಂದ ಸ್ವಲ್ಪ ತಡವಾಗಿಯೇ ಬಿತ್ತನೆ ಮಾಡಿದರೆ ಸೂಕ್ತ’ ಎಂಬುದು ಅಧಿಕಾರಿಗಳ ಸೂಚನೆ.

ನೀರಿನ ಕೊರತೆ: ಕೊಳವೆ ಬಾವಿ ಇರುವವರು ಏಪ್ರಿಲ್ ತಿಂಗಳ ಕೊನೆಯಲ್ಲಿ ಬರುವ ಮಳೆಯಿಂದ ಭೂಮಿ ಹದವಾಗುತ್ತಲೇ ಆಲೂಗಡ್ಡೆ ಬಿತ್ತನೆ ಮಾಡುತ್ತಿದ್ದರು. ನಂತರ ಮಳೆ ಸ್ವಲ್ಪ ವಿಳಂಬವಾದರೂ ಕೊಳವೆ ಬಾವಿಯಿಂದ ನೀರು ಹರಿಸಿ ಬೆಳೆ ರಕ್ಷಿಸುತ್ತಾರೆ. ಆದರೆ ಈಗ ಕೊಳವೆ ಬಾವಿಗಳ ನೀರೂ ಕೆಳಕ್ಕೆ ಇಳಿದಿರುವುದರಿಂದ ರೈತರು ಪರ್ಯಾಯ ಬೆಳೆಗೆ ಮನಸ್ಸು ಮಾಡುವ ಸಾಧ್ಯತೆ ಇದೆ. ಜೊತೆಗೆ ಶುಂಠಿಗೆ ಉತ್ತಮ ಬೆಲೆ ಬಂದಿರುವುದರಿಂದ ಈಗಾಗಲೇ ರೈತರು ಬಿತ್ತನೆ ಮಾಡಿ ಆಗಿದೆ. ಶುಂಠಿ ಬಿತ್ತನೆ ಈ ಬಾರಿ ಕಳೆದ ವರ್ಷಕ್ಕಿಂತ ಮೂರರಿಂದ ನಾಲ್ಕು ಸಾವಿರ ಹೆಕ್ಟೇರ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಶಕೀಲ್ ಹೇಳಿದ್ದಾರೆ.

ದುಬಾರಿ ಬೆಲೆ? ತಿನ್ನಲು ಬಳಸುವ ಆಲೂಗೆಡ್ಡೆಯ ಬೆಲೆಯೇ ಹೆಚ್ಚಾಗಿರುವುದರಿಂದ ಈ ಬಾರಿ ಆಲೂಗೆಡ್ಡೆ ಬಿತ್ತನೆ ಬೀಜವೂ ಸ್ವಲ್ಪ ದುಬಾರಿ ಆಗುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ಹೇಳುತ್ತಾರೆ. ರೈತರಿಗೆ ಸಬ್ಸಿಡಿ ದರದಲ್ಲಿ ಔಷಧ ನೀಡುವುದು ಮತ್ತಿತರ ವಿಚಾರಗಳಿಗೆ ಸಂಬಂಧಿಸಿದಂತೆ ತೋಟಗಾರಿಕಾ ಇಲಾಖೆಯವರು ಸಂಬಂಧಪಟ್ಟ ಅಧಿಕಾರಿಗಳ ಜತೆ ಸಭೆ ನಡೆಸಿದ್ದಾರೆ. ಆದರೆ ಬೆಲೆ ನಿಗದಿ ಹಾಗೂ ಯಾವತ್ತಿನಿಂದ ಮಾರಾಟ ಆರಂಭಿಸಬೇಕು ಎಂಬ ಬಗ್ಗೆ ತೀರ್ಮಾನಿಸಲು ವ್ಯಾಪಾರಿಗಳು, ರೈತರು ಹಾಗೂ ಅಧಿಕಾರಿಗಳ ಸಭೆ ನಡೆಸಬೇಕು. ಚುನಾವಣಾ ನೀತಿ ಸಂಹಿತೆ ಇರುವುದರಿಂದ ಮೇ 16ರವರೆಗೆ ಅಧಿಕೃತವಾಗಿ ಸಭೆ ನಡೆಸಲು ಸಾಧ್ಯವಾಗುತ್ತಿಲ್ಲ.

ದೃಢೀಕೃತ ಬೀಜ ತರಲು ಸಹಕಾರ: ಹಾಸನದಲ್ಲಿ ದೃಢೀಕೃತ ಬಿತ್ತನೆ ಬೀಜ ಲಭ್ಯವಾಗುವುದಿಲ್ಲ. ಆದರೆ ಸುಮಾರು ಐದು ಸಾವಿರ ಟನ್ ದೃಢೀಕೃತ ಬಿತ್ತನೆ ಬೀಜ ಹುಬ್ಬಳ್ಳಿಗೆ ಬಂದಿದ್ದು, ರೈತರು ಒಟ್ಟಾಗಿ ಅಲ್ಲಿಂದ ಬೀಜ ಖರೀದಿಸಿ ತರಲು ಮುಂದಾದರೆ ಇಲಾಖೆಯಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದು ಶಕೀಲ್ ಅಹ್ಮದ್ ಹೇಳಿದ್ದಾರೆ.

ರೈತರಿಗೆ ಸಿಗದ ಪರಿಹಾರ...
ಹಾಸನ: ಕಳೆದ ಬಾರಿ ಬೆಳೆ ವಿಮೆ ಮಾಡಿಸಿಕೊಂಡು ನಷ್ಟ ಅನುಭವಿಸಿದ ರೈತರಿಗೆ ಈಗಾಗಲೇ ವಿಮಾ ಹಣ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ ಜಿಲ್ಲೆಯ ರೈತರು ಕಳೆದ ಬಾರಿ ಮೂರು ಕೋಟಿ ರೂಪಾಯಿಗೂ ಹೆಚ್ಚು ವಿಮೆ ಕಂತು ಕಟ್ಟಿದ್ದರೆ, ಬಂದಿರುವುದು 85.5 ಲಕ್ಷ ರೂಪಾಯಿ ಮಾತ್ರ.

ಸರ್ಕಾರ ಬೆಳೆ ವಿಮೆ ಕಡ್ಡಾಯ ಮಾಡಿದ್ದರಿಂದ ರೈತರಿಗಿಂತ ಹೆಚ್ಚಾಗಿ ವಿಮಾ ಕಂಪೆನಿಗಳಿಗೆ ಲಾಭ ಆಗುತ್ತಿದೆ ಎಂದು ರೈತರು ಆರೋಪಿಸುತ್ತಿದ್ದಾರೆ.
ಕಳೆದ ಬಾರಿ ಜಿಲ್ಲೆಯಲ್ಲಿ 13,373 ರೈತರು ವಿಮೆ ಮಾಡಿಸಿ 3,56,97,645 ರೂಪಾಯಿ ಹಣ ಪಾವತಿಸಿದ್ದರು. ಪರಿಹಾರ ಪಡೆದ ರೈತರ ಸಂಖ್ಯೆ ಕೇವಲ 4212. ಅವರು ಒಟ್ಟು ಪಡೆದ ಪರಿಹಾರ 85,57,209 ರೂಪಾಯಿ ಮಾತ್ರ.

ಅತಿವೃಷ್ಟಿ, ಅನಾವೃಷ್ಟಿ, ಅತಿ ಉಷ್ಣಾಂಶ, ಕಡಿಮೆ ಉಷ್ಣಾಂಶ ಮುಂತಾದ ಕೆಲವು ಮಾನದಂಡಗಳನ್ನಿಟ್ಟು ರೈತರಿಗೆ ಪರಿಹಾರ ನೀಡಲಾಗುತ್ತದೆ. ಮಳೆ ಮಾಪನ ಮಾಡುವಾಗ ಸರಾಸರಿ ಮಳೆಯನ್ನು ನೋಡುತ್ತಾರೆ. ಸಕಾಲದಲ್ಲಿ ಮಳೆ ಬಾರದೆ ಕೊನೆಯ ಒಂದೆರಡು ದಿನ ಭಾರಿ ಮಳೆಯಾಗಿ ಸರಾಸರಿ ಮಳೆ ಪ್ರಮಾಣ ಸರಿಯಾದರೆ ಪರಿಹಾರವೇ ಲಭಿಸುವುದಿಲ್ಲ. ಇದರ ಬದಲು ವಿಮಾ ಕಂತನ್ನು ಕಡಿಮೆ ಮಾಡಿ ಪರಿಹಾರ ಪ್ರಮಾಣ ಹೆಚ್ಚಿಸಿದರೆ ಕೆಲವರಿಗಾದರೂ ಅನುಕೂಲವಾಗಬಹುದು ಎಂದು ರೈತರು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.