ನವದೆಹಲಿ (ಪಿಟಿಐ): ಬೇಳೆಕಾಳು ಮತ್ತು ತರಕಾರಿ ಬೆಲೆಗಳು ಅಗ್ಗವಾಗಿರುವುದರಿಂದ ಜೂನ್ 4ಕ್ಕೆ ಕೊನೆಗೊಂಡ ವಾರಾಂತ್ಯದಲ್ಲಿ ಆಹಾರ ಹಣದುಬ್ಬರವು ಶೇ 8.96ಕ್ಕೆ ಇಳಿದಿದೆ.

ಸಗಟು ಬೆಲೆ ಸೂಚ್ಯಂಕ ಆಧರಿಸಿದ ಆಹಾರ ಹಣದುಬ್ಬರವು ಹಿಂದಿನ ವಾರ ಶೇ 9.01ರಷ್ಟಿದ್ದರೆ, ಹಿಂದಿನ ವರ್ಷದ ಜೂನ್ ಮೊದಲ ವಾರದಲ್ಲಿ ಶೇ 21ರಷ್ಟಿತ್ತು. ಈಗ ಕುಸಿತ ದಾಖಲಿಸಿರುವುದು ಅತ್ಯಂತ ಕಡಿಮೆ ಪ್ರಮಾಣದಲ್ಲಿದ್ದರೂ, ಕೆಲ ತಿಂಗಳುಗಳಿಂದ ಎಲ್ಲ ವಲಯಗಳಲ್ಲಿ ಬೆಲೆ ಏರಿಕೆಯ ಬಿಸಿ ಎದುರಿಸುತ್ತಿರುವ ಕೇಂದ್ರ ಸರ್ಕಾರವು ಈ ವಿದ್ಯಮಾನವನ್ನು `ಕತ್ತಲೆಯಲ್ಲಿನ ಬೆಳ್ಳಿ ರೇಖೆ~ ಎಂದೇ ಪರಿಗಣಿಸಿದೆ.

ಪರಾಮರ್ಶೆಯಲ್ಲಿ ಇರುವ ವಾರದಲ್ಲಿ ಬೇಳೆಕಾಳು ಬೆಲೆಗಳು ವರ್ಷದ ಆಧಾರದಲ್ಲಿ ಶೇ 10ರಷ್ಟು ಮತ್ತು ತರಕಾರಿಗಳು ಶೇ 1.39ರಷ್ಟು ಅಗ್ಗವಾಗಿವೆ. ಇತರ ಆಹಾರ ಪದಾರ್ಥಗಳ ಬೆಲೆಗಳು ಮಾತ್ರ ಏರುತ್ತಲ್ಲೇ ಇವೆ. ಹಣ್ಣುಗಳು ಶೇ 30ರಷ್ಟು ತುಟ್ಟಿಯಾಗಿದ್ದರೆ, ಹಾಲು ಶೇ 10.59, ಮೊಟ್ಟೆ- ಮಾಂಸ ಮತ್ತು ಮೀನು ಶೇ 7.31ರಷ್ಟು ದುಬಾರಿಯಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.