ಕೆಂಭಾವಿ: ಶಾಶ್ವತ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸುವಂತೆ ಆಗ್ರಹಿಸಿ ಸಮೀಪದ ಆಲ್ಹಾಳ ಗ್ರಾಮಸ್ಥರು ಶುಕ್ರವಾರ ಸುರಪುರ ತಹಸೀಲ್ದಾರರಿಗೆ ಘೇರಾವ್ ಹಾಕಿ ಪ್ರತಿಭಟಿಸಿದರು.

ಆಲ್ಹಾಳ ಗ್ರಾಮಕ್ಕೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದ್ದು, ಸಮರ್ಪಕ ಪೂರೈಕೆ ಆಗುತ್ತಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಲು ಸುರಪುರದ ತಹಸೀಲ್ದಾರ್ ಎಸ್.ಡಿ. ಗಣಾಚಾರಿ ಶುಕ್ರವಾರ ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಮಹಿಳೆಯರು, ಯುವಕರು ತಹಸೀಲ್ದಾರರಿಗೆ ಘೇರಾವ್ ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡಿ ಎಂದು ಪಟ್ಟು ಹಿಡಿದ ಗ್ರಾಮಸ್ಥರು, ತಹಸೀಲ್ದಾರರ ಜೀಪಿನ ಎದುರು ಪ್ರತಿಭಟನೆ ಆರಂಭಿಸಿದರು.
ಗ್ರಾಮಸ್ಥರು ತಮ್ಮ ಪಟ್ಟನ್ನು ಸಡಿಲಿಸದೇ ಇದ್ದುದರಿಂದ ತೀವ್ರ ಬೇಸರ ವ್ಯಕ್ತಪಡಿಸಿದ ತಹಸೀಲ್ದಾರ್ ಎಸ್.ಡಿ. ಗಣಾಚಾರಿ, `ಆಯ್ತು ಬಿಡಿ. ನಾನು ಇಲ್ಲೇ ಕುಳಿತು ಬಿಡುತ್ತೇನೆ. ತಾಲ್ಲೂಕಿನ ಎಲ್ಲ ಮಕ್ಕಳಿಗೆ ಜಾತಿ ಮತ್ತು ಆದಾಯ ಪ್ರಮಾಣಪತ್ರ ಕೊಡುವ ಕಾರ್ಯ ನಿಂತು ಬಿಡುತ್ತದೆ~ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಸಹಾಯಕ ಆಯುಕ್ತ ಬಿ.ಪಿ. ವಿಜಯ ಅವರನ್ನೂ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು.ನಮಗ ಕುಡ್ಯಾಕಾ ನೀರಿಲ್ಲ. ಭಾಳ ಸರ್ತಿ ಹೇಳಿದ್ರು, ಯಾರೂ ಕೇಳಾಕ ತಯಾರಿಲ್ಲ. ಟ್ಯಾಂಕರ್ ಒಂದಿನಾ ಬರ್ತದ. ಒಂದಿನಾ ಬರೂದಿಲ್ಲ. ಕೇಳಿದ್ರ ಗಾಡಿಗೆ ಎಣ್ಣಿ ಇಲ್ಲ, ಡ್ರೈವರ್ ಇಲ್ಲ, ಪಂಚರ್ ಆಗೇದ ಅಂತ ಹೇಳಿ ಬಿಡ್ತಾರ. ಸರಿಯಾಗಿ ನೀರ ಕೊಡಂಗಿಲ್ಲ. 2 ಲಕ್ಷ ಖರ್ಚ ಮಾಡಿ ಪೈಪ್ಲೈನ್ ಮಾಡ್ಯಾರ. ಬೋರವೆಲ್ ಹಾಕ್ಯಾರಾ. ಅದರಾಗ ಒಂದ ಹನಿ ನೀರಿಲ್ಲ ಎಂದು ಮಹಿಳೆಯರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಇದರಿಂದಾಗಿ ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿರುವುದನ್ನು ಗಮನಿಸಿದ ಸಹಾಯಕ ಆಯುಕ್ತ ಬಿ.ಪಿ. ವಿಜಯ, `ನಿಮ್ಮ ಗ್ರಾಮಕ್ಕೆ ಶಾಶ್ವತ ನೀರು ಪೂರೈಕೆಗೆ ವ್ಯವಸ್ಥೆ ಮಾಡಲಾಗುವುದು. ಮುದನೂರ ಗ್ರಾಮದಿಂದ ಪೈಪ್ಲೈನ್ ಹಾಕಿ, ಕಿರು ನೀರು ಸರಬರಾಜು ಮಾಡಲಾಗುವುದು. ಇದಕ್ಕಾಗಿ ರೂ.45 ಲಕ್ಷ ತೆಗೆದಿರಿಸಲಾಗಿದೆ ಎಂದು ತಿಳಿಸಿದರು.

ಸಹಾಯಕ ಆಯುಕ್ತರ ಭರವಸೆಯ ನಂತರ ಸಾರ್ವಜನಿಕರು ತಮ್ಮ ಪ್ರತಿಭಟನೆ ಹಿಂದಕ್ಕೆ ಪಡೆದರು. ಗ್ರಾಮಕ್ಕೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಆಗುತ್ತಿರುವುದನ್ನು ಖುದ್ದು ವೀಕ್ಷಿಸಿದ ಸಹಾಯಕ ಆಯುಕ್ತ ವಿಜಯ, ಸರದಿಯಲ್ಲಿ ಮೇಲೆ ನಿಂತು ನೀರು ಪಡೆಯಿರಿ. ನೀರಿಗಾಗಿ ಗುದ್ದಾಟ ಬೇಡ ಎಂದು ತಿಳಿ ಹೇಳಿದರು.

ಗ್ರಾಮದಲ್ಲಿರುವ ಕೊಳವೆಬಾವಿಗಳಿಗೆ ಪ್ರೆಸ್ಸಿಂಗ್ ಮಾಡಿಕೊಡುವಂತೆ ಪಂಚಾಯತ್ ರಾಜ್ ಎಂಜಿನಿಯರಿಂಗ್ ಅಧಿಕಾರಿಗಳಿಗೆ ಸೂಚಿಸಿದರು. ಕಂದಾಯ ನಿರೀಕ್ಷಕ ರವೀಂದ್ರ ದೆಗಲಮಡಿ, ಗ್ರಾಮ ಲೆಕ್ಕಾಧಿಕಾರಿ ಸುರೇಶ ಹಾಜರಿದ್ದರು. ಇತ್ತೀಚೆಗೆ ಗ್ರಾಮಸ್ಥರು, ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಖಾಲಿ ಕೊಡ ಹಿಡಿದು ಪ್ರತಿಭಟನೆ ಮಾಡಿದ್ದರು. ಇದರಿಂದಾಗಿ ಗ್ರಾಮಕ್ಕೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.