ಸೋಮವಾರ, ಮೇ 17, 2021
21 °C

ಇಂದಿನಿಂದ `ನೃತ್ಯಾಂತರ' ಹಬ್ಬ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂದಿನಿಂದ `ನೃತ್ಯಾಂತರ' ಹಬ್ಬ

ಶಿವಪ್ರಿಯ ನೃತ್ಯಶಾಲೆಯು ಮಂಗಳವಾರದಿಂದ ಗುರುವಾರದವರೆಗೆ (ಜೂ.25ರಿಂದ 27) ನೃತ್ಯಾಂತರ 2013 ನೃತ್ಯ ಕಾರ್ಯಕ್ರಮ ಆಯೋಜಿಸಿದೆ.ಇಪ್ಪತ್ತೈದು ವರ್ಷಗಳಿಂದ ಶಿವಪ್ರಿಯ ನೃತ್ಯಶಾಲೆ ನಡೆಸುತ್ತಿರುವ ಡಾ.ಸಂಜಯ್ ಶಾಂತಾರಾಮ್ 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಭರತನಾಟ್ಯ ಕಲಿಸಿದ್ದಾರೆ. ಬೆಳ್ಳಿಹಬ್ಬದ ಸಂಭ್ರಮದಲ್ಲಿ ನೃತ್ಯಾಂತರ 2013 ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಚೆನ್ನೈ ಹಾಗೂ ಮುಂಬೈನ ಕಲಾವಿದರು ನೃತ್ಯ ಪ್ರದರ್ಶಿಸಲಿದ್ದಾರೆ.ಮಂಗಳವಾರ (ಜೂ.25) ಎಸ್.ವಿ. ಗೋಪಾಲಕೃಷ್ಣ ಅವರಿಂದ ಕೂಚಿಪುಡಿ. ಮುಂಬೈನ ಪವಿತ್ರ ಭಟ್ ಅವರಿಂದ ಭರತನಾಟ್ಯ. ಬಿಶ್ವಭೂಷಣ್ ಮೊಹಾಪಾತ್ರ ಮತ್ತು ಸೌಮ್ಯ ಸಿಕ್ತ ಸಾಹೂ ಅವರಿಂದ ಒಡಿಸ್ಸಿ ನೃತ್ಯ ಪ್ರದರ್ಶನ. ಉದ್ಘಾಟನೆ: ಸಂಗೀತ ವಿಮರ್ಶಕ ಡಾ.ಎಂ. ಸೂರ್ಯಪ್ರಸಾದ್, ನೇತ್ರ ನೃತ್ಯಶಾಲೆ ನಿರ್ದೇಶಕರಾದ ದೀಪಾ ಮೆನನ್, `ನರ್ತಕಿ' ಸಂಪಾದಕರಾದ ಲಲಿತಾ ವೆಂಕಟ್. ಸ್ಥಳ: ಸೇವಾಸದನ, ಮಲ್ಲೇಶ್ವರ.ಬುಧವಾರ (ಜೂ.26) ಕೆ.ಸಿ. ರೂಪೇಶ್ ಹಾಗೂ ಸ್ನೇಹ ಭಾಗವತ್ ಅವರಿಂದ ಭರತನಾಟ್ಯ, ಬಿ.ಪಿ. ಸ್ವೀಕೃತ್ ಮತ್ತು ಮಾನಸ ಜೋಶಿ ಅವರಿಂದ ಕಥಕ್. ಆರ್ಟಿಕ್ಯುಬಿಲೇಟ್ ಎಬಿಲಿಟಿ ಕಲಾವಿದರಿಂದ ಭರತನಾಟ್ಯ. ಉದ್ಘಾಟನೆ: ಕೆನರಾ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ರವೀಂದ್ರ ಭಂಡಾರಿ, ಚಲನಚಿತ್ರ ಕಲಾವಿದೆ ಲಕ್ಷ್ಮೀ ಗೋಪಾಲಸ್ವಾಮಿ, ಭರತನಾಟ್ಯ ಗುರು ಎಂ.ಆರ್. ಕೃಷ್ಣಮೂರ್ತಿ.ಗುರುವಾರ (ಜೂ.27) ಶಿವಪ್ರಿಯ ತಂಡದಿಂದ ನೃತ್ಯ ಪ್ರದರ್ಶನ. ನಿರ್ದೇಶನ: ಡಾ.ಸಂಜಯ್ ಶಾಂತಾರಾಮ್. ಚೆನ್ನೈನ ಪ್ರಿಯದರ್ಶಿನಿ ಗೋವಿಂದ್ ಅವರಿಂದ ಭರತನಾಟ್ಯ. ನಾದಂ ತಂಡದಿಂದ ನೃತ್ಯ. ನಿರ್ದೇಶನ: ಗುರು ನಂದಿನಿ ಮೆಹ್ತಾ ಮತ್ತು ಮುರಳಿ ಮೋಹನ್. ಉದ್ಘಾಟನೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಎಸ್.ಐ. ಭಾವಿಕಟ್ಟಿ, ಸಂಗೀತ ವಿಮರ್ಶಕ ಪ್ರೊ.ಮೈಸೂರು ವಿ.ಸುಬ್ರಹ್ಮಣ್ಯ, ನಟಿ ಪದ್ಮಾವಾಸಂತಿ, ಯೋಗಪಟು ದಾಸಪ್ಪ ಕೇಶವ. ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ಪ್ರತಿದಿನ ಸಂಜೆ 6.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.