ಹಾವೇರಿ: ‘ಬಾರೆ ಸಂತೆಗೆ ಹೋಗೋಣ ಬಾ...’ ಎಂದು ಎಲ್ಲೆಡೆ ಜನ ಸಂತೆಗೆ ಹೊರಟರೆ, ಹಾವೇರಿ ನಗರದಲ್ಲಿ ಮಾತ್ರ ಸ್ಥಿತಿ ವಿಭಿನ್ನ. ಇಲ್ಲಿ ಸಂತೆಯೇ ಮನೆ ಬಳಿಯ ಓಣಿಗೆ ಬರುತ್ತದೆ. ಇದು ಗ್ರಾಹಕರ ಬಳಿ ಬರುವ ‘ಸಂಚಾರಿ ಸಂತೆ’. ದಿನಕ್ಕೊಂದು ಬಡಾವಣೆಯಲ್ಲಿ ಸಂತೆ ನಡೆಯುತ್ತದೆ. ಸಂತೆ ವ್ಯಾಪಾರಸ್ಥರಿಗೆ ಮಳೆ ಬಾರದಿದ್ದರೆ ಬೆಲೆಯೇರಿಕೆ, ಮಳೆ ಬಂದರೆ ತರಕಾರಿ, ಸಾಮಗ್ರಿಗೆ ಹಾಳಾಗುವ ಚಿಂತೆ. ಹೀಗೆ ಆಷಾಢದ ಮೋಡವು ಸಂತೆ ವ್ಯಾಪಾರಕ್ಕೂ ಕವಿದಿದೆ.

ಎಲ್ಲ ಪಟ್ಟಣಗಳಂತೆ ಹಾವೇರಿಯಲ್ಲೂ ಕಾಯಂ ಸಂತೆಗಾಗಿ ಲಾಲ್ಬಹದ್ದೂರ್ ಶಾಸ್ತ್ರಿ ಮಾರುಕಟ್ಟೆ ಇದೆ. ಆದರೆ, ಬೇರೆ ಬೇರೆ ಬಡಾವಣೆಗಳಲ್ಲಿ ಸಂತೆ ನಡೆಯುವುದು ವಿಶೇಷ. ಈ ‘ರೈತ ಸಂತೆ’ಗಳಲ್ಲಿ ಪ್ರಮುಖ ಮಾರುಕಟ್ಟೆಯ ಚಿಲ್ಲರೆ ವ್ಯಾಪಾರಸ್ಥರು, ವಿವಿಧೆಡೆಯ ರೈತರು ಬಂದು ವ್ಯಾಪಾರ ನಡೆಸುತ್ತಾರೆ.

ರೈತರು ಹೊಲದಿಂದ ಸೊಪ್ಪು, ತರಕಾರಿ ಮತ್ತಿತರ ಸಾಮಗ್ರಿಗಳನ್ನು ತಂದು ಮಾರುತ್ತಾರೆ, ಚಿಲ್ಲರೆ ವ್ಯಾಪಾರಸ್ಥರು ಬೆಳಿಗ್ಗೆ ಶಾಸ್ತ್ರಿ ಮಾರುಕಟ್ಟೆಯಲ್ಲಿ ಸಗಟು ವ್ಯಾಪಾರಸ್ಥರು, ದಲ್ಲಾಳಿಗಳು ಹಾಕುವ ಹರಾಜಿನಲ್ಲಿ ಸೊಪ್ಪು, ತರಕಾರಿ, ಹಣ್ಣು ಹಂಪಲು ಮತ್ತಿತರ ಸಾಮಗ್ರಿ ಖರೀದಿಸಿ ತರುತ್ತಾರೆ. ಇವು ಸಂಜೆಯೊಳಗೆ ಮಾರಾಟಗೊಂಡರೆ ಮಾತ್ರ ದಿನದ ದುಡಿಮೆ. ಆದರೆ, ಆಷಾಢ ಮಾಸದ ಮಳೆಗೆ ವ್ಯಾಪಾರ ಇಳಿಕೆಯಾಗುತ್ತದೆ. ಇದು ನಷ್ಟ ಉಂಟು ಮಾಡುತ್ತದೆ.

‘ಬೀದಿ ಬದಿಯಲ್ಲಿ ಸಂತೆ ನಡೆಯುವ ಕಾರಣ ಮಳೆಯಿಂದ ಯಾವುದೇ ರಕ್ಷಣೆ ಇಲ್ಲ. ಮಳೆಗೆ ತೊಯ್ದ ತರಕಾರಿ, ಹಣ್ಣು ಹಂಪಲುಗಳು ಮರುದಿನಕ್ಕೆ ಉಳಿಯುವುದಿಲ್ಲ. ಅದನ್ನು ಮತ್ತೆ ಸಾಗಾಟ ಮಾಡಲು ಟಂಟಂ, ಆಟೊಗೆ ಬಾಡಿಗೆ ನೀಡಬೇಕು. ಹೀಗಾಗಿ ನಾವು ಮಳೆಗಾಲದಲ್ಲಿ ಅಂದಿನ ಸೊಪ್ಪು, ತರಕಾರಿ, ಹಣ್ಣುಗಳನ್ನು ಅಂದೇ ಮಾರಾಟ ಮಾಡಿದರೆ ಮಾತ್ರ ಬದುಕಲು ಸಾಧ್ಯ. ಲಾಭದ ಲೆಕ್ಕ ಹಾಕುವುದು ಅಸಾಧ್ಯ’ ಎನ್ನುತ್ತಾರೆ ಸಂತೆ ವ್ಯಾಪಾರಿ ಮೆಹಬೂಬ್ಸಾಬ್.

‘ಇನ್ನೊಂದೆಡೆ ಮಳೆ ಬಾರದಿದ್ದರೆ ತರಕಾರಿ, ಸೊಪ್ಪಿನ ಬೆಲೆ ಗಗನಕ್ಕೇರುತ್ತವೆ. ಆಗ ದಲ್ಲಾಳಿಗಳು ಲಾಭ ಮಾಡಿಕೊಳ್ಳುತ್ತಾರೆ. ಗ್ರಾಹಕರು ಖರೀದಿ ಕಡಿಮೆ ಮಾಡುತ್ತಾರೆ. ನಮ್ಮ ಲಾಭಾಂಶ ಹೆಚ್ಚುವುದಿಲ್ಲ. ನಮ್ಮದು ಅಡಕತ್ತರಿಯಲ್ಲಿ ಸಿಕ್ಕಿದ ಪರಿಸ್ಥಿತಿ’ ಎನ್ನುತ್ತಾರೆ. ಸಂತೆಯನ್ನೇ ಅವಲಂಬಿಸಿ ಜೀವನ ನಡೆಸುವ ಸುಮಾರು ಎರಡು ಸಾವಿರ ಚಿಲ್ಲರೆ ವ್ಯಾಪಾರಸ್ಥ, ರೈತ ಕುಟುಂಬಗಳು ಹಾವೇರಿಯಲ್ಲಿವೆ ಎಂದು ಅಂದಾಜಿಸಲಾಗಿದೆ. ಒಂದೊಂದು ಸಂತೆಗೆ ಇವರು ಸುಮಾರು ಐನ್ನೂರರಿಂದ ಆರು ನೂರು ಜನ ಬರುತ್ತಾರೆ. ಬ್ಯಾಡಗಿ, ಹಾನಗಲ್, ಶಿಗ್ಗಾವಿ ಸಂತೆಗೂ ಹೋಗುತ್ತಾರೆ.

ಮಳೆಗಾಲದಲ್ಲಿ ಮಳೆಯಾಶ್ರಿತ ಪ್ರದೇಶದ ತರಕಾರಿ ಬಂದರೆ, ಬೇಸಿಗೆಯಲ್ಲಿ ನೀರಾವರಿ ಪ್ರದೇಶದಿಂದ ಬರುತ್ತದೆ. ನಾಗೇಂದ್ರನಮಟ್ಟಿ ಮತ್ತಿತರೆಡೆ ಸಂತೆಯಲ್ಲಿ ಹೊಳೆ, ಕೆರೆ, ಸಮುದ್ರದ ಮೀನು, ಕೋಳಿ, ಒಣಮೀನು ವ್ಯಾಪಾರವೂ ಭರ್ಜರಿಯಾಗಿ ನಡೆಯುತ್ತದೆ.

‘ಆಷಾಢ ಕಳೆದು ಶ್ರಾವಣ ಬರುವಾಗ ವ್ಯಾಪಾರವೂ ವೃದ್ಧಿಯಾಗುತ್ತದೆ. ಹಬ್ಬ ಹರಿದಿನಗಳ ಆರಂಭದೊಂದಿಗೆ ನಿರ್ದಿಷ್ಟ ತರಕಾರಿ, ಸಾಂಬಾರು ಸೊಪ್ಪು, ಹಣ್ಣುಗಳು, ಬಾಳೆ, ಮಾವು, ಕಬ್ಬು, ವಿವಿಧ ಸೊಪ್ಪು ಬಳ್ಳಿಗಳಿಗೂ ಬೇಡಿಕೆ ಇರುತ್ತದೆ. ಬೆಲೆ ಹೆಚ್ಚಿದರೂ ಖರೀದಿಸುತ್ತಾರೆ ಎನ್ನುತ್ತಾರೆ ವ್ಯಾಪಾರಿ ಎನ್.ಪಿ ಗೌಳಿ.

ನಗರದ ಪ್ರಮುಖ ಸಂತೆ ದಿನಗಳು

ಭಾನುವಾರದಂದು ಬಸವೇಶ್ವರನಗರ, ಸೋಮವಾರದಂದು ಲಾಲ್ಬಹುದ್ದೂರ್ ಶಾಸ್ತ್ರಿ ಮಾರುಕಟ್ಟೆ, ಮಂಗಳವಾರದಂದು ಶಿವಬಸವೇಶ್ವರ ನಗರ, ಬುಧವಾರದಂದು ಲಾಲ್ಬಹುದ್ದೂರ್ ಶಾಸ್ತ್ರಿ ಮಾರುಕಟ್ಟೆ , ಗುರುವಾರದಂದು ಗೌಳಿ ಗಲ್ಲಿ, ದೊಡ್ಡ ಬಸವೇಶ್ವರ ಗುಡಿ ಬಳಿ, ಶುಕ್ರವಾರದಂದು ನಾಗೇಂದ್ರನಮಟ್ಟಿ, ಶನಿವಾರದಂದು ಲಾಲ್ಬಹದ್ದೂರ್ ಶಾಸ್ತ್ರಿ ಮಾರುಕಟ್ಟೆಯಲ್ಲಿ ಸಂತೆ ನಡೆಯುತ್ತದೆ

ನಗರದ ಶಾಸ್ತ್ರಿ ಮಾರುಕಟ್ಟೆ ಹಿಂಭಾಗದ ‘ಸಂತೆೆ’ ಸ್ಥಳ ಪಾಳುಬಿದ್ದಿದೆ. ಇದನ್ನು ಅಭಿವೃದ್ಧಿ ಪಡಿಸಿ ವ್ಯಾಪಾರಸ್ಥರಿಗೆ ನೀಡಿದರೆ, ಸರ್ಕಾರಕ್ಕೆ ಆದಾಯ, ನಮಗೆ ಅನುಕೂಲವಾಗುತ್ತದೆ- ಎನ್. ಪಿ ಗೌಳಿ, ಚಿಲ್ಲರೆ ವ್ಯಾಪಾರಿ, ಹಾವೇರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.