ಮಂಗಳವಾರ, ಜನವರಿ 21, 2020
29 °C

ಇಂದಿನಿಂದಲೇ ಬಿಎಸ್‌ವೈ ಪ್ರವಾಸ: ಗುಲ್ಬರ್ಗದಿಂದ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಸರ್ಕಾರದ ಸಾಧನೆ ತಿಳಿಸಲು ಸೋಮವಾರದಿಂದಲೇ ತಮ್ಮ ರಾಜ್ಯ ಪ್ರವಾಸ ಆರಂಭಿಸುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭಾನುವಾರ ಇಲ್ಲಿ ಪತ್ರಕರ್ತರಿಗೆ ತಿಳಿಸಿದರು.`ಗುಲ್ಬರ್ಗದಿಂದ ನನ್ನ ಪ್ರವಾಸ ಆರಂಭವಾಗಲಿದೆ. ಸೋಮವಾರ ಗುಲ್ಬರ್ಗದಲ್ಲಿ ಸಮಾವೇಶ ನಡೆಯಲಿದೆ. ಜನತೆಗೆ ಸರ್ಕಾರದ ಸಾಧನೆ ತಿಳಿಸುವುದು ಪ್ರವಾಸದ ಉದ್ದೇಶ~ ಎಂದು ಅವರು ಹೇಳಿದರು.ಬಿಜೆಪಿಯಲ್ಲಿ ಈಗ ಯಾವುದೇ ಗೊಂದಲ ಇಲ್ಲ ಎಂದು ಪುನರುಚ್ಚರಿಸಿದ ಅವರು, ಸರ್ಕಾರದ ಸಾಧನೆ ತಿಳಿಸಲು ಮುಖಂಡರೆಲ್ಲ ಸಾಮೂಹಿಕವಾಗಿ ಪ್ರವಾಸ ಮಾಡುವುದು ಕಾರ್ಯಸಾಧುವಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. `ನಾವೆಲ್ಲ ಒಗ್ಗಟ್ಟಾಗಿದ್ದೇವೆ.ಸಂಕ್ರ ಮಣದ ನಂತರ ಯಾವ ಬದಲಾ ವ ಣೆಯೂ ಆಗುವುದಿಲ್ಲ~ ಎಂದು ಅವರು ಇನ್ನೊಂದು ಪ್ರಶ್ನೆಗೆ ಚುಟುಕಾಗಿ ಉತ್ತರಿ ಸಿದರು. ಶನಿವಾರ ರಾತ್ರಿ ಬೆಳಗಾವಿಯಿಂದ ಆಗಮಿಸಿ ಇಲ್ಲಿ ತಂಗಿದ್ದ ಮಾಜಿ ಮುಖ್ಯಮಂತ್ರಿ, ಸೋಮವಾರ ಬೆಳಿಗ್ಗೆ ವಿಶೇಷ ವಿಮಾನದಲ್ಲಿ ಮದುರೈಗೆ ತೆರಳಿದರು.

 

ಪ್ರತಿಕ್ರಿಯಿಸಿ (+)