ಸೋಮವಾರ, ಮೇ 17, 2021
25 °C

ಆಹಾರ ಮತ್ತು ವೈನ್‌ಗೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಿಶೆ ಏರಿಸುವ ಮದಿರೆ, ಜೊತೆಗೊಂದಿಷ್ಟು ಕರಿದ ತಿನಿಸಿದ್ದರೆ ಅದಕ್ಕಿಂತ ಸ್ವರ್ಗ ಬೇರೊಂದಿಲ್ಲ. ಬಗೆಬಗೆಯ ಮದ್ಯ, ಜತೆಗೆ ನಂಜಿಕೊಳ್ಳಲು ಮಾಂಸಾಹಾರ, ಸಸ್ಯಾಹಾರ ಖಾದ್ಯಗಳು ಇದ್ದರೆ ಡಬ್ಬಲ್ ಧಮಾಕಾ.ಇವೆರಡರ ಅಭೂತ ಪೂರ್ಣ ಸಂಗಮವೇ `ಅಪ್ಪರ್ ಕ್ರಸ್ಟ್~ ಆಹಾರ ಮತ್ತು ವೈನ್ ಪ್ರದರ್ಶನ. ಮುಂಬೈಯ ಛಾಯಾಗ್ರಾಹಕಿ, ಪತ್ರಕರ್ತೆ ಫರ್ಜಾನಾ ಬೆರ್ಹಾಂ ಕಂಟ್ರಾಕ್ಟರ್ ಆಯೋಜಿಸಿದ ಮೇಳಕ್ಕೆ ಶುಕ್ರವಾರ ಫ್ಯಾಶನ್ ಗುರು ಪ್ರಸಾದ್ ಬಿಡ್ಡಪ್ಪ, ಫ್ಯಾಶನ್ ಡಿಸೈನರ್‌ಗಳಾದ ಸಂಚಿತಾ ಅಜ್ಜಂಪುರ್, ಮನೋವಿರಾಜ್ ಖೋಸ್ಲಾ ಚಾಲನೆ ನೀಡಿದರು.ಹುಲ್ಲು ಹಾಸಿನ ನಡುವೆ ನಿರ್ಮಿಸಿರುವ ಬೃಹತ್ ವೇದಿಕೆಯಲ್ಲಿ ಪಾಕ ಪ್ರವೀಣರಾದ ಮಣಿ ಪಾಠಕ್, ಜಾಹೀರ್ ಖಾನ್ ಆರೋಗ್ಯಕರ ತಿನಿಸುಗಳನ್ನು ತಯಾರಿಸುವ ಬಗೆಯನ್ನು ಪ್ರಾತ್ಯಕ್ಷಿಕೆ ಮೂಲಕ ಪ್ರದರ್ಶಿಸಿದರು.ಬೆಂಗಳೂರಿನ ಐಶಾರಾಮಿ ಹೋಟೆಲ್‌ಗಳ ಪ್ರತ್ಯೇಕ ಮಳಿಗೆಗಳು ಈ ಮೇಳದಲ್ಲಿದೆ. ವಿವಿಧ ಬಗೆಯ ರುಚಿಕರ ಖಾದ್ಯಗಳು, ವಿಶ್ವ ದರ್ಜೆಯ ಬ್ರಾಂಡೆಡ್ ವೈನ್‌ಗಳು ಇಲ್ಲಿ ಲಭ್ಯ. ಮೇಳದಲ್ಲಿ ಭೋಜನ ಪ್ರಿಯರು ಸ್ಪಾನಿಶ್, ಚೈನೀಸ್, ಅಮೆರಿಕನ್ ಹಾಗೂ ಭಾರತೀಯ ಶೈಲಿಯ ಆಹಾರ ಪದಾರ್ಥಗಳನ್ನು ಸವಿಯಬಹುದು.ಶನಿವಾರ ತಾರಾ ಹೋಟೆಲ್ ಶೆಫ್‌ಗಳಾದ ಗಿವನ್ನಿ ಬಟ್ಟೀಸ್ಟ, ಜಾರ್ಜ್ ಜಯಸೂರ್ಯ ತಮ್ಮ ಕೈಚಳಕ ಪ್ರದರ್ಶಿಸಲಿದ್ದಾರೆ.ಭಾನುವಾರ ಶೆಫ್‌ಗಳಾದ ಮಾಕೊ ರವೀಂದ್ರನ್, ಅಭಿಜಿತ್ ಶಾ, ಸಂದೀಪ್ ಬಿಸ್ವಾಸ್ ಭಾರತೀಯ ಶೈಲಿಯ ಆಹಾರ ಹಾಗೂ ಚೀಸ್ ಡಿಲೈಟ್ ತಯಾರಿಸುವ ಬಗೆಯನ್ನು ತೋರಿಸಲಿದ್ದಾರೆ. ಸ್ಥಳ: ಲಲಿತ್ ಅಶೋಕ, ಕುಮಾರಕೃಪಾ ರಸ್ತೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.