ಬರ್ಮಿಂಗ್ ಹ್ಯಾಂ (ಪಿಟಿಐ): ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡದ ಬ್ಯಾಟ್ಸ್ಮನ್ಗಳನ್ನು ಬೇಗನೇ ಕಟ್ಟಿ ಹಾಕಿದ ಇಂಗ್ಲೆಂಡ್ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ 48 ರನ್ಗಳ ಭರ್ಜರಿ ಗೆಲುವು ಸಾಧಿಸಿತು.

ಏಜ್ ಬಾಸ್ಟನ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆತಿಥೇಯ ಇಂಗ್ಲೆಂಡ್ ಮೊದಲು ಬ್ಯಾಟ್ ಮಾಡಿ 50 ಓವರ್ಗಳಲ್ಲಿ ಆರು ವಿಕೆಟ್ಗಳಲ್ಲಿ 269 ರನ್ಗಳನ್ನು ಕಲೆ ಹಾಕಿತು.

ಈ ಗುರಿಯನ್ನು ಮುಟ್ಟುವ ಹಾದಿಯ ಆರಂಭದಲ್ಲಿಯೇ ಆಘಾತ ಅನುಭವಿಸಿದ ಆಸೀಸ್ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 221 ರನ್ ಮಾತ್ರ ಗಳಿಸಿತು.

ಬೆಲ್ ಬಲ: ಇಯಾನ್ ಬೆಲ್ ಮತ್ತು ಜೊನಾಥನ್ ಟ್ರಾಟ್ ಅವರ ಜವಾಬ್ದಾರಿಯುತ ಬ್ಯಾಟಿಂಗ್ನಿಂದ ಇಂಗ್ಲೆಂಡ್ಗೆ ಉತ್ತಮ ಮೊತ್ತ ಕಲೆ ಹಾಕಲು ಸಾಧ್ಯವಾಯಿತು. ಆರಂಭಿಕ ಬ್ಯಾಟ್ಸ್ಮನ್ ಬೆಲ್ (91, 115ಎಸೆತ, 7 ಬೌಂಡರಿ) ಮತ್ತು ಟ್ರಾಟ್ (43, 56ಎಸೆತ, 1ಬೌಂಡರಿ) ಅವರ ಉತ್ತಮ ಆಟ ಇದಕ್ಕೆ ಕಾರಣ. ಎರಡನೇ ವಿಕೆಟ್ ಜೊತೆಯಾಟದಲ್ಲಿ ಈ ಜೋಡಿ 111 ರನ್ಗಳನ್ನು ಕಲೆ ಹಾಕಿ ಆಸೀಸ್ ಬೌಲರ್ಗಳನ್ನು ದಂಡಿಸಿದರು.

ಈಚೆಗೆ ನಡೆದ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಬೆಲ್ 82 ರನ್ ಗಳಿಸಿದ್ದರು. ಮತ್ತೆ ಈ ಪಂದ್ಯದಲ್ಲೂ ಉತ್ತಮ ಇನಿಂಗ್ಸ್ ಕಟ್ಟಿದರು. ಉತ್ತಮ ಆರಂಭ ಪಡೆದಿದ್ದ ಇಂಗ್ಲೆಂಡ್ ನಂತರ ಕುಸಿತ ಕಂಡಿತು. ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ಗಳ ವೈಫಲ್ಯ ಇದಕ್ಕೆ ಕಾರಣವಾಯಿತು.

ಜೋಯ್ ರೂಟ್ (12), ಎಯೊನ್ ಮಾರ್ಗನ್ (8), ಜಾಸ್ ಬಟ್ಲರ್ (1) ಬೇಗನೇ ವಿಕೆಟ್ ಒಪ್ಪಿಸಿದರು. ತಂಡದ ಒಟ್ಟು ಮೊತ್ತ 189 ಆಗಿದ್ದಾಗ ಬೆಲ್ ಮತ್ತು ರೂಟ್ ಔಟಾದಾಗ ರನ್ ಗಳಿಕೆಯ ವೇಗಿ ಕುಗ್ಗಿತು.ಆದರೆ, ರವಿ ಬೋಪಾರ ಔಟಾಗದೆ 37 ಎಸೆತಗಳಲ್ಲಿ 46 ರನ್ಗಳನ್ನು ಗಳಿಸಿ ತಂಡದ ಮೊತ್ತವನ್ನು 250ರ ಗಡಿ ದಾಟಿಸಿದರು.

ಪರದಾಡಿದ ಆಸೀಸ್: ಚಾಂಪಿಯನ್ಸ್ ಟ್ರೋಫಿಯಲ್ಲಿ ಎರಡು ವರ್ಷ ಪ್ರಶಸ್ತಿ ಎತ್ತಿ ಹಿಡಿದಿರುವ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್ ಬೌಲರ್ಗಳನ್ನು ಎದುರಿಸಲು ಸಾಕಷ್ಟು ಪ್ರಯಾಸ ಪಟ್ಟಿತು.

ಅಭ್ಯಾಸ ಪಂದ್ಯದ ವೇಳೆ ಭಾರತದ ಎದುರು ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಕೇವಲ 65ರನ್ಗಳಿಗೆ ಆಲ್ ಔಟ್ ಆಗಿದ್ದ ಆಸೀಸ್, ಆತಿಥೇಯರ ಎದುರೂ ಮುಗ್ಗರಿಸಿತು.

ಡೇವಿಡ್ ವಾರ್ನರ್ (9) ಮತ್ತು ಶೇನ್ ವ್ಯಾಟ್ಸನ್ (24) ಬೇಗನೇ ಪೆವಿಲಿಯನ್ ಸೇರಿದರು.ಮೂರು ವಿಕೆಟ್ಗಳನ್ನು ಉರುಳಿಸಿದ ವೇಗಿ ಜೇಮ್ಸ ಆ್ಯಂಡರ್ಸನ್ ಇಂಗ್ಲೆಂಡ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಸೋಲಿನ ಸಂಕಷ್ಟದಲ್ಲಿದ್ದ ತಂಡವನ್ನು ಗೆಲುವಿನ ದಡ ಸೇರಿಸಲು ನಾಯಕ ಜಾರ್ಜ್ ಬೈಲಿ (55, 69ಎಸೆತ, 2ಬೌಂಡರಿ) ನಡೆಸಿದ ಹೋರಾಟ ಸಾಕಾಗಲಿಲ್ಲ.

ಸ್ಕೋರ್ ವಿವರ
ಇಂಗ್ಲೆಂಡ್ 50 ಓವರ್ಗಳಲ್ಲಿ 269ಕ್ಕೆ6
ಅಲೆಸ್ಟರ್ ಕುಕ್ ಸಿ ವೇಡ್ ಬಿ ವ್ಯಾಟ್ಸನ್ 30
ಇಯಾನ್ ಬೆಲ್ ಬಿ ಜೇಮ್ಸ ಫಾಕ್ನರ್ 91
ಜೊನಾಥನ್ ಟ್ರಾಟ್ ಸಿ ವೇಡ್ ಬಿ ಸ್ಟ್ರಾಕ್ 43
ಜೇಯ್ ರೂಟ್ ಸಿ ಬೈಲಿ ಬಿ ಕ್ಲೈಂಟ್ ಮೆಕೆ 12
ಎಯೊನ್ ಮಾರ್ಗನ್ ಬಿ ಕ್ಲೈಂಟ್ ಮೆಕೆ 08
ರವಿ ಬೋಪಾರ ಔಟಾಗದೆ 46
ಜಾಸ್ ಬಟ್ಲರ್ ಬಿ ಜೇಮ್ಸ ಫಾಕ್ನರ್ 01
ಟಿಮ್ ಬ್ರೆಸ್ನಿನ್ ಔಟಾಗದೆ 19
ಇತರೆ: (ಲೆಗ್ ಬೈ-12, ವೈಡ್-6, ನೋ ಬಾಲ್-1) 19
ವಿಕೆಟ್ ಪತನ: 1-57 (ಕುಕ್; 11.4), 2-168 (ಟ್ರಾಟ್; 33.4), 3-189 (ಬೆಲ್; 37.4), 4-189 (ರೂಟ್; 38.3), 5-212 (ಮಾರ್ಗನ್; 42.5), 6-213 (ಬಟ್ಲರ್; 43.1).
ಬೌಲಿಂಗ್: ಮಿಷೆಲ್ ಸ್ಟ್ರಾಕ್ 10-0-75-1, ಮಿಷೆಲ್ ಜಾನ್ಸನ್ 8-0-44-0, ಕ್ಲೇಂಟ್ ಮೆಕೆ 10-0-38-2, ಶೇನ್ ವಾಟ್ಸನ್ 7-0-26-1, ಜೇಮ್ಸ ಫಾಕ್ನರ್ 10-0-48-2, ಆ್ಯಡಮ್ ವೊಗಸ್ 3-0-13-0, ಮಿಷೆಲ್ ಮಾರ್ಷ್ 2-0-13-0.

ಆಸ್ಟ್ರೇಲಿಯಾ 50 ಓವರ್ಗಳಲ್ಲಿ 9 ವಿಕೆಟ್ಗೆ 221
ಡೇವಿಡ್ ವಾರ್ನರ್ ಸಿ ಬಟ್ಲರ್ ಬಿ ಸ್ಟುವರ್ಟ್ ಬ್ರಾಡ್ 09
ಶೇನ್ ವಾಟ್ಸನ್ ಸಿ ಕುಕ್ ಬಿ ಟಿಮ್ ಬ್ರೆಸ್ನಿನ್ 24
ಫಿಲಿಪ್ ಹ್ಯೂಗಸ್ ಎಲ್ಬಿಡಬ್ಲ್ಯು ಬಿ ರೂಟ್ 30
ಜಾರ್ಜ್ ಬೈಲಿ ಸಿ ರೂಟ್ ಬಿ ಟ್ರೆಡ್ವೆಲ್ 55
ಆ್ಯಡಮ್ ವೊಗಸ್ ಬಿ ಟಿಮ್ ಬ್ರೆಸ್ನಿನ್ 15
ಮಿಷೆಲ್ ಮಾರ್ಷ್ ಸಿ ಮಾರ್ಗನ್ ಬಿ ಆ್ಯಂಡರ್ಸನ್ 05
ಮ್ಯಾಥ್ಯು ವೇಡ್ ಸಿ ಬಟ್ಲರ್ ಬಿ ಆ್ಯಂಡರ್ಸನ್ 01
ಜೇಮ್ಸ ಫಾಕ್ನರ್ ಔಟಾಗದೆ 54
ಮಿಷೆಲ್ ಜಾನ್ಸನ್ ಸಿ ಮಾರ್ಗನ್ ಬಿ ಬೋಪಾರ 08
ಮಿಷೆಲ್ ಸ್ಟ್ರಾಕ್ ಬಿ ಆ್ಯಂಡರ್ಸನ್ 05
ಕ್ಲಿಂಟ್ ಮೆಕ್ಕೇ ಔಟಾಗದೆ 07
ಇತರೆ: (ಲೆಗ್ ಬೈ-6, ವೈಡ್-1, ನೋಬಾಲ್-1) 08
ವಿಕೆಟ್ ಪತನ: 1-17 (ವಾರ್ನರ್; 5.5), 2-47 (ವ್ಯಾಟ್ಸನ್; 14.3), 3-94 (ಹ್ಯೂಗಸ್; 25.4), 4-127 (ವೊಗಸ್; 32.4), 5-134 (ಮಾರ್ಷ್; 35.1), 6-136 (ವೇಡ್; 35.6), 7-151 (ಬೈಲಿ; 39.1), 8-175 (ಜಾನ್ಸನ್; 42.4), 9-190 (ಸ್ಟ್ರಾಕ್; 44.5).
ಬೌಲಿಂಗ್: ಜೇಮ್ಸ ಆ್ಯಂಡರ್ಸನ್ 10-0-30-3, ಸ್ಟುವರ್ಟ್ ಬ್ರಾಡ್ 10-2-35-1 , ಟಿಮ್ ಬ್ರೆಸ್ನಿನ್ 10-1-45-2, ಜೇಮ್ಸ ಟ್ರೆಡ್ವೆಲ್ 10-1-51-2, ಜೋಯ್ ರೂಟ್ 5-0-20-1, ರವಿ ಬೋಪಾರ 5-0-34-1.

ಫಲಿತಾಂಶ: ಇಂಗ್ಲೆಂಡ್ಗೆ 48 ರನ್ ಗೆಲುವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.