ಕೊಬ್ಬರಿ ಹೋಳಿಗೆ
ಬೇಕಾಗುವ ಪದಾರ್ಥಗಳು: ಕೊಬ್ಬರಿ 1, ಸಕ್ಕರೆ/ಬೆಲ್ಲ ತಕ್ಕಷ್ಟು, ಮೈದಾ+ಚಿರೋಟಿರವೆ, ಏಲಕ್ಕಿಪುಡಿ, ಎಣ್ಣೆ, ಸ್ವಲ್ಪ ಕಾಯಿತುರಿ, ಗೋದಿಹಿಟ್ಟು ಅರ್ಧ ಕಪ್ಪು.

ಮಾಡುವ ವಿಧಾನ: ಚಿರೋಟಿರವೆ ಮೈದಾ ಅರಿಶಿಣ ಸೇರಿಸಿ ನೀರು ಹಾಕಿ ಕಲಸಿ, ಎಣ್ಣೆ ಸೇರಿಸಿ ಮಿದ್ದು ಒದ್ದೆಬಟ್ಟೆಯಲ್ಲಿ ಅರ್ಧ ಗಂಟೆ ಮುಚ್ಚಿಡಿ. ಇದು ಕಣಕ.

ಕೊಬ್ಬರಿತುರಿ, ಬೆಲ್ಲದಪುಡಿ, ಸ್ವಲ್ಪ ಕಾಯಿತುರಿ ಸೇರಿಸಿ ನುಣ್ಣಗೆ ತಿರುವಿ, ಹುರಿದ ಗೋದಿಹಿಟ್ಟು ಹಾಕಿ ಕಲಸಿದರೆ ಇದೇ ಹೂರಣ. (ಬೆಲ್ಲದ ಬದಲಿಗೆ ಸಕ್ಕರೆಪುಡಿ ಸೇರಿಸಬಹುದು)

ನಿಂಬೆಗಾತ್ರದ ಕಣಕ ಅದಕ್ಕಿಂತ ಕಡಿಮೆ ಹೂರಣ ತೆಗೆದುಕೊಳ್ಳಿ, ಕಣಕದೊಳಕ್ಕೆ ಹೂರಣ ಸೇರಿಸಿ ಎಣ್ಣೆ ಸವರಿದ ಬಾಳೆಯ ಮೇಲೆ ಒತ್ತಿ ಕಾದಕಾವಲಿಗೆ ಎಣ್ಣೆ ಸವರಿ ಎರಡೂ ಕಡೆಯೂ ಬೇಯಿಸಿ ತೆಗೆಯಿರಿ.

ಕಡ್ಲೇಬೇಳೆ ಹೋಳಿಗೆ
ಬೇಕಾಗುವ ಪದಾರ್ಥಗಳು: ಕಡ್ಲೇಬೇಳೆ 1 ಪಾವು, ಕಾಯಿತುರಿ 1 ಹೋಳಿನದು, ಬೆಲ್ಲ (ಹೆರೆದ ಬೆಲ್ಲ) ಒಂದೂವರೆ ಪಾವು, ಮೈದಾ 1 ಕಪ್ಪು, ಚಿರೋಟಿರವೆ 4 ಕಪ್ಪು, ಎಣ್ಣೆ, ಅರಿಶಿಣ, ಏಲಕ್ಕಿಪುಡಿ.

ಮಾಡುವ ವಿಧಾನ: ಅರಿಶಿಣ, ಮೈದಾ+ರವೆ ಸೇರಿಸಿ ನೀರುಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ, ಎಣ್ಣೆಹಾಕಿ ಮಿದ್ದು, ಮುಚ್ಚಿಡಿ, ಇದು 2 ಗಂಟೆ ನೆನೆಯಲಿ.

ಕಡ್ಲೇಬೇಳೆಯನ್ನ ದಿಂಡಾಗಿ ಬೇಯಿಸಿ, ಬೆಲ್ಲ ಕಾಯಿತುರಿ ಏಲಕ್ಕಿಪುಡಿ ಸೇರಿಸಿ ಒಂದು ಸುತ್ತು ಕೂಡಿಸಿ, ಆರಿದ ಮೇಲೆ ನುಣ್ಣಗೆ ತಿರುವಿ ಹೂರಣ ತಯಾರಿಸಿಕೊಳ್ಳಿ. ಬಾಳೆಎಲೆಗೆ ಎಣ್ಣೆ ಸವರಿ, ನಿಂಬೆ ಗಾತ್ರದ ಹೂರಣ ತೆಗೆದುಕೊಂಡು ಅದಕ್ಕಿಂತಾ ಸ್ವಲ್ಪ ಕಡಿಮೆ ಕಣಕ ತೆಗೆದುಕೊಂಡು ಅದರೊಳಗೆ ಹೂರಣದುಂಡೆ ಇಟ್ಟು ಬಾಳೆಎಲೆ ಮೇಲೆ ಒತ್ತಿ ಕಾದ ಕಾವಲಿಗೆ ಎಣ್ಣೆ ಸವರಿ ಹೋಳಿಗೆ ಹಾಕಿ ಎರಡೂ ಬದಿಯಲ್ಲಿ ಕಮ್ಮಗೆ ಬೇಯಿಸಿದರೆ, ಬೇಳೆ ಹೋಳಿಗೆ ಸಿದ್ಧ.
- ವನಜಾ ಚಂದ್ರಶೇಖರ್

ಹಾಲಿನ ಹೋಳಿಗೆ
ಬೇಕಾಗುವ ಪದಾರ್ಥಗಳು: ಚಿರೋಟಿ ರವೆ 1ಲೋಟ, ಚಿಟಿಕೆ ಉಪ್ಪು, ತುಪ್ಪ 1 ಸ್ಪೂನ್, ಎಣ್ಣೆ ಸಾಕಷ್ಟು, ಮೈದಾ 1 ಸ್ಪೂನ್.
ಮಾಡುವ ವಿಧಾನ: ರವೆ, ಉಪ್ಪು ಮೈದಾ ಮತ್ತು ತುಪ್ಪವನ್ನು ಸೇರಿಸಿ ಗಟ್ಟಿಯಾಗಿ ಕಲೆಸಿ ಎರಡು ಗಂಟೆಗಳ ಕಾಲ ನೆನೆಯಲು ಬಿಡಿ. ಹಪ್ಪಳದಂತೆ ತೆಳ್ಳಗೆ ಲಟ್ಟಿಸಿ, ಮಡಚಿ ಎಣ್ಣೆಯಲ್ಲಿ ಕರಿಯಬೇಕು. ತೆಂಗಿನತುರಿ, ಏಲಕ್ಕಿ, ಗೋಡಂಬಿ ಮತ್ತು ಗಸಗಸೆ ಸೇರಿಸಿ ಪಾಯಸ ಮಾಡಿ, ಅದು ಬಿಸಿ ಇರುವಾಗಲೇ ಹಪ್ಪಳಗಳನ್ನು ಅದರಲ್ಲಿ ಅದ್ದಿ ತೆಗೆಯಬೇಕು, ಇಲ್ಲ ಹಪ್ಪಳದ ಮೇಲೆ ಬಿಸಿ ಪಾಯಸವನ್ನು ಹಾಕಿ ಸೇವಿಸಬಹುದು. ಈ ಹಪ್ಪಳಗಳ ಮೇಲೆ ಎರಡೂ ಕಡೆ ಬೂರ ಸಕ್ಕರೆಯನ್ನು ಸವರಿದರೆ ಸಕ್ಕರೆ ಹೋಳಿಗೆಯಾಗುತ್ತದೆ.

ಸುರುಟಿ ಹೋಳಿಗೆ
ಬೇಕಾಗುವ ಪದಾರ್ಥಗಳು: ಚಿರೋಟಿ ರವೆ 1 ಲೋಟ, ಚಿಟಿಕೆ ಉಪ್ಪು, ತುಪ್ಪ 1 ಸ್ಪೂನ್, ಮೈದಾ 1 ಸ್ಪೂನ್, ತೆಂಗಿನ ತುರಿ 1 ಕಪ್, ಏಲಕ್ಕಿ 1, ಸಕ್ಕರೆ ಕಾಲು ಕಪ್, ಗೋಡಂಬಿ ಚೂರು 1 ಸ್ಪೂನ್, ಹಾಲು ಒಂದೂವರೆ ಕಪ್ ಮತ್ತು ಕರಿಯಲು ಸಾಕಷ್ಟು ಎಣ್ಣೆ.
ವಿಧಾನ: ರವೆ, ಉಪ್ಪು ಮೈದಾ ಸೇರಿಸಿ ಗಟ್ಟಿಯಾಗಿ ಕಲೆಸಿ ಎರಡು ಗಂಟೆಗಳ ಕಾಲ ನೆನೆಯಲು ಬಿಡಿ. ತೆಂಗಿನತುರಿ, ಸಕ್ಕರೆ, ಏಲಕ್ಕಿಪುಡಿ, ತುಪ್ಪ ಮತ್ತು ಹಾಲನ್ನು ಸೇರಿಸಿ ಚೆನ್ನಾಗಿ ಕಲೆಸಿ ಸಣ್ಣ ಉರಿಯಲ್ಲಿ ಹುರಿಯಬೇಕು. ಸಕ್ಕರೆ ಕರಗಿ ಸ್ವಲ್ಪ ಗಟ್ಟಿಯಾದರೆ ಸಾಕು. ನೆನೆದ ರವೆಯನ್ನು ಹಪ್ಪಳಗಳ ಹಾಕಿ ಲಟ್ಟಿಸಿ ಎಣ್ಣೆಯಲ್ಲಿ ಕರೆದು ಬಿಸಿ ಹಾಲಿನಲ್ಲಿ ಅದ್ದಿ ಸ್ವಲ್ಪ ಹೊತ್ತು ಬಿಟ್ಟು ತಯಾರಾದ ತೆಂಗಿನ ತುರಿಯನ್ನು ಹಪ್ಪಳಗಳ ಮೇಲೆ ತೆಳ್ಳಗೆ ಸವರಿ ಅದನ್ನು ಸುರುಳಿಯಾಗಿ ಸುತ್ತಿದರೆ ಸಾಕು. ಈ ಹೋಳಿಗೆಯೊಳಗೆ ಪನ್ನೀರ್ ರೋಜದ ದಳ 4 ಮತ್ತು ಪನ್ನೀರ್ ಎಸ್ಸೆನ್ಸ್ ಒಂದು ತೊಟ್ಟು ಸೇರಿಸಿ ಸುತ್ತಿದರೆ ರೋಜಾ ಹೋಳಿಗೆಯಾಗುತ್ತದೆ.

ಸೊಗಸು ಹೋಳಿಗೆ
ಬೇಕಾಗುವ ಪದಾರ್ಥಗಳು: ಫೇಣಿ ರವೆ 1 ಬಟ್ಟಲು, ಉಪ್ಪು 1 ಚಿಟಿಕೆ, ತುಪ್ಪ ಒಂದೂವರೆ ಸ್ಪೂನ್, ಎಣ್ಣೆ ಸಾಕಷ್ಟು, ಮೈದಾ 1 ಸ್ಪೂನ್, ಅಕ್ಕಿಹಿಟ್ಟು 1 ಬಟ್ಟಲು, ಸಕ್ಕರೆ ಒಂದೂಕಾಲು ಬಟ್ಟಲು, ಏಲಕ್ಕಿ 1, ಹಾಲು ಒಂದೂವರೆ ಬಟ್ಟಲು, ಗೋಡಂಬಿ ಚೂರು 1 ಸ್ಪೂನ್, ತೆಂಗಿನತುರಿ 1 ಬಟ್ಟಲು.
ಮಾಡುವ ವಿಧಾನ: ರವೆ, ಮೈದಾ, ಉಪ್ಪು ಮತ್ತು ಅರ್ಧ ಸ್ಪೂನ್ ತುಪ್ಪವನ್ನು ಸೇರಿಸಿ ಮೃದುವಾಗಿ ಕಲೆಸಿ ಅದರ ಮೇಲೆ ಸ್ವಲ್ಪ ಎಣ್ಣೆಯನ್ನು ಹಾಕಿ 2 ಗಂಟೆಗಳ ಕಾಲ ನೆನೆಸಿ ಅದನ್ನು ಚೆನ್ನಾಗಿ ನಾದಿ ಕಣಕವನ್ನು ತಯಾರಿಸಬೇಕು. ಹಾಲು, ಸಕ್ಕರೆ, ತೆಂಗಿನತುರಿ, ತುಪ್ಪ, ಅಕ್ಕಿಹಿಟ್ಟು ಮತ್ತು ಏಲಕ್ಕಿಯನ್ನು ಸೇರಿಸಿ ಒಂದು ಪಾತ್ರೆಯಲ್ಲಿ ಹಾಕಿ, ಚೆನ್ನಾಗಿ ಕಲೆಸಿ ಸಣ್ಣ ಉರಿಯಲ್ಲಿ ಕೈಬಿಡದೆ ಮಗುಚುತ್ತಿರಬೇಕು, ಗಟ್ಟಿಯಾದರೆ ಸಾಕು, ತಯಾರಿಸಿದ ಕಣಕದಲ್ಲಿ ಚಿಕ್ಕ, ಚಿಕ್ಕ ಉಂಡೆಗಳನ್ನು ಮಾಡಿ ಕಣಕದಲ್ಲಿ ಇಟ್ಟು ತಟ್ಟಿ ಅದನ್ನು ಎಣ್ಣೆಯಲ್ಲಿ ಕರಿದರೆ ರುಚಿಯಾದ ಹೋಳಿಗೆಯಾಗುತ್ತದೆ. ಗೋಡಂಬಿಯನ್ನು ತುಪ್ಪದಲ್ಲಿ ಹುರಿದು ತೆಂಗಿನತುರಿಗೆ ಸೇರಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.