ಮಂಗಳವಾರ, ಜನವರಿ 28, 2020
18 °C

ಇಂದಿನಿಂದ ಎರಡನೇ ಟೆಸ್ಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಡಿಲೇಡ್ (ಎಎಫ್‌ಪಿ): ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಿನ ಆ್ಯಷಸ್‌ ಕ್ರಿಕೆಟ್‌ ಟೆಸ್ಟ್‌ ಸರಣಿಯ  ಎರಡನೇ ಪಂದ್ಯ ಗುರುವಾರ ಇಲ್ಲಿ ಆರಂಭವಾಗಲಿದ್ದು, ಉಭಯ ತಂಡಗಳು ಗೆಲುವಿನ ನಿರೀಕ್ಷೆಯಲ್ಲಿವೆ.ಬ್ರಿಸ್ಬೇನ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ 381 ರನ್‌ಗಳ ಅಂತರದ ಜಯ ದಾಖಲಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಆಸೀಸ್ ಎರಡನೇ ಟೆಸ್ಟ್‌ನಲ್ಲೂ ಆಂಗ್ಲರಿಗೆ ಸೋಲು ಣಿಸುವ ಲೆಕ್ಕಾಚಾರದಲ್ಲಿದೆ.

ಈ ಪಂದ್ಯಕ್ಕೆ ಆಸೀಸ್ ಮೊದಲ ಟೆಸ್ಟ್‌ನಲ್ಲಿ ಆಡಿದ್ದ ಹನ್ನೊಂದು ಮಂದಿಯ ಬಳಗವನ್ನೇ ಕಣಕ್ಕಿಳಿಸಲಿದೆ. ಅಭ್ಯಾಸದ ವೇಳೆ ಪಾದಕ್ಕೆ ಗಾಯಮಾಡಿಕೊಂಡಿದ್ದ ಆಸೀಸ್ ನಾಯಕ ಮೈಕಲ್ ಕ್ಲಾರ್ಕ್ ಗುಣ ಮುಖರಾಗಿದ್ದು,

ಕಣಕ್ಕಿಳಿಯಲಿದ್ದಾರೆ.ಇನ್ನೊಂದೆಡೆ ಮೊದಲ ಟೆಸ್ಟ್‌ನಲ್ಲಿ ಬ್ಯಾಟಿಂಗ್ ವೈಫಲ್ಯದಿಂದಾಗಿ ಹೀನಾಯ ಸೋಲು ಕಂಡಿದ್ದ ಅಲಸ್ಟೇರ್‌ ಕುಕ್ ಪಡೆ ಆಸೀಸ್‌ ಗೆಲುವಿಗೆ ಕಡಿವಾಣ ಹಾಕುವ ವಿಶ್ವಾಸದಲ್ಲಿದೆ. ಜೊನಾಥನ್ ಟ್ರಾಟ್ ಮೊದಲ ಟೆಸ್ಟ್ ಸೋಲಿನ ನಂತರ ಒತ್ತಡ ಸಂಬಂಧಿ ಕಾಯಿಲೆಯ ಕಾರಣ ನೀಡಿ ಸರಣಿಯಿಂದ ಹೊರನಡೆದಿದ್ದು  ಇಂಗ್ಲೆಂಡ್‌ಗೆ ಅಲ್ಪ ಹಿನ್ನಡೆ ಉಂಟುಮಾಡಿದೆ.

ಪ್ರತಿಕ್ರಿಯಿಸಿ (+)