ಶನಿವಾರ, ಆಗಸ್ಟ್ 15, 2020
26 °C

ಇಂಗ್ಲೆಂಡ್ ಅಥ್ಲೆಟಿಕ್ ತಂಡಕ್ಕೆ ಚೇಂಬರ್ಸ್!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂಗ್ಲೆಂಡ್ ಅಥ್ಲೆಟಿಕ್ ತಂಡಕ್ಕೆ ಚೇಂಬರ್ಸ್!

ಲಂಡನ್ (ಎಎಫ್‌ಪಿ): ಉದ್ದೀಪನ ಮದ್ದು ತೆಗೆದುಕೊಂಡು ನುಣುಚಿಕೊಳ್ಳಲು ಯತ್ನಿಸಿದ ಆರೋಪ ಎದುರಿಸಿದ್ದ ವೇಗದ ಓಟಗಾರ ಡ್ವೈನ್ ಚೇಂಬರ್ಸ್‌ಗೆ ಇಂಗ್ಲೆಂಡ್ ಅಥ್ಲೆಟಿಕ್ಸ್ ತಂಡದಲ್ಲಿ ಮತ್ತೆ ಸ್ಥಾನ ನೀಡಿದ್ದು ಅಚ್ಚರಿಗೊಳ್ಳುವಂತೆ ಮಾಡಿದೆ.ಲಂಡನ್ ಒಲಿಂಪಿಕ್ ಕ್ರೀಡಾಕೂಟಕ್ಕೆ ಆಯ್ಕೆ ಮಾಡಿರುವ ಅಥ್ಲೀಟ್‌ಗಳ ಪಟ್ಟಿಯಲ್ಲಿ ಚೇಂಬರ್ಸ್ ಹೆಸರು ಕೂಡ ಇದೆ. ವಿಶ್ವ ಉದ್ದೀಪನ ಮದ್ದು ತಡೆ ಘಟಕ(ವಾಡಾ)ವು ಈ ಅಥ್ಲೀಟ್ ಮೇಲಿನ ಆಜೀವ ನಿಷೇಧವನ್ನು ತೆರವುಗೊಳಿಸಿದ್ದರಿಂದ ಸ್ಪರ್ಧಿಸುವ ಅವಕಾಶ ಸಿಕ್ಕಿದೆ ಎಂದು ಮೂಲಗಳು ತಿಳಿಸಿವೆ.ಇಂಗ್ಲೆಂಡ್ ಒಟ್ಟು 71 ಅಥ್ಲೀಟ್‌ಗಳಿರುವ ತಂಡವನ್ನು ಪ್ರಕಟಿಸಿದೆ. ಅದರಲ್ಲಿ 34 ವರ್ಷ ವಯಸ್ಸಿನ ಚೇಂಬರ್ಸ್ ಕೂಡ ಒಬ್ಬರು. ಆರೋಪ ಮುಕ್ತರಾಗಿ ಬಂದಿರುವ ಕಾರಣ ಈ ಓಟಗಾರನಿಗೆ ಅವಕಾಶ ನೀಡಿದ ಕ್ರಮವನ್ನು ಬ್ರಿಟಿಷ್ ಒಲಿಂಪಿಕ್ ಸಂಸ್ಥೆ (ಬಿಒಐ) ಪ್ರಧಾನ ಕಾರ್ಯನಿರ್ವಾಹಕ ಆ್ಯಂಡಿ ಹಂಟ್ ಸಮರ್ಥಿಸಿದ್ದಾರೆ.ಸಿಡ್ನಿ (2000) ಒಲಿಂಪಿಕ್‌ನಲ್ಲಿ ನಾಲ್ಕನೇ ಸ್ಥಾನ ಪಡೆದ ನಂತರ ಮತ್ತೆ ಒಲಿಂಪಿಕ್ಸ್ ಕೂಟಗಳಲ್ಲಿ ಚೇಂಬರ್ಸ್ ಪಾಲ್ಗೊಂಡಿರಲಿಲ್ಲ. 2003ರಲ್ಲಿ `ಬಾಲ್ಕೊ~ ಉದ್ದೀಪನ ಮದ್ದು ಹಗರಣ ದೊಡ್ಡ ಸದ್ದು ಮಾಡಿದಾಗ ಸಿಕ್ಕಿಬಿದ್ದವರಲ್ಲಿ ಇಂಗ್ಲೆಂಡ್‌ನ ಈ ಅಥ್ಲೀಟ್ ಕೂಡ ಒಬ್ಬರಾಗಿದ್ದು. ಆಗ ಎರಡು ವರ್ಷಗಳ ಅವಧಿಗೆ ಇವರ ಮೇಲೆ ನಿಷೇಧ ಹೇರಲಾಗಿತ್ತು. ಆನಂತರ ಆಜೀವ ನಿಷೇಧ ಶಿಕ್ಷೆಗೂ ಒಳಗಾಗಿದ್ದರು. ಆದರೆ ಅಂತರರಾಷ್ಟ್ರೀಯ ಕ್ರೀಡಾ ನ್ಯಾಯಪಂಚಾಯಿತಿಗೆ ಮೇಲ್ಮನವಿ ಸಲ್ಲಿಸಿದ ನಂತರ ನಿಷೇಧ ತೆರವುಗೊಂಡಿದೆ.ಇಂಗ್ಲೆಂಡ್‌ನ ಮಾಧ್ಯಮಗಳು ಕೂಡ ಚೇಂಬರ್ಸ್ ಪರವಾಗಿ ನಿಂತಿವೆ. ಅವರು ಈ ವಯಸ್ಸಿನಲ್ಲಿ ಎಷ್ಟು ಉತ್ತಮ ಪ್ರದರ್ಶನ ನೀಡಬಲ್ಲರೆಂದು ನೋಡಲು ಕ್ರೀಡಾ ಪ್ರೇಮಿಗಳೂ ಆಸಕ್ತಿಯಿಂದ ಕಾಯ್ದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.