ದೊಡ್ಡಬಳ್ಳಾಪುರ:  ‘ಇಂಗ್ಲಿಷ್ ವ್ಯಾಮೋಹದಿಂದಾಗಿ ಕನ್ನಡ ಭಾಷೆಯ ಅಸ್ತಿತ್ವಕ್ಕೆ ಧಕ್ಕೆ ಬರುತ್ತಿದ್ದು, ಮಾತೃಭಾಷೆ ಉಳಿಸಲು ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು’ ಎಂದು 16ನೇ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಡಾ.ಎ.ಓ.ಆವಲಮೂರ್ತಿ ಹೇಳಿದರು.

ಸೋಮವಾರ ನಗರದ ದತ್ತಾತ್ರೇಯ ಕಲ್ಯಾಣ ಮಂದಿರದಲ್ಲಿ ಆರಂಭವಾದ ಎರಡು ದಿನಗಳ 16ನೇ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕನ್ನಡವನ್ನು ಉಳಿಸಲು ಹಲವು ಕಾರ್ಯಕ್ರಮಗಳು, ಹೋರಾಟಗಳು ನಡೆಯುತ್ತಲೇ ಇವೆ. ಆದರೆ ಕನ್ನಡಿಗರ ಉದಾರತೆಯಿಂದಾಗಿ ಭಾಷೆ ಸೊರಗುತ್ತಿದೆ. ಮಾತೃ ಭಾಷೆ ಉಳಿವಿಗೆ ಗಂಭೀರ ಕ್ರಮಗಳು ಅಗತ್ಯ’ ಎಂದು ಅವರು ತಿಳಿಸಿದರು.

‘ಇಂಗ್ಲೀಷ್ ಭಾಷೆಯಿಂದಲೇ ಅಭಿವೃದ್ಧಿ ಸಾಧ್ಯ ಎಂದು ಪೋಷಕರು ನೆಚ್ಚಿಕೊಂಡಂತಿದೆ. ಇಂಗ್ಲೀಷ್ ಮಾತನಾಡುವುದು ಬುದ್ಧಿವಂತಿಕೆಯ ಪ್ರತೀಕವಲ್ಲ. ಮಕ್ಕಳಿಗೆ ಬದುಕಿನ ಯಶಸ್ಸಿಗೆ ಅಗತ್ಯವಾದ ಸಕಾರಾತ್ಮಕ ಗುಣ ಮತ್ತು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಅವಶ್ಯಕವಾದ ಸದ್ಗುಣಗಳನ್ನು ಒಳಗೊಂಡ ಶಿಕ್ಷಣವನ್ನು ನೀಡಬೇಕು. ಆದರೆ ಇಂದಿನ ಶಿಕ್ಷಣದಿಂದ ಇದು ಸಾಧ್ಯವಾಗುತ್ತಿಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ಇಂದಿನ ಶೈಕ್ಷಣಿಕ ವ್ಯವಸ್ಥೆಯಲ್ಲಿ ಏಕರೂಪತೆ ಇಲ್ಲ. ಅನೇಕ ಖಾಸಗಿ ಶಾಲೆಗಳಲ್ಲಿ ಸರ್ಕಾರ ನಿಗದಿಗೊಳಿಸಿರುವ ಪಠ್ಯ ಪುಸ್ತಕಗಳ ಜೊತೆಗೆ ಎಳೆಂಟು ಬೇರೆ ಪುಸ್ತಕಗಳನ್ನು ಮಕ್ಕಳು ಓದಬೇಕು. ಮಕ್ಕಳ ಸಾಮರ್ಥ್ಯಕ್ಕೆ ತಕ್ಕಂತೆ ಕಲಿಕಾ ಪದ್ಧತಿಯೂ ಇರಬೇಕು. ಪುಸ್ತ-ಕಗಳ ಸಂಖ್ಯೆ ಮತ್ತು ಚೀಲದ ಗಾತ್ರವನ್ನು ಹೆಚ್ಚಿಸುವುದು ಸರಿಯಲ್ಲ’ ಎಂದು ಅವರು ತಿಳಿಸಿದರು.

‘ಸರ್ಕಾರಿ ಶಾಲೆಗಳನ್ನು ಉಳಿಸುವ ಮೂಲಕ ಕನ್ನಡ ಭಾಷೆಯನ್ನು ಉಳಿಸುವ ಪ್ರಯತ್ನವಾಗಬೇಕು. ಶಾಲೆ ಉಳಿಸಬೇಕಾದರೆ ಅಲ್ಲಿ ಮೂಲ ಸೌಕರ್ಯ ಮತ್ತು ದಕ್ಷ ಶಿಕ್ಷಕರ ಅವಶ್ಯಕತೆಯಿದೆ. ಎಷ್ಟೋ ಶಾಲೆಗಳಲ್ಲಿ ಶೌಚಾಲಯ ಮತ್ತು ಕುಡಿಯುವ ನೀರಿಲ್ಲ. ಸರ್ಕಾರಿ ಶಾಲೆಗೆ ಬರುವ ಅನುದಾನ ಎಲ್ಲಿ ಹೋಗುತ್ತದೆ ಎಂಬುದನ್ನು ಪರಿಶೀಲಿಸಬೇಕು. ಎಷ್ಟೋ ಶಾಲೆಗಳಲ್ಲಿ ಕೆಲವು ಶಿಕ್ಷಕರು ಶಾಲೆಗೆ ಬರುವುದಿಲ್ಲ. ಅಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದರು.

ನೀರಿನ ಸಮಸ್ಯೆ: ಎಲ್ಲಾ ಕಡೆ ಇಂದು ನೀರಿನ ಸಮಸ್ಯೆ ಕಾಡುತ್ತಿದೆ. ನೀರಿನ ಸಮಸ್ಯೆ ಪರಿಹಾರವಾಗಲು ಜನರ ಸಹಕಾರ ಅಗತ್ಯ. ನೀರನ್ನು ಮಿತವಾಗಿ ಬಳಸಬೇಕು. ಜೊತೆಗೆ ಅಂತರ್ಜಲವೃದ್ಧಿಗೆ ಸಾರ್ವಜನಿಕರು ಮುಂದಾಗಬೇಕು. ಇಲ್ಲವಾದರೆ ಯಾರೇ ಅಧಿಕಾರಕ್ಕೆ ಬಂದರೂ ನೀರಿನ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ತಿಳಿಸಿದರು.

ಜಿಲ್ಲಾ ಹೋರಾಟಕ್ಕೆ ಬೆಂಬಲ: ದೊಡ್ಡಬಳ್ಳಾಪುರವನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಲು ಎಲ್ಲಾ ಅರ್ಹತೆಗಳನ್ನು ಪಡೆದಿದೆ. ಭೌಗೋಳಿಕವಾಗಿ ಯಾವ ತಾಲ್ಲೂಕನ್ನು ಜಿಲ್ಲಾಕೇಂದ್ರವನ್ನಾಗಿ ಮಾಡಿದರೆ ಬಹುಜನರಿಗೆ ಅನುಕೂಲವಾಗುತ್ತದೆ ಎಂಬುದನ್ನು ಗಮನಿಸಬೇಕು. ಈ ಕುರಿತು ಸಂಬಂಧಪಟ್ಟವರು ವಸ್ತುನಿಷ್ಠವಾಗಿ ಸಮಾಲೋಚನೆ ನಡೆಸಬೇಕು ಎಂದರು.

ನೇಯ್ಗೆ: ನೇಯ್ಗೆ ಉದ್ಯಮದ ಉಳಿವಿಗೆ ಜನರ ಸಹಕಾರ ಅಗತ್ಯ. ಬೇಡಿಕೆಯಿಂದ ಮಾತ್ರವೇ ಪೂರೈಕೆ ಹೆಚ್ಚಲು ಸಾಧ್ಯ. ಶಾಲಾ ಸಮವಸ್ತ್ರವನ್ನು ಮಗ್ಗಗಳಲ್ಲಿ ತಯಾರಿಸಲು ಸಾಧ್ಯ. ಎಲ್ಲಾ ಶಾಲೆಗಳಲ್ಲಿ ಮಗ್ಗಗಳಿಂದ ನೇಯ್ಗೆ ಬಟ್ಟೆಯನ್ನೇ ಉಪಯೋಗಿಸುವಂತಾದರೆ ಅದೊಂದು ಕ್ರಾಂತಿಯೇ ಆಗುತ್ತದೆ’ ಎಂದು ತಿಳಿಸಿದರು.

ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳದ ಅಧ್ಯಕ್ಷ ಸಾಹಿತಿ ಡಾ.ನಾ.ಡಿಸೋಜ, ‘ಜನರ ಗೊಂದಲ, ತಳಮಳಗಳಿಂದ ಹೊರಬರುವ ಸಾಹಿತ್ಯ ರಚನೆಯಾಗಬೇಕು. ವೈಜ್ಞಾನಿಕ ಸಾಹಿತ್ಯ ರಚನೆ ಬೆಳೆಯಬೇಕು. ಕೇವಲ ಕಥೆ, ಕವನಗಳನ್ನು ಬರೆದವರಷ್ಟೇ ಸಾಹಿತಿಗಳು ಎನ್ನುವ ಮನೋಭಾವನೆ ದೂರವಾಗಬೇಕು. ನಮ್ಮ ಬರವಣಿಗೆಗಳು ಜನ ಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುವಂತಿರಬೇಕು’ ಎಂದು ಹೇಳಿದರು.

‘ಬಯಲು ಸೀಮೆಗೆ ನೀರು ತರುವ ಗಡಿಬಿಡಿಯಲ್ಲಿ ಪರಿಸರಕ್ಕೆ ಹಾನಿಯಾಗದಂತೆ ಎಚ್ಚರವಹಿಸಬೇಕು. ಇಲ್ಲವಾದರೆ ಉತ್ತರಖಂಡದಲ್ಲಿ ಆದಂತಹ ಜಲಪ್ರಳಯ ಇಲ್ಲಿಯೂ ಸಂಭವಿಸದೆ ಇರುವುದಿಲ್ಲ’ ಎಂದು ಎಚ್ಚರಿಸಿದರು.

16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆಯನ್ನು ರಾಜ್ಯ ರೇಷ್ಮೆ ಮಾರಾಟ ಮಂಡಳಿ ಮಾಜಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ ಬಿಡುಗಡೆ ಮಾಡಿದರು. ಪುಸ್ತಕ ಮಳಿಗೆಗಳನ್ನು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಶ್ರೀಕಾಂತ ಉದ್ಘಾಟಿಸಿದರು.

ತಾಲ್ಲೂಕು ಕಚೇರಿಯಿಂದ ಆರಂಭವಾದ ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ನಗರ ಸಭೆ ಪೌರಾಯುಕ್ತ ಡಾ.ಬಿಳಿಕೆಂಚಪ್ಪ ಉದ್ಘಾಟಿಸಿದರು. ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಸಿ.ಮಂಜುನಾಥ್ ರಾಷ್ಟ್ರಧ್ವಜಾರೋಹಣ ಮಾಡುವ ಮೂಲಕ ಜಿಲ್ಲಾ ಸಮ್ಮೇಳನಕ್ಕೆ ಅಧಿಕೃತ ಚಾಲನೆ ನೀಡಿದರು. ತಹಶೀಲ್ದಾರ್ ಕೆ.ಬಿ.ಸಿದ್ದಲಿಂಗಯ್ಯ ಕನ್ನಡ ಧ್ವಜಾರೋಹಣ ಮಾಡಿದರು. ಸಾಹಿತ್ಯ ಪರಿಷತ್ ಧ್ವಜಾರೋಹಣವನ್ನು ಜಿಲ್ಲಾ ಕಸಾಪ ಅಧ್ಯಕ್ಷ ಹುಲಿಕಲ್ ನಟರಾಜ್ ನೆರವೇರಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ್, ಹೊಸಕೋಟೆ ತಾಲ್ಲೂಕು ಕಸಾಪ ಅಧ್ಯಕ್ಷ ಶ್ರೀಕಾಂತ, ಕಸಾಪ ತಾಲ್ಲೂಕು ಗೌರವಾಧ್ಯಕ್ಷ ಕೆ.ಆರ್.ರವಿಕಿರಣ್, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಚಿ.ಮಾ.ಸುಧಾಕರ್, ನಾಗಪ್ರಿಯ, ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಬಿ.ಎಸ್.ಸಿದ್ದಗಂಗಯ್ಯ ಮತ್ತಿತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.