ಬಹಳಷ್ಟು ಜನರು ಎರಡು ಬಾರಿ ಹಲ್ಲುಗಳನ್ನು ಬ್ರಷ್ ಮಾಡಿದರೂ ಕೂಡ ಹಲ್ಲುಗಳ ಮಧ್ಯೆ ದಂತ ಕುಳಿ, ಬಾಯಿಯ ದುರ್ವಾಸನೆ, ವಸಡಿನ ರಕ್ತಸ್ರಾವದ ಸಮಸ್ಯೆಯನ್ನು ಎದುರಿಸುತ್ತಾರೆ. ಏಕೆಂದರೆ ಬ್ರಷ್ ಮಾಡುವುದರಿಂದ ಎರಡು ಹಲ್ಲುಗಳ ಮಧ್ಯೆ ಇರುವ ಬಹಳಷ್ಟು ಕೀಟಾಣುಗಳು ಸ್ವಚ್ಛವಾಗುವುದಿಲ್ಲ.

ಹಲ್ಲುಗಳ ಮಧ್ಯೆ ಇರುವ ಕೀಟಾಣುಗಳು ಮತ್ತು ದಂತ ಗಾರೆಯನ್ನು ತೆಗೆಯಲು ಒಂದೇ ಉಪಾಯವೆಂದರೆ ದಂತದಾರ ಅಥವಾ ಇಂಟರ್ ಡೆಂಟಲ್ ದಂತಕುಂಚದ ಬಳಕೆ.
ಇಂಟರ್ ಡೆಂಟಲ್ ದಂತಕುಂಚ ಎಂದರೆ ಎರಡು ಹಲ್ಲುಗಳ ನಡುವೆ ಮತ್ತು ಸಂದು ಹಲ್ಲುಗಳನ್ನು ಸ್ವಚ್ಛ ಗೊಳಿಸಲು ತಯಾರಿಸಿರುವ ದಂತ ಕುಂಚ.

ಇಂಟರ್ ಡೆಂಟಲ್ ದಂತಕುಂಚವು ತ್ರಿಭುಜ ಆಕಾರದಲ್ಲಿದ್ದು ಮುಂದಿನ ಭಾಗ ಮೃದು, ಸಾಧಾರಣ, ಕಠಿಣ ಕ್ರಮಾಂಕದ ಎಳೆಗೆಳನ್ನು ಹೊಂದಿರುತ್ತದೆ ಮತ್ತು ಹಿಂದಿನ ಭಾಗ ಹಿಡಿಯನ್ನು ಹೊಂದಿದ್ದು ಹಿಡಿದುಕೊಳ್ಳಲು ಅನುಕೂಲವಾಗಿರುತ್ತದೆ.

ಇಂಟರ್ ಡೆಂಟಲ್ ದಂತಕುಂಚ ಎಲ್ಲಾ ಔಷಧಿ ಅಂಗಡಿಗಳಲ್ಲಿ ದೊರೆಯುತ್ತದೆ. ಇದು ಎರಡು ಹಲ್ಲುಗಳ ನಡುವೆ ಇರುವ ಸಂದುಗಳನ್ನು ಹೊಂದುವ ವಿವಿಧ ಅಳತೆಗಳಲ್ಲಿ ಸಿಗುತ್ತದೆ. ನಮ್ಮ ಹಲ್ಲುಗಳ ನಡುವೆ ಇರುವ ಸಂದುಗಳ ಮೇರೆಗೆ (ಚಿಕ್ಕ, ಸಾಧಾರಣ, ದೊಡ್ಡ) ನಾವು ಇಂಟರ್ ಡೆಂಟಲ್ ದಂತ ಕುಂಚವನ್ನು ಆಯ್ದುಕೊಳ್ಳಬಹುದು.

ಬಳಕೆ ಹೇಗೆ?
ಇಂಟರ್ ಡೆಂಟಲ್ ದಂತಕುಂಚವನ್ನು ಎರಡು ಹಲ್ಲುಗಳ ಮಧ್ಯೆ ತೂರಿಸಿ ಮುಂದೆ ಮತ್ತು ಹಿಂದೆ ಬ್ರಷ್ ಮಾಡುವುದರಿಂದ ಎರಡು ಹಲ್ಲುಗಳ ಮಧ್ಯೆ ಇರುವ ಆಳ ಮತ್ತು ಉಬ್ಬುಗಳಿಗೆ ಹೋಗಿ ಹಲ್ಲುಗಳು ಸ್ವಚ್ಛಗೊಳ್ಳುತ್ತವೆ.

ಇಂಟರ್ ಡೆಂಟಲ್ ದಂತಕುಂಚದ ಅಳತೆಯ ಆಯ್ಕೆ ಮತ್ತು ಉಪಯೋಗದ ಮಾಹಿತಿಯನ್ನು ದಂತ ವೈದ್ಯರಿಂದ ಪಡೆದು ಉಪಯೋಗಿಸಬಹುದು.

ಸಾಮಾನ್ಯ ದಂತಕುಂಚದಿಂದ ಹಲ್ಲುಗಳನ್ನು ಸ್ವಚ್ಛಗೊಳಿಸದ ಮೇಲೆ ಇಂಟರ್ ಡೆಂಟಲ್ ದಂತ ಕುಂಚದಿಂದ ಎರಡು ಹಲ್ಲುಗಳ ನಡುವಿನ ಜಾಗವನ್ನು ಸ್ವಚ್ಛಗೊಳಿಸಲು ಉಪಯೋಗಿಸಬೇಕು.
ಪ್ರತಿ ಸಲ ದಂತಕುಂಚವನ್ನು ಉಪಯೋಗಿಸಿದ ನಂತರ ಇದನ್ನು ನೀರಿನಿಂದ ಚೆನ್ನಾಗಿ ತೊಳೆದು, ಸ್ವಚ್ಛ ಮತ್ತು ಒಣಗಿದ ಜಾಗದಲ್ಲಿ ಇಡಬೇಕು.

ವಕ್ರದಂತ ಚಿಕಿತ್ಸೆ ಪಡೆದವರು, ವಸಡಿನ ಕ್ಷೀಣತೆಯಾಗಿ ಎರಡು ಹಲ್ಲುಗಳ ನಡುವೆ ಸಂದಿಯಾಗಿರುವವರು, ಎರಡು ಹಲ್ಲುಗಳ ಮಧ್ಯೆ ಇರುವ ಕೃತಕ ದಂತಪಂಕ್ತಿಯನ್ನು ಸ್ವಚ್ಛಗೊಳಿಸಲು, ಇದನ್ನು ಉಪಯೋಗಿಸಬಹುದು.

ಆದರೆ ದಂತಕುಂಚದ ಎಳೆಗಳು ಬಾಗಿ ಉಪಯೋಗಿಸಲು ಅನರ್ಹವಾದಾಗ (2 ರಿಂದ 3 ತಿಂಗಳಿಗೊಮ್ಮೆ) ಅದನ್ನು ಬದಲಾಯಿಸಬೇಕು.

(ಲೇಖಕರ ಮೊಬೈಲ್: 9986288267)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.