ಗುರುವಾರ , ಏಪ್ರಿಲ್ 15, 2021
23 °C

ಇಂದಿನಿಂದ ಸಂಸ್ಕರಣಾ ಸಮ್ಮೇಳನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಯುವಿಸಿಇ ಕಾಲೇಜಿನ ಕಂಪ್ಯೂಟರ್ ಎಂಜಿನಿಯರಿಂಗ್ ವಿಭಾಗ, ದಿ ಸೊಸೈಟಿ ಫಾರ್ ಇನ್‌ಫಾರ್ಮೆಶನ್ ಪ್ರೊಸೆಸಿಂಗ್ ಆಶ್ರಯದಲ್ಲಿ 6ನೇ ಮಾಹಿತಿ ಸಂಸ್ಕರಣಾ (ಇನ್‌ಫಾರ್ಮೆಶನ್ ಪ್ರೊಸೆಸಿಂಗ್) ಅಂತರರಾಷ್ಟ್ರೀಯ ಸಮ್ಮೇಳನ (ಐಸಿಐಪಿ-2012) ನಗರದ ಹೋಟೆಲ್ ಕ್ಯಾಪಿಟಲ್‌ನಲ್ಲಿ ಶುಕ್ರವಾರ ಪ್ರಾರಂಭವಾಗಲಿದೆ. ಭಾನುವಾರದವರೆಗೆ (ಆ.  12) ನಡೆಯಲಿದೆ.ಇದೇ 11ರಂದು ಬೆಳಿಗ್ಗೆ 9 ಗಂಟೆಗೆ ಸಮ್ಮೇಳನವನ್ನು ಚೆನ್ನೈಯ ಇಂಡಿಯನ್ ಇನ್‌ಸ್ಟಿಟೂಟ್ ಆಫ್ ಟೆಕ್ನಾಲಜಿಯ ಮಾಜಿ ಅಧ್ಯಕ್ಷ ಪ್ರೊ.ಆರ್. ನಟರಾಜನ್ ಔಪಚಾರಿಕವಾಗಿ ಉದ್ಘಾಟಿಸುವರು.

ಬೆಂಗಳೂರು ವಿವಿ ಕುಲಪತಿ ಡಾ.ಎನ್. ಪ್ರಭುದೇವ್ ಅಧ್ಯಕ್ಷತೆ ವಹಿಸುವರು ಎಂದು ಬೆಂಗಳೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಎನ್. ಆರ್. ಶೆಟ್ಟಿ ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.  `ಮಾಹಿತಿ ಸಂಸ್ಕರಣ ಹಾಗೂ ನೆಟ್‌ವರ್ಕಿಂಗ್ ಭದ್ರತೆಯ ಉದಯೋನ್ಮುಖ ಹಾಗೂ ಪ್ರಮುಖ ವಿಭಾಗಗಳ ತಾಂತ್ರಿಕ ವಿನಿಮಯವನ್ನು ಹೆಚ್ಚಿಸುವುದು. ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ವಿಜ್ಞಾನಿಗಳು, ಶಿಕ್ಷಕರು ಹಾಗೂ ಎಂಜಿಯರ್‌ಗಳನ್ನು ಒಂದುಗೂಡಿಸುವುದು.ಪದವಿಪೂರ್ವ ಹಾಗೂ ಸ್ನಾತಕೋತ್ತರ ಪದವೀಧರರನ್ನು ಅಧ್ಯಯನದ ಕಡೆಗೆ ಮುಖ ಮಾಡಲು ಉತ್ತೇಜಿಸುವುದು ಸಮ್ಮೇಳನದ ಉದ್ದೇಶ~ ಎಂದು ಅವರು ವಿವರಿಸಿದರು.ಗುಲ್ಬರ್ಗ ವಿವಿ ವಿಶ್ರಾಂತ ಕುಲಪತಿ ಪ್ರೊ. ಎನ್. ರುದ್ರಯ್ಯ, ಪುಣೆ ವಿವಿ ವಿಶ್ರಾಂತ ಕುಲಪತಿ ಪ್ರೊ. ಎಲ್. ಎಂ. ಪಟ್ನಾಯಕ್, ಯುವಿಸಿಇ ಪ್ರಾಂಶುಪಾಲ ಡಾ. ವೇಣುಗೋಪಾಲ್ ಕೆ. ಆರ್. ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.