ಶುಕ್ರವಾರ, ಮೇ 14, 2021
27 °C

ಆಸ್ಟ್ರೇಲಿಯಾ: ಸಂಗಾತಿಯೊಂದಿಗೆ ನಗ್ನರಾಗಿದ್ದ ಪ್ರಧಾನಿ, ಸಂಸದರ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೆಲ್ಬರ್ನ್ (ಪಿಟಿಐ): ಆಸ್ಟ್ರೇಲಿಯಾ ಪ್ರಧಾನಿ ಜುಲಿಯಾ ಗಿಲ್ಲಾರ್ಡ್ ತಮ್ಮ ಸಂಗಾತಿ ಟಿಮ್ ಮ್ಯಾಥಿಸನ್ ಜೊತೆ ತಮ್ಮ ಕಚೇರಿಯಲ್ಲಿ ರಾಷ್ಟ್ರಧ್ವಜದ ಹಿಂದೆ ನಗ್ನರಾಗಿದ್ದ ದೃಶ್ಯವು ಇಲ್ಲಿನ ಮಾಧ್ಯಮದಲ್ಲಿ ಬಿತ್ತರಗೊಂಡಿರುವ ಕಾರಣ ಸಂಸದರು ಪ್ರಧಾನಿಯವರ ಮೇಲೆ ಆಕ್ರೋಶಗೊಂಡಿದ್ದಾರೆ.ಮಾಧ್ಯಮದಲ್ಲಿ ಅಪಹಾಸ್ಯಕ್ಕೀಡಾಗಿರುವ ಪ್ರಧಾನಿ ಗಿಲ್ಲಾರ್ಡ್ ಪ್ರಧಾನಮಂತ್ರಿ ಸ್ಥಾನದ ಘನತೆ, ಗೌರವವನ್ನು ಮಣ್ಣುಪಾಲು ಮಾಡಿದ್ದಾರೆ ಎಂದು ಆಸ್ಟ್ರೇಲಿಯಾದ ಸಂಸದರು  ಪಕ್ಷಾತೀತವಾಗಿ ಟೀಕಿಸಿದ್ದಾರೆ.ಈ ದೃಶ್ಯವನ್ನು ಪ್ರಸಾರ ಮಾಡಿದ ರಾಷ್ಟ್ರೀಯ ಪ್ರಸಾರ ವಾಹಿನಿ `ಎಬಿಸಿ~ಗೆ ನೀಡುತ್ತಿರುವ ಅನುದಾನವನ್ನು ಸ್ಥಗಿತ ಮಾಡುವ ಬಗ್ಗೆ ಪರಿಶೀಲಿಸಬೇಕು ಎಂದೂ ಸಂಸದರು ಒತ್ತಾಯಿಸಿದ್ದಾರೆ.`ಎಬಿಸಿ~ ವಾಹಿನಿ ಪ್ರಸಾರ ಮಾಡುತ್ತಿರುವ `ಜುಲಿಯಾ ಅವರೊಂದಿಗೆ ಮನೆಯಲ್ಲಿ~ ಕಾರ್ಯಕ್ರಮದ ಕೊನೆಯ ಕಂತು ಬುಧವಾರ ಪ್ರಸಾರವಾಗಲಿದೆ. ಆದರೆ ಸಂಸದರು, ವಾಹಿನಿಯು ಸದಭಿರುಚಿಯ ಎಲ್ಲೆ ಮೀರುತ್ತಿದೆ ಎಂದು ಕಿಡಿಕಾರಿದ್ದಾರೆ.`ಪ್ರಧಾನಿ ತಮ್ಮ ಕಚೇರಿಯಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದು ಮತ್ತು ಇದಕ್ಕೆ ರಾಷ್ಟ್ರಧ್ವಜವನ್ನು ದುರ್ಬಳಕೆ ಮಾಡಿಕೊಳ್ಳುವುದು ಅತ್ಯಂತ ನೀಚತನ~ ಎಂದು ಕ್ಯಾನ್ಬೆರಾದಲ್ಲಿ ಮಂಗಳವಾರ ನಡೆದ ಜಂಟಿ ಪಕ್ಷಗಳ ಸಭೆಯಲ್ಲಿ ನ್ಯಾಷನಲ್ ಪಕ್ಷದ ಸಂಸದರು ಖಂಡಿಸಿದ್ದಾರೆ.`ಎಬಿಸಿ~ ವಾಹಿನಿ ಬಿತ್ತರಿಸುತ್ತಿರುವ ಈ ಕಾರ್ಯಕ್ರಮವು ಪ್ರಧಾನಿ ಕಚೇರಿಯ ಘನತೆ, ಗೌರವಕ್ಕೆ ಮಸಿ ಬಳಿದಿದೆ ಎಂದು ಲಿಬರಲ್ ಪಕ್ಷದ ಸಂಸದರು ಹೇಳಿದ್ದಾರೆ.ಈ ಮಧ್ಯೆ `ಎಬಿಸಿ~ ವಾಹಿನಿಯು ಈ ವಿವಾದಾತ್ಮಕ ದೃಶ್ಯ ಪ್ರಸಾರ ಮಾಡಿದ್ದನ್ನು ಸಮರ್ಥಿಸಿಕೊಂಡಿದೆ. ಪ್ರಧಾನಿ ಕಚೇರಿಯು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.