ಮಂಗಳವಾರ, ಜನವರಿ 28, 2020
18 °C

ಇಂದಿನಿಂದ ಮಕ್ಕಳ ಸಾಹಿತ್ಯ ಹಬ್ಬ ‘ಕಥಾವನ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಜೀಮ್ ಪ್ರೇಮ್ ಜಿ ಪ್ರತಿಷ್ಠಾನವು ನಗರದಲ್ಲಿ ಮೂರುದಿನಗಳ ಮಕ್ಕಳ ಸಾಹಿತ್ಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ‘ಕಥಾವನ’ ಹೆಸರಿನಲ್ಲಿ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದೆ. ಈ ಮಕ್ಕಳ ಸಾಹಿತ್ಯ ಹಬ್ಬವನ್ನು ಚಲನಚಿತ್ರ ನಿರ್ದೇಶಕ ಟಿ.ಎಸ್‌.ನಾಗಾಭರಣ ಉದ್ಘಾಟಿಸಲಿದ್ದಾರೆ.ಮೂರು ದಿನದ ಈ ಹಬ್ಬದಲ್ಲಿ ಕಥಾ ಕಮ್ಮಟಗಳು, ಓದಿನ ಅಗತ್ಯ, ಸಾಹಿತ್ಯದ ಕುರಿತು ಚರ್ಚೆ, ನಾಟಕ ಹಾಗೂ ಮಕ್ಕಳ ಚಲನಚಿತ್ರ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಶಿಕ್ಷಕರಿಗಾಗಿ ಕಾರ್ಯಾಗಾರವನ್ನೂ ಏರ್ಪಡಿಸಲಾಗಿದೆ.ಕನ್ನಡ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ಒಟ್ಟೊಟ್ಟಿಗೆ ಹಮ್ಮಿಕೊಂಡಿರುವ ಈ ಹಬ್ಬವನ್ನು 6ರಿಂದ 14 ವರ್ಷದ ವಯೋಮಾನಕ್ಕಾಗಿ ಆಯೋಜಿಸಲಾಗಿದೆ. ಮಕ್ಕಳ ಸಾಹಿತ್ಯದ ವಿವಿಧ ಆಯಾಮಗಳನ್ನು, ಲೇಖಕರೊಂದಿಗೆ ಭೇಟಿ, ಚರ್ಚೆ, ಸಂವಾದಗಳನ್ನೂ ಏರ್ಪಡಿಸಲಾಗಿದೆ.

ಸ್ಥಳ: ಮಕ್ಕಳ ಕೂಟ, ಚಾಮರಾಜ ಪೇಟೆ

ಗುರುವಾರ  ಬೆಳಿಗ್ಗೆ 10ಕ್ಕೆ. ಉದ್ಘಾಟನಾ ಸಮಾರಂಭ.
ಮೊದಲ ದಿನ ಡಿ.12

ಕೇಳೊಂದ ಕತೆಯ: ಜಾಣ ಕಾಗೆ (ಕನ್ನಡ) ಕಲ್ಪನಾ ಸುಬ್ಬರಾಮಪ್ಪ ಅವರಿಂದ ಆ್ಯಕ್ಟಿವಿಟಿ ಸೆಂಟರ್‌ ಪಾರ್ಕ್‌ ಸಮಯ: ಬೆಳಿಗ್ಗೆ 11

ಕನ್ನಡ ಮಕ್ಕಳ ಸಾಹಿತ್ಯ ಇತಿಹಾಸದ ಬಗ್ಗೆ ಚರ್ಚೆ (ಕನ್ನಡ) ಎಚ್‌.ಎಸ್‌ ರಾಘವೇಂದ್ರರಾವ್‌, ಎಲ್‌.ಜಿ. ಮೀರಾ, ಓ.ಎಲ್‌. ನಾಗಭೂಷಣ ಸ್ವಾಮಿ, ಎಸ್‌.ವಿ. ಕಶ್ಯಪ್‌ ಮತ್ತು ಸಿ.ಎನ್‌.ರಾಮಚಂದ್ರನ್‌  ಮೊದಲ ಅಂತಸ್ತಿನ ಸಭಾಂಗಣದಲ್ಲಿ 11.30ರಿಂದ

ಲೇಖಕಕರೊಂದಿಗೆ ಭೇಟಿ ಮಾಲಾ ಕುಮಾರ್‌ ಅವರೊಂದಿಗೆ (ಕನ್ನಡ ಮತ್ತು ಇಂಗ್ಲಿಷ್‌), ಎರಡನೇ ಅಂತಸ್ತಿನ ಸಭಾಂಗಣ.ಊಟದ ವಿರಾಮದ ನಂತರ  ಮಕ್ಕಳ ಸಾಹಿತ್ಯದ ಮಹತ್ವದ ಕುರಿತು ಚರ್ಚೆ (ಇಂಗ್ಲಿಷ್‌) ಆಶಾ ನೇಹ್ಮಿಯಾ, ದೀಯಾಲಿ ನಾಯರ್‌, ಉಷಾ ಮುಕುಂದ, ಶೈಲಜಾ ಮೆನನ್‌ ಮತ್ತು ಉಮೇಶ್‌ ಮಲ್ಹೋತ್ರಾ, ಮೊದಲ ಅಂತಸ್ತಿನ ಸಭಾಂಗಣ ಮಧ್ಯಾಹ್ನ 2.30.ಎರಡನೇ ಸಭಾಂಗಣದಲ್ಲಿ ಚಿನ್ನಾರಿ ಮುತ್ತ ಕನ್ನಡ ಚಲನಚಿತ್ರ ಪ್ರದರ್ಶನ  ಮಧ್ಯಾಹ್ನ 2.30.ಕೇಳೊಂದ ಕತೆಯ: ರಸ್ಕಿನ್‌ ಬಾಂಡ್‌ ಸಾಹಸಗಳು ಕಲ್ಪನಾ ಸುಬ್ಬರಾಮಪ್ಪ ಅವರಿಂದ. ಆ್ಯಕ್ಟಿವಿಟಿ ಸೆಂಟರ್‌ ಪಾರ್ಕ್‌, ಸಮಯ: 2.30

ಚಿತ್ರಕಾರರೊಂದಿಗೆ ಭೇಟಿ: ನೆಲಮಹಡಿಯ ಸಭಾಂಗಣದಲ್ಲಿ, ಮಧ್ಯಾಹ್ನ 3ರಿಂದ

ಓದೋಣ ಬಾರಾ: ಲಾವಣ್ಯಾ ಪ್ರಸಾದ್‌ (ಕನ್ನಡ ಮತ್ತು ಇಂಗ್ಲಿಷ್‌)   ಆ್ಯಕ್ಟಿವಿಟಿ ಸೆಂಟರ್‌ ಪಾರ್ಕ್‌ ಸಮಯ: ಸಂಜೆ 4ರಿಂದಎರಡನೆಯ ದಿನ ಡಿ.13

ಗ್ರಂಥಾಲಯ ಸ್ಥಾಪನೆ ಮತ್ತು ನಿರ್ವಹಣೆ ಬಗ್ಗೆ ಶಿಕ್ಷಕರಿಗೆ ಒಂದು ದಿನದ ಕಾರ್ಯಾಗಾರ ಉಷಾ ಮುಕುಂದ, ಅಪರ್ಣಾ, ಅನಂತ ಸ್ವಾಮಿ ಅವರಿಂದ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಮೊದಲ ಮಹಡಿಯ ಸಭಾಂಗಣದಲ್ಲಿ ಬೆಳಿಗ್ಗೆ 10.ಗಂಟೆಯಿಂದ ಪುಸ್ತಕಗಳ ಆಯ್ಕೆ ಮತ್ತು ಪರಿಣಾಮಕಾರಿ ಓದಿನ ಬಗ್ಗೆ ಶಿಕ್ಷಕರಿಗೆ ಕಾರ್ಯಾಗಾರ ಇಂಗ್ಲಿಷ್‌ನಲ್ಲಿ ಸುಜಾತಾ ನೊರಾನ್ಹಾ ಅವರಿಂದ ಎರಡನೆಯ ಮಹಡಿಯ ಸಭಾಂಗಣದಲ್ಲಿ ಬೆಳಿಗ್ಗೆ 10ರಿಂದ 1.ಲೇಖಕರ ಭೇಟಿ : ವಿಜಯಲಕ್ಷ್ಮಿ, ನಾಗರಾಜ್‌ ಕನ್ನಡ ಮತ್ತು ಇಂಗ್ಲಿಷ್‌ ನೆಲಮಹಡಿಯ ಸಭಾಂಗಣದಲ್ಲಿ ಬೆಳಿಗ್ಗೆ 11ಕ್ಕೆ. ರೇವತಿ ಸುರೇಶ್‌ ಇಂಗ್ಲಿಷ್‌ ಮಧ್ಯಾಹ್ನ 12.ಗ್ರಂಥಪಾಲಕರ ಅನುಭವ ಕಥನ ಎರಡನೆಯ ಮಹಡಿಯ ಸಭಾಂಗಣದಲ್ಲಿ ಮಧ್ಯಾಹ್ನ 2ರಿಂದ 5 ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಓದಿನಿಂದ ಬೆಳವಣಿಗೆ ಹಿಪ್ಪೊಕ್ಯಾಂಪಸ್‌ನಿಂದ ಪುಸ್ತಕ ಆಧಾರಿತ ಕುಶಲ ಕಲೆ ರಿತು ಗೇರಾ ಕನ್ನಡ ಮತ್ತು ಇಂಗ್ಲಿಷ್‌ ಮೊದಲ ಮಹಡಿಯ ಸಭಾಂಗಣ ಮಧ್ಯಾಹ್ನ 2.ಚಿತ್ರಕಾರರ ಭೇಟಿ ವಿನಾಯಕ್‌ ವರ್ಮಾ ನೆಲ ಮಹಡಿಯ ಸಭಾಂಗಣದಲ್ಲಿ ಮಧ್ಯಾಹ್ನ 3ಕ್ಕೆ ಕೇಳೊಂದ ಕತೆಯ ಅಪರ್ಣಾ ಅತ್ರೇಯ ಇಂಗ್ಲಿಷ್‌ ಮತ್ತು ಕನ್ನಡ ಸಂಜೆ 4.ಮೂರನೆಯ ದಿನ ಡಿ.14

ಸ್ಥಳೀಯ ಕತೆಹೇಳುವ ಕಲೆ ಬಂಟ್ವಾಳದ ತರಿಕಿಟ ಕಲಾ ಕಮ್ಮಟದಿಂದ ನೆಲಮಹಡಿಯ ಸಭಾಂಗಣದಲ್ಲಿ ಬೆಳಿಗ್ಗೆ 11ರಿಂದ

ಲೇಖಕರ ಭೇಟಿ ರಾಮಗೋಪಾಲ ವಲ್ಲತ್‌ ಇಂಗ್ಲಿಷ್‌ ಮೊದಲ ಮಹಡಿಯ ಸಭಾಂಗಣ ಮಧ್ಯಾಹ್ನ 2.ಚಿತ್ರಕಾರರ ಭೇಟಿ ವಿಶಾಖ ಚಂಚಣಿ ಇಂಗ್ಲಿಷ್‌ ಮಧ್ಯಾಹ್ನ 3ರಿಂದ ತೆನಾಲಿ ರಾಮನ ಕತೆಯ ನಾಟಕ ಬೆಂಗಳೂರು ಲಿಟ್ಲ್‌ ತೇಟರ್‌ ಸಂಸ್ಥೆಯಿಂದ ಇಂಗ್ಲಿಷ್‌, ನೆಲಮಹಡಿಯ ಸಭಾಂಗಣದಲ್ಲಿ ಸಂಜೆ 4.ಕರಾಮತಿ ಕೋಟ್‌ ಹಿಂದಿ ಚಲನಚಿತ್ರ ಪ್ರದರ್ಶನ ಎರಡನೆ ಮಹಡಿಯ ಸಭಾಂಗಣದಲ್ಲಿ  ಸಂಜೆ6. ಕಂಸಾಳೆ ಕೈಸಾಳೆ ಕನ್ನಡ ಚಲನಚಿತ್ರ ಪ್ರದರ್ಶನ ಮೊದಲ ಮಹಡಿಯ ಸಭಾಂಗಣದಲ್ಲಿ ಸಂಜೆ 6.

ಪ್ರತಿಕ್ರಿಯಿಸಿ (+)