ಬಳ್ಳಾರಿ: ಸದಾ ಜನಜಂಗುಳಿಯಿಂದ ಗಿಜಿಗುಡುತ್ತಿದ್ದ ಆ ಬೃಹತ್ ಬಂಗಲೆಯಲ್ಲಿ ಸೋಮವಾರ ಬೆಳಿಗ್ಗೆಯಿಂದಲೇ ನೀರವಮೌನ. ಖಾಸಗಿ ಭದ್ರತಾ ಸಿಬ್ಬಂದಿಯಿಂದ ಕಂಗೊಳಿಸುತ್ತಿದ್ದ ಗೇಟ್ಗಳೆದುರು ಬರೀ ಪೊಲೀಸರ ಓಡಾಟ.
ಬಹುತೇಕ ಜನ ಹಾಸಿಗೆಯಿಂದ ಮೇಲೇಳುವ ಮೊದಲೇ ಸಿಬಿಐ ಅಧಿಕಾರಿಗಳ ತಂಡ ದಿಢೀರ್ ದಾಳಿ ನಡೆಸಿ ಆ ಮನೆಯ ಯಜಮಾನ, ಮಾಜಿ ಸಚಿವ ಜನಾರ್ದನರೆಡ್ಡಿ ಅವರನ್ನು ವಶಕ್ಕೆ ತೆಗೆದುಕೊಂಡು ತೆರಳುತ್ತಿದ್ದಾಗ, ಆಗಷ್ಟೇ ಆ ಮನೆ ಎದುರು ದಿನಪತ್ರಿಕೆ ಹಂಚುವ ಹುಡುಗ ತನ್ನ ಸೈಕಲ್ನ ಸ್ಟ್ಯಾಂಡ್ ಹಾಕುತ್ತಿದ್ದ.

ಸಂಬಂಧಿಗಳು, ಪರಿಚಯಸ್ಥರು, ಕೆಲಸದಾಳುಗಳು ಹೀಗೆ ಯಾರೊಬ್ಬರಿಗೂ ಮನೆಯೊಳಗೆ ಪ್ರವೇಶ ನಿರಾಕರಿಸಿ, ಬಾಗಿಲಲ್ಲೇ ತಡೆಯುತ್ತಿದ್ದ ಪೊಲೀಸರು, ~ಒಳಗೆ ಏನು ನಡೆದಿದೆ~ ಎಂಬ ಕಲ್ಪನೆಯೂ ಇಲ್ಲದೆ ತಮ್ಮ ಕೆಲಸ ತಾವು ಮಾಡುತ್ತಿದ್ದರೆ, ಕೆಲವೇ ನಿಮಿಷಗಳ ಅವಧಿಯಲ್ಲಿ ಔಪಚಾರಿಕತೆ ಪೂರ್ಣಗೊಳಿಸಿದ ಸಿಬಿಐ ತಂಡ, ಜನಾರ್ದನರೆಡ್ಡಿ ಅವರನ್ನು ತಮ್ಮಂದಿಗೆ ಕರೆದುಕೊಂಡು ಹೋಯಿತು.

ಅತ್ತ ಮುನ್ನೂರು ಗಜಗಳ ಅಂತರದಲ್ಲಿದ್ದ ಇನ್ನೊಂದು ಬೃಹತ್ ಬಂಗಲೆಯಲ್ಲಿ ವಾಸವಿದ್ದ ಸಂಬಂಧಿ ಶ್ರೀನಿವಾಸರೆಡ್ಡಿ ಅವರ ಮನೆಗೆ ಜನಾರ್ದನರೆಡ್ಡಿ ಅವರೊಂದಿಗೆ ತೆರಳಿದ ಸಿಬಿಐ ತಂಡ, 10ರಿಂದ 12 ನಿಮಿಷಗಳ ಕಾಲ ಒಳಗಿದ್ದು, ಹೈದರಾಬಾದ್ ಕಡೆ ಮುಖ ಮಾಡಿತು.

~ಮನೆಯ ಮಾಲೀಕ ಶ್ರೀನಿವಾಸರೆಡ್ಡಿ ಬಂಧನಕ್ಕೆ ಒಳಗಾದ~ ಎಂಬ ಸುಳಿವೂ ದೊರೆಯದ ಕೆಲಸದ ಹುಡುಗನೊಬ್ಬ ಸೋಮವಾರದ ಪೂಜೆಗೆ ತೆಂಗಿನಕಾಯಿ ಸುಲಿಯುತ್ತಿದ್ದರೆ, ಭದ್ರತಾ ಸಿಬ್ಬಂದಿ ಅದೇ ಪೂಜೆಗೆಂದೇ ಅಂಗಳದಲ್ಲಿದ್ದ ಹೂಗಳನ್ನು ಕಿತ್ತು ಆತನ ಕೈಗಿಡುತ್ತಿದ್ದರು.

ಈಗಾಗಲೇ ಐದಾರು ಬಾರಿ ಬಳ್ಳಾರಿಗೆ ಭೇಟಿ ನೀಡಿ ತೆರಳಿರುವ ಸಿಬಿಐ ತಂಡ, ಇಲ್ಲಿಗೆ ಬಂದಾಗಲೆಲ್ಲ ಜನಾರ್ದನರೆಡ್ಡಿ ಅವರ ಮನೆಗೆ ಸಮೀಪವೇ ಇರುವ ಪೊಲೀಸ್ ಜಿಮಖಾನದಲ್ಲೇ ವಿರಮಿಸುತ್ತಿತ್ತಾರದರೂ, ಸೋಮವಾರ ಮಾತ್ರ ಸುಳಿವು ದೊರೆತು ಬಿಡಬಹುದು ಎಂಬ ಕಾರಣದಿಂದ ದೂರದಲ್ಲಿದ್ದ ಖಾಸಗಿ ವಸತಿಗೃಹದಲ್ಲಿ ತಂಗಿತ್ತು.

ಬೆಳಿಗ್ಗೆ 3 ಗಂಟೆ ಸುಮಾರಿಗೆ ಆಂಧ್ರದಿಂದ ಆಗಮಿಸಿ, ಕೊಠಡಿ ಪಡೆದು, ಇನ್ನುಳಿದ ರಾತ್ರಿಯ ಮೂರು ಗಂಟೆಗಳನ್ನು ಕಳೆದ ಸಿಬಿಐ ಅಧಿಕಾರಿಗಳು, ಆರು ಗಂಟೆ 2 ನಿಮಿಷಕ್ಕೆ ಅನಾಮಿಕನಂತೆ ರೆಡ್ಡಿ ಮನೆಯ ಕದವನ್ನು ಬಡಿದರು.

ಅಲ್ಲಿಂದ 6.58ಕ್ಕೆ ಸರಿಯಾಗಿ ಮನೆಯೊಡೆಯನ ಸಮೇತ ಶ್ರೀನಿವಾಸರೆಡ್ಡಿ ಮನೆಯತ್ತ ಮಿಂಚಿನಂತೆ ತೆರಳಿ, 7 ಗಂಟೆ 20 ನಿಮಿಷಕ್ಕೆ ಅಲ್ಲಿಂದಲೂ ಹೊರನಡೆದು, ಆಂಧ್ರದ ಗಡಿಯತ್ತ ಮುಖಮಾಡಿದರು.

ರೆಡ್ಡಿ ಬಂಧನದ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬುತ್ತಿದ್ದಂತೆಯೇ ನಗರದಾದ್ಯಂತ ಆ ಕುರಿತೇ ಮಾತು.
ಅನೇಕರು ಸಿರುಗುಪ್ಪ ಮುಖ್ಯರಸ್ತೆಯಲ್ಲಿರುವ ಅವರ ಮನೆಯೆದುರು ತಮ್ಮ ವಾಹನ ನಿಲ್ಲಿಸಿ, ಮತ್ತೆ ಮುನ್ನಡೆಯುತ್ತಿದ್ದುದು ಕಂಡುಬಂದರೆ, ಕೆಲವು ಬೆಂಬಲಿಗರು, ಕೆಲಸಗಾರರು, ಬಿಜೆಪಿ ಕಾರ್ಯಕರ್ತರು ಮನೆಯೊಳಗೆ ಹೋಗುವ ಸಾಹಸಕ್ಕೆ ಕೈಹಾಕದೆ ಹೊರಗೇ ನಿಂತು ಚರ್ಚಿಸುತ್ತ ನಿಂತಿದ್ದರು.

ವೈದ್ಯರು ಬಂದರು: ಸಿಬಿಐ ದಾಳಿಯ ಸುದ್ದಿ ತಿಳಿಯುತ್ತಿದ್ದಂತೆಯೇ, ಜನಾರ್ದನರೆಡ್ಡಿ ಅವರನ್ನು ಆರೋಗ್ಯದ ಸಮಸ್ಯೆಯ ಹಿನ್ನೆಲೆಯಲ್ಲಿ ಬಂಧನದಿಂದ ತಪ್ಪಿಸಿದರಾಯಿತು ಎಂಬ ಉದ್ದೇಶದಿಂದ ವಕೀಲರೊಂದಿಗೆ ಧಾವಿಸಿದ ವೈದ್ಯ, ಬಿಜೆಪಿ ಮುಖಂಡ ಡಾ.ಮಹಿಪಾಲ್, ರೆಡ್ಡಿ ಅವರ ನಿವಾಸ ತಲುಪುವಷ್ಟರಲ್ಲಿ ಅವರನ್ನು ಕರೆದೊಯ್ಯಲಾಗಿದೆ ಎಂಬ ವಿಷಯ ತಿಳಿದು ಮನೆಯತ್ತ ಮರಳಿದರು.

ಕಳೆದ ಮೂರು ವರ್ಷಗಳಿಂದ ನಿರ್ಮಾಣ ಹಂತದಲ್ಲಿರುವ ಜನಾರ್ದನರೆಡ್ಡಿ ನಿವಾಸ ಸೋಮವಾರ ಸಂಜೆಯವರೆಗೂ ಕುತೂಹಲದ ಕೇಂದ್ರಬಿಂದುವಾಗಿದ್ದುದು ವಿಶೇಷವಾಗಿತ್ತು.

ಸಂಜೆಯವರೆಗೂ ಅಲ್ಲಿ ಪೊಲೀಸರ ಓಡಾಟ, ಸಿಬಿಐ ಸಿಬ್ಬಂದಿ ನಡೆಸಿದ ವಿಚಾರಣೆ, ಪರಿಶೀಲನೆಯಿಂದಾಗಿ ಯಾರಿಗೂ ಸುಲಭಕ್ಕೆ ಒಳಹೋಗಿ ಬರಲು ಅವಕಾಶ ದೊರೆಯಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.