ಚಿತ್ರದುರ್ಗ: ತಾಲ್ಲೂಕಿನ ಹಿರೇಗುಂಟನೂರು ಗ್ರಾಮದಲ್ಲಿ ಖಾಲಿ ನಿವೇಶನವಿದ್ದರೂ ಸುಸಜ್ಜಿತವಾದ ಆಸ್ಪತ್ರೆ ನಿರ್ಮಿಸಲು ಆರೋಗ್ಯ ಇಲಾಖೆಗೆ ಸಾಧ್ಯವಾಗಿಲ್ಲ.2008ರ ನವೆಂಬರ್ 10ರಂದು ಹಿರೇಗುಂಟನೂರು ಗ್ರಾಮ ಪಂಚಾಯ್ತಿ ವತಿಯಿಂದ ಆಸ್ಪತ್ರೆ ನಿರ್ಮಿಸಲು ನಿವೇಶನವೊಂದನ್ನು ಆರೋಗ್ಯ ಇಲಾಖೆಗೆ ದಾನವಾಗಿ ನೀಡಲಾಗಿತ್ತು. ಆದರೆ, ಇದುವರೆಗೆ ಇಲ್ಲಿ ಆಸ್ಪತ್ರೆ ನಿರ್ಮಿಸುವ ಕನಸು ನನಸಾಗಿಯೇ ಉಳಿದಿದೆ. ಜನಪ್ರತಿನಿಧಿಗಳು ಸಹ ಈ ಬಗ್ಗೆ ಗಮನಹರಿಸುತ್ತಿಲ್ಲ ಎನ್ನುವುದು ಗ್ರಾಮಸ್ಥರ ಅಳಲು.

ಪ್ರಸ್ತುತ ಗ್ರಾಮದಲ್ಲಿ ಎರಡು ಕೊಠಡಿಗಳಿರುವ ಸಣ್ಣ ಕಟ್ಟಡದಲ್ಲಿ ಆಸ್ಪತ್ರೆ ನಡೆಯುತ್ತಿದೆ. ಈ ಕಟ್ಟಡದ ಛಾವಣಿ ಬಿರುಕು ಬಿಟ್ಟಿರುವುದರಿಂದ ಮಳೆಗಾಲದಲ್ಲಿ ಸೋರುತ್ತಿವೆ. ಇದರಿಂದಾಗಿ ಗ್ರಾಮಸ್ಥರು ನರಕಯಾತನೆ ಅನುಭವಿಸಬೇಕಾಗಿದೆ.ಹಿರೇಗುಂಟನೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ 12 ಹಳ್ಳಿಗಳು ಸೇರುತ್ತವೆ. ಜತೆಗೆ ಇದು ಹೋಬಳಿ ಕೇಂದ್ರ. 12 ಗ್ರಾಮಗಳ ಜತೆಗೆ ಸುತ್ತಮುತ್ತವಿರುವ ಎಲ್ಲ ಹಳ್ಳಿಗಳ ಜನರಿಗೂ ಈ ಸ್ಥಳ ಅನುಕೂಲ ಆಗಿರುವುದರಿಂದ ಸುಸಜ್ಜಿತ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಿಸಬೇಕು ಎನ್ನುವುದು ಗ್ರಾಮಸ್ಥರ ಒತ್ತಾಯ.

ಹಿಂದೆ ಆಸ್ಪತ್ರೆ ನಿರ್ಮಿಸಲು ಪ್ರಯತ್ನಗಳು ನಡೆದರೂ ಹಲವು ರೀತಿಯ ಅಡೆತಡೆಗಳಿಂದ ನೆನೆಗುದಿಗೆ ಬಿದ್ದಿದೆ. ಈಗ ಗ್ರಾಮಸ್ಥರು ಹೆರಿಗೆ ಅಥವಾ ಇನ್ನಿತರ ಕಾಯಿಲೆಗಳಿಗೂ ಚಿತ್ರದುರ್ಗ ಅಥವಾ ದಾವಣಗೆರೆಗೆ ತೆರಳಬೇಕಾದ ಸ್ಥಿತಿ ಇದೆ. ಈ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಆಗ್ರಹಿಸುತ್ತಾರೆ.ಜತೆಗೆ ಗ್ರಾಮದಲ್ಲಿರುವ ಬಿಸಿಎಂ ಹಾಸ್ಟೆಲ್ ಸಹ ಬಾಡಿಗೆ ಕಟ್ಟಡದಲ್ಲಿದೆ. ಆಸ್ಪತ್ರೆ ಮತ್ತು ಹಾಸ್ಟೆಲ್ಗಳಿಗೆ ಸ್ವಂತ, ಸುಸಜ್ಜಿತ ಕಟ್ಟಡಗಳನ್ನು ನಿರ್ಮಿಸುವ ಮೂಲಕ ಸಮಸ್ಯೆಗಳನ್ನು ಬಗೆಹರಿಸಬೇಕು ಎನ್ನುವುದು ಗ್ರಾಮಸ್ಥರ ಆಶಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.