ಶುಕ್ರವಾರ, ಜನವರಿ 24, 2020
28 °C
ಆಸ್ಟ್ರೇಲಿಯಾಕ್ಕೆ 3–0 ಸರಣಿ ಮುನ್ನಡೆ

ಆಸೀಸ್‌ ತೆಕ್ಕೆಗೆ ‘ಆ್ಯಷಸ್' ಸರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಸೀಸ್‌ ತೆಕ್ಕೆಗೆ ‘ಆ್ಯಷಸ್' ಸರಣಿ

ಪರ್ತ್‌ (ಎಎಫ್‌ಪಿ): ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು150 ರನ್‌ಗಳ ಅಂತರದಿಂದ ಸೋಲಿಸುವ ಮೂಲಕ ಆ್ಯಷಸ್ ಟೆಸ್ಟ್ ಸರಣಿಯನ್ನು ಮರಳಿ ಪಡೆಯುವಲ್ಲಿ ಆಸ್ಟ್ರೇಲಿಯಾ ತಂಡ ಯಶಸ್ವಿಯಾಗಿದೆ. 5 ಟೆಸ್ಟ್‌ ಪಂದ್ಯಗಳಲ್ಲಿ ಆಸ್ಟ್ರೇಲಿಯಾಕ್ಕೆ 3–0ಯಿಂದ ಸರಣಿ ಮುನ್ನಡೆ ದೊರೆತಿದೆ.

ಡಬ್ಲ್ಯುಎಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಕಾಂಗರೂ ಪಡೆ ನೀಡಿದ್ದ 504 ರನ್‌ಗಳ ಗುರಿಗೆ ಉತ್ತರವಾಗಿ ಪ್ರವಾಸಿ ಇಂಗ್ಲೆಂಡ್‌ ತಂಡದವರು ಅಂತಿಮ ದಿನವಾದ ಮಂಗಳವಾರ 353 ರನ್‌ಗಳಿಗೆ ಆಲೌಟ್‌ ಆದರು. ಸರಣಿಯ 5 ಪಂದ್ಯಗಳಲ್ಲಿ 3–0 ಯಿಂದ ಆಸ್ಟ್ರೇಲಿಯಾ ತಂಡಕ್ಕೆ ಸರಣಿ ಜಯ ಲಭಿಸಿತು.

ಜಯದ ಕುರಿತು ಪ್ರತಿಕ್ರಿಯಿಸಿದ ನಾಯಕ ಕ್ಲಾರ್ಕ್, ಈ ಜಯಕ್ಕೆ ತಂಡದ ಒಟ್ಟೂ ಪರಿಶ್ರಮ ಕಾರಣ ಎಂದಿದ್ದಾರೆ. ಅಲ್ಲದೆ ಟೆಸ್ಟ್‌ನಲ್ಲಿ ನಂ 1 ಸ್ಥಾನಕ್ಕೆ ಮರಳ ಬೇಕಿದ್ದು, 5–0 ಯಿಂದ ಸರಣಿ ಸಂಪೂರ್ಣ ವಶ ಮಾಡಿಕೊಳ್ಳುವತ್ತ ಗಮನ ಹರಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಪ್ರವಾಸಿ ತಂಡವು ತನ್ನ ಎರಡನೇ ಇನಿಂಗ್ಸ್‌ನಲ್ಲಿ ನಾಲ್ಕನೇ ದಿನದಾಟದ ಅಂತ್ಯಕ್ಕೆ 67 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 251 ರನ್‌ ಗಳಿಸಿತ್ತು. ಕೊನೆಯದಿನವಾದ ಇಂದು 353ರನ್‌ಗಳಿಗೆ ಸರ್ವಪತನ ಕಂಡಿತು.

ನಾಲ್ಕನೇ ದಿನದಾಟದಂತ್ಯಕ್ಕೆ ಔಟಾಗದೇ ಕ್ರೀಸ್‌ನಲ್ಲಿದ್ದ ಬೆನ್ ಸ್ಟ್ರೋಕ್ ಅಂತಿಮ ದಿನವಾದ ಇಂದು (ಮಂಗಳವಾರ) ಶತಕ (120) ಸಿಡಿಸಿದರು. ಆದರೆ ಇನ್ನೊಂದು ಬದಿಯಲ್ಲಿ ಅವರಿಗೆ ಉತ್ತಮ ಜತೆಯಾಟ ನೀಡುವಲ್ಲಿ ಉಳಿದ ಆಟಗಾರರು ವಿಫಲರಾದರು. 

ಆಸೀಸ್ ಪರ ಉತ್ತಮ ದಾಳಿ ನಡೆಸಿದ ಜಾನ್ಸನ್ ಅಂತಿಮ ದಿನ 3 ವಿಕೆಟ್ ಪಡೆದರೆ, ಲಿಯೋನ್ 2 ವಿಕೆಟ್ ಪಡೆದರು.

 

ಪ್ರತಿಕ್ರಿಯಿಸಿ (+)