ಅಹಮದಾಬಾದ್: ನಾಲ್ಕು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ತಂಡ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭರ್ಜರಿ ಗೆಲುವಿನ ಮೂಲಕ ಶುಭಾರಂಭ ಮಾಡಿದೆ. ಮೊಟೇರಾದ ಸರ್ದಾರ್ ಪಟೇಲ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ರಿಕಿ ಪಾಂಟಿಂಗ್ ಬಳಗ 91 ರನ್‌ಗಳಿಂದ ಜಿಂಬಾಬ್ವೆ ತಂಡವನ್ನು ಮಣಿಸಿತು.

ಮೊದಲು ಆಸ್ಟ್ರೇಲಿಯಾ ತಂಡವನ್ನು 262 ರನ್‌ಗಳಿಗೆ ನಿಯಂತ್ರಿಸಿದಾಗ ಜಿಂಬಾಬ್ವೆಯಿಂದ ಅಚ್ಚರಿಯ ಫಲಿತಾಂಶ ನಿರೀಕ್ಷಿಸಲಾಗಿತ್ತು. ಆದರೆ ಬ್ಯಾಟಿಂಗ್ ವೈಫಲ್ಯದಿಂದ ತಂಡ ಸೋಲಿನ ಹಾದಿ ಹಿಡಿಯಿತು. ಎಲ್ಟಾನ್ ಚಿಗುಂಬುರ ನೇತೃತ್ವದ ತಂಡ 46.2 ಓವರ್‌ಗಳಲ್ಲಿ 171 ರನ್‌ಗಳಿಗೆ ಆಲೌಟಾಯಿತು.

ಶೇನ್ ವ್ಯಾಟನ್ಸ್ (79, 92 ಎಸೆತ, 8 ಬೌಂ. 1 ಸಿಕ್ಸರ್), ಮೈಕಲ್ ಕ್ಲಾರ್ಕ್ (ಅಜೇಯ 58, 55 ಎಸೆತ, 4 ಬೌಂ) ಹಾಗೂ ಬೌಲಿಂಗ್‌ನಲ್ಲಿ ಮಿಂಚಿದ ಮಿಷೆಲ್ ಜಾನ್ಸನ್ (19ಕ್ಕೆ 4) ಅವರು ಆಸೀಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.ಸವಾಲಿನ ಗುರಿ ಬೆನ್ನಟ್ಟಿದ ಜಿಂಬಾಬ್ವೆ 44 ರನ್ ಗಳಿಸುವಷ್ಟರಲ್ಲೇ ನಾಲ್ಕು ವಿಕೆಟ್ ಕಳೆದುಕೊಂಡಿತು. ಆ ಬಳಿಕ ಚೇತರಿಸಿಕೊಳ್ಳಲಿಲ್ಲ. ಗ್ರೇಮ್ ಕ್ರೆಮರ್ (37), ಸೀನ್ ವಿಲಿಯಮ್ಸ್ (28) ಮತ್ತು ಪ್ರಾಸ್ಪರ್ ಉತ್ಸೇಯ (24) ಅಲ್ಪ ಹೊತ್ತು ಕ್ರೀಸ್‌ನಲ್ಲಿರುವ ಛಲ ತೋರಿದ ಕಾರಣ ಸೋಲಿನ ಅಂತರ ಕಡಿಮೆಯಾಯಿತು.

ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಬಹಳ ಪ್ರಯಾಸದಿಂದ ರನ್ ಪೇರಿಸಿತು. ಜಿಂಬಾಬ್ವೆ ಬೌಲರ್‌ಗಳು ಆರಂಭದಲ್ಲಿ ಬಿಗುವಾದ ದಾಳಿ ನಡೆಸಿದರು. ಪರಿಸ್ಥಿತಿಗೆ ಹೊಂದಿಕೊಂಡ ಬಳಿಕ ಶೇನ್ ವ್ಯಾಟ್ಸನ್ ಆಕ್ರಮಣಕಾರಿ ಆಟಕ್ಕೆ ಮುಂದಾದರು. ಎರಡನೇ ವಿಕೆಟ್‌ಗೆ ಅವರು ಪಾಂಟಿಂಗ್ ಜೊತೆ 79 ರನ್ ಸೇರಿಸಿದರು. ಆದರೆ ಒಂಬತ್ತು ಎಸೆತಗಳ ಅಂತರದಲ್ಲಿ ಇವರಿಬ್ಬರು ಪೆವಿಲಿಯನ್‌ಗೆ ಮರಳಿದರು.

40ನೇ ಓವರ್ ಕೊನೆಗೊಂಡಾಗ ಆಸ್ಟ್ರೇಲಿಯಾ 172 ರನ್ ಗಳಿಸಿತ್ತು. ಕೊನೆಯ 10 ಓವರ್‌ಗಳಲ್ಲಿ ತಂಡ 90 ರನ್ ಕಲೆಹಾಕಿತು.

ಸ್ಕೋರ್ ವಿವರ
ಆಸ್ಟ್ರೇಲಿಯಾ: 50 ಓವರ್‌ಗಳಲ್ಲಿ 6 ವಿಕೆಟ್‌ಗೆ 262
ಶೇನ್ ವ್ಯಾಟ್ಸನ್ ಎಲ್‌ಬಿಡಬ್ಲ್ಯು ಬಿ ಗ್ರೇಮ್ ಕ್ರೆಮರ್ 79
ಬ್ರಾಡ್ ಹಡಿನ್ ಎಲ್‌ಬಿಡಬ್ಲ್ಯು ಬಿ ಪ್ರಾಸ್ಪರ್ ಉತ್ಸೇಯ 29
ರಿಕಿ ಪಾಂಟಿಂಗ್ ರನೌಟ್ 28
ಮೈಕಲ್ ಕ್ಲಾರ್ಕ್ ಔಟಾಗದೆ 58
ಕ್ಯಾಮರೂನ್ ವೈಟ್ ಬಿ ಕ್ರಿಸ್ ಮೊಫು 22
ಡೇವಿಡ್ ಹಸ್ಸಿ ಬಿ ರೇ ಪ್ರೈಸ್ 14
ಸ್ಟೀವನ್ ಸ್ಮಿತ್ ಸಿ ಚಕಾಬ್ವ ಬಿ ಕ್ರಿಸ್ ಮೊಫು 11
ಮಿಷೆಲ್ ಜಾನ್ಸನ್ ಔಟಾಗದೆ 07
ಇತರೆ: (ಲೆಗ್‌ಬೈ-7, ವೈಡ್-7) 1 4

ವಿಕೆಟ್ ಪತನ: 1-61 (ಹಡಿನ್; 18.5), 2-140 (ವ್ಯಾಟ್ಸನ್; 31.2), 3-144 (ಪಾಂಟಿಂಗ್; 32.5), 4-207 (ವೈಟ್; 44.6), 5-241 (ಹಸ್ಸಿ; 48.1), 6-254 (ಸ್ಮಿತ್; 49.1).
ಬೌಲಿಂಗ್: ಕ್ರಿಸ್ ಮೊಫು 9-0-58-2, ರೇ ಪ್ರೈಸ್ 10-0-43-1, ಪ್ರಾಸ್ಪರ್ ಉತ್ಸೇಯ 10-2-43-1, ಗ್ರೇಮ್ ಕ್ರೆಮರ್ 10-0-41-1, ಬ್ರೆಂಡನ್ ಟೇಲರ್ 3-0-23-0, ಎಲ್ಟಾನ್ ಚಿಗುಂಬುರ 2-0-18-0, ಸೀನ್ ವಿಲಿಯಮ್ಸ್ 6-0-29-0

ಜಿಂಬಾಬ್ವೆ: 46.2 ಓವರ್‌ಗಳಲ್ಲಿ 171
ಬ್ರೆಂಡನ್ ಟೇಲರ್ ಬಿ ಶಾನ್ ಟೇಟ್ 16
ಚಾರ್ಲ್ಸ್ ಕೊವೆಂಟ್ರಿ ಸಿ ಮತ್ತು ಬಿ ಬ್ರೆಟ್ ಲೀ 14
ತಟೇಂಡ ತೈಬು ಸಿ ವ್ಯಾಟ್ಸನ್ ಬಿ ಮಿಷೆಲ್ ಜಾನ್ಸನ್ 07
ಕ್ರೆಗ್ ಎರ್ವಿನ್ ಎಲ್‌ಬಿಡಬ್ಲ್ಯು ಬಿ ಮಿಷೆಲ್ ಜಾನ್ಸನ್ 00
ಎಲ್ಟಾನ್ ಚಿಗುಂಬುರ ಸಿ ಹಡಿನ್ ಬಿ ಜಾಸನ್ ಕ್ರೇಜಾ 14
ಸೀನ್ ವಿಲಿಯಮ್ಸ್ ಸಿ ವ್ಯಾಟ್ಸನ್ ಬಿ ಶಾನ್ ಟೇಟ್ 28
ರೆಜಿಸ್ ಚಕಾಬ್ವ ಎಲ್‌ಬಿಡಬ್ಲ್ಯು ಬಿ ಜಾಸನ್ ಕ್ರೇಜಾ 06
ಪ್ರಾಸ್ಪರ್ ಉತ್ಸೇಯ ಸಿ ಪಾಂಟಿಂಗ್ ಬಿ ಡೇವಿಡ್ ಹಸ್ಸಿ 24
ಗ್ರೇಮ್ ಕ್ರೆಮರ್ ಸಿ ಹಡಿನ್ ಬಿ ಮಿಷೆಲ್ ಜಾನ್ಸನ್ 37
ರೇ ಪ್ರೈಸ್ ಔಟಾಗದೆ 05
ಕ್ರಿಸ್ ಮೊಫು ಸಿ ಹಡಿನ್ ಬಿ ಮಿಷೆಲ್ ಜಾನ್ಸನ್ 02
ಇತರೆ: (ಬೈ-4. ಲೆಗ್‌ಬೈ-9, ವೈಡ್-3, ನೋಬಾಲ್-2) 18

ವಿಕೆಟ್ ಪತನ: 1-22 (ಕೊವೆಂಟ್ರಿ; 5.4), 2-40 (ಟೈಬು; 10.3), 3-40 (ಟೇಲರ್; 11.2), 4-44 (ಎರ್ವಿನ್; 12.3), 5-88 (ಚಿಗುಂಬುರ; 21.2), 6-96 (ವಿಲಿಯಮ್ಸ್; 24.6), 7-104 (ಚಕಾಬ್ವ; 27.2), 8-153 (ಉತ್ಸೇಯ; 39.2), 9-167 (ಕ್ರೆಮರ್; 42.4), 10-171 (ವೊಫು; 46.2).
ಬೌಲಿಂಗ್: ಶಾನ್ ಟೇಟ್ 9-1-34-2, ಬ್ರೆಟ್ ಲೀ 8-1-34-1, ಮಿಷೆಲ್ ಜಾನ್ಸನ್ 9.2-2-19-4, ಜಾಸನ್ ಕ್ರೇಜಾ 8-0-28-2, ಶೇನ್ ವ್ಯಾಟ್ಸನ್ 3-0-7-0, ಸ್ಟೀವನ್ ಸ್ಮಿತ್ 5-0-24-0, ಡೇವಿಡ್ ಹಸ್ಸಿ 4-1-12-1

ಫಲಿತಾಂಶ: ಆಸ್ಟ್ರೇಲಿಯಾಕ್ಕೆ 91 ರನ್ ಗೆಲುವು
ಪಂದ್ಯಶ್ರೇಷ್ಠ: ಶೇನ್ ವ್ಯಾಟ್ಸನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.