ಸೋಮವಾರ, ಮೇ 17, 2021
21 °C

ಇಂದಿನಿಂದ ಜರ್ಮನಿ- ಭಾರತ ಉತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಜರ್ಮನಿ ಹಾಗೂ ಭಾರತ ದೇಶಗಳ ನಡುವಿನ ರಾಯಭಾರ ಸಂಬಂಧವು 60 ವರ್ಷಗಳು ಪೂರೈಸಿದ ನೆನಪಿನ ಅಂಗವಾಗಿ `ಜರ್ಮನಿ ಮತ್ತು ಭಾರತ 2011-12 ಅನಂತ ಅವಕಾಶಗಳು~ ಎಂಬ ವಾರ್ಷಿಕ ಕಾರ್ಯಕ್ರಮ ಹಾಗೂ ವಿವಿಧ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮಗಳನ್ನು ಮ್ಯಾಕ್ಸ್ ಮುಲ್ಲರ್ ಭವನದ (ಗೋತಿಯೆ ಇನ್‌ಸ್ಟಿಟ್ಯೂಟ್) ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದೆ~ ಎಂದು ಜರ್ಮನಿ ಕಾನ್ಸುಲೇಟ್ ಹ್ಯಾನ್ಸ್  ಗುಂಥರ್ ಲೊಫ್ಲರ್ ತಿಳಿಸಿದರು.ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ದೇಶದೊಂದಿಗೆ ಉತ್ತಮ ರಾಜತಾಂತ್ರಿಕ ಹಾಗೂ ಸ್ನೇಹ ಸಂಬಂಧವನ್ನು ಗಟ್ಟಿಗೊಳಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ~ ಎಂದರು.

ಜರ್ಮನಿಯ ಸ್ಟಾರ್ಮ್‌ ತಂಡವು ಇದೇ 17 ರಂದು ನಗರದ ಆಟ್ಟಕ್ಕಲರಿ ಸೆಂಟರ್ ಫಾರ್ ಮೂವ್‌ಮೆಂಟ್ ಆರ್ಟ್ಸ್‌ನಲ್ಲಿ `ಸೋಲೋ ಫಾರ್ ಟು~ ಎಂಬ ನೃತ್ಯ ಪ್ರದರ್ಶನ ಹಾಗೂ `ಜರ್ಮನಿ ಮತ್ತು ಭಾರತ 2011-12 ಅನಂತ ಅವಕಾಶಗಳು~ ಉದ್ಘಾಟನಾ ಸಮಾರಂಭವನ್ನು ಸಂಜೆ 4.30 ಕ್ಕೆ ಹಮ್ಮಿಕೊಂಡಿದೆ.ಇದೇ 17 ರಂದು ಆರಂಭವಾಗುವ ಉತ್ಸವವು ಡಿಸೆಂಬರ್ 3 ರವರೆಗೆ ನಗರದ ಹಲವೆಡೆ ನಡೆಯಲಿದೆ. ಸೆಪ್ಟೆಂಬರ್ 24 ರಂದು ಗುಡ್ ಶೆಫರ್ಡ್ ಸಭಾಂಗಣದಲ್ಲಿ ಸ್ಟಾರ್ಮ್‌ ತಂಡದಿಂದ ಸೋಲೋ ಫಾರ್ ಟು ನೃತ್ಯ ಪ್ರದರ್ಶನವನ್ನು ಹಮ್ಮಿಕೊಂಡಿದೆ. ಸೆ. 26 ರಂದು ಮ್ಯಾಕ್ಸ್ ಮುಲ್ಲರ್ ಭವನದಲ್ಲಿ ಯೂರೋಪಿಯನ್ ಭಾಷಾ ದಿನ, ಸೆ. 30ರಂದು ಖ್ಯಾತ ಡ್ರಮ್ಸ ವಾದಕ ಕ್ರಿಸ್ಟಾಫ್ ಹಬೆರರ್ ಹಾಗೂ ಕಾರ್ತಿಕ್ ಮಣಿ ಅವರಿಂದ ಡ್ರಮ್ ವಾದನ ಕಾರ್ಯಕ್ರಮವನ್ನು ಸಂಜೆ 6.30 ಕ್ಕೆ ಆಯೋಜಿಸಿದೆ.ಅಕ್ಟೋಬರ್ 3 ರಂದು ಜರ್ಮನಿಯ ರಾಷ್ಟ್ರೀಯ ದಿನದ ಅಂಗವಾಗಿ ವಿಶೇಷ ಪಾಶ್ಚಾತ್ಯ ಶಾಸ್ತ್ರೀಯ ಗಾಯನವನ್ನು ಚೌಡಯ್ಯ ಸ್ಮಾರಕ ಭವನದಲ್ಲಿ ಏರ್ಪಡಿಸಿದೆ ಎಂದು ತಿಳಿಸಿದರು.ಮಾಹಿತಿಗಾಗಿ,  ಸಂಪರ್ಕ ವಿಳಾಸ: ಯೋಜನಾ ಅಧಿಕಾರಿ, `ಜರ್ಮನಿ ಮತ್ತು ಭಾರತ 2011-12 ಅವಕಾಶಗಳು~, ಗೋತಿಯೆ ಇನ್‌ಸ್ಟಿಟ್ಯೂಟ್/ ಮ್ಯಾಕ್ಸ್ ಮುಲ್ಲರ್ ಭವನ, ಸಿಎಂಎಚ್‌ರಸ್ತೆ, 1ನೇ ಹಂತ, ಇಂದಿರಾನಗರ. ದೂರವಾಣಿ: 2520 5305.

 

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.