ದಾವಣಗೆರೆ: ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು ಅವರ ಜನ್ಮದಿನದ ನಿಮಿತ್ತ ನ. 14ರಿಂದ 20ರವರೆಗೆ ಜಿಲ್ಲೆಯಲ್ಲಿ 59ನೇ ಅಖಿಲ ಭಾರತ ಸಹಕಾರ ಸಪ್ತಾಹ ಹಮ್ಮಿಕೊಳ್ಳಲಾಗಿದೆ ಎಂದು ದಾವಣಗೆರೆ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬಿ.ವಿ. ಚಂದ್ರಶೇಖರ್ ತಿಳಿಸಿದರು.

2012 ಅನ್ನು ವಿಶ್ವಸಂಸ್ಥೆ ಅಂತರರಾಷ್ಟ್ರೀಯ ಸಹಕಾರ ವರ್ಷವೆಂದು ಘೋಷಿಸಿ, ಸಹಕಾರ ಕ್ಷೇತ್ರವನ್ನು ವಿಶ್ವಮಟ್ಟದ ಎಲ್ಲಾ ದೇಶಗಳಿಗೆ ಪರಿಚಯಿಸಲು ಮುಂದಾಗಿದೆ. ಈ ಹೆಜ್ಜೆಯು ಸಹಕಾರ ಕ್ಷೇತ್ರಕ್ಕೆ ಹೆಚ್ಚಿನ ಪ್ರೋತ್ಸಾಹ ತರಲಿದೆ. ಈ ವರ್ಷದ ಸಪ್ತಾಹದ ಮೂಲಧ್ಯೇಯ `ಸಹಕಾರ ಉದ್ದಿಮೆಗಳು, ಅತ್ಯುತ್ತಮ ಜಗತ್ತನ್ನು ನಿರ್ಮಿಸುತ್ತವೆ~ ಎಂಬುದಾಗಿದೆ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.

ಸಪ್ತಾಹದ ಅಂಗವಾಗಿ ಜಿಲ್ಲೆಯ ಪ್ರತಿಯೊಂದು ಸಹಕಾರ ಸಂಘಗಳಿಗೆ ನ. 14ರಂದು ಬೆಳಿಗ್ಗೆ 7.30ಕ್ಕೆ ಸಪ್ತವರ್ಣದ ಸಹಕಾರ ಧ್ವಜಾರೋಹಣ ಮಾಡಲು ಕೋರಲಾಗಿದೆ. ಬಾಡ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ 14ರಂದು ಬೆಳಿಗ್ಗೆ 11ಕ್ಕೆ ಸಚಿವ ಎಸ್.ಎ. ರವೀಂದ್ರನಾಥ್ ಸಪ್ತಾಹ ಉದ್ಘಾಟಿಸುವರು. ಸಂಸತ್ ಸದಸ್ಯ ಜಿ.ಎಂ. ಸಿದ್ದೇಶ್ವರ, ಶಾಸಕ ಎಂ. ಬಸವರಾಜನಾಯ್ಕ, ವಿಧಾನ ಪರಿಷತ್ ಮುಖ್ಯಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ ಭಾಗವಹಿಸುವರು ಎಂದರು.

15ರಂದು ಪಟ್ಟಣ ಸಹಕಾರ ಬ್ಯಾಂಕುಗಳ ಒಕ್ಕೂಟ, ಸಹಕಾರ ಸಂಘಗಳ ಸಹಯೋಗದಲ್ಲಿ ಹೋಟೆಲ್ ನ್ಯೂ ಅಪೂರ್ವಾದಲ್ಲಿ `ಸಹಕಾರ ಸಂಸ್ಥೆಗಳ ಮೂಲಕ ಸರ್ವರನ್ನು ಒಳಗೊಂಡ ನ್ಯಾಯ ಸಮ್ಮತವಾದ ದಿನ~ ಆಚರಿಸಲಾಗುವುದು. ಕಾರ್ಯಕ್ರಮವನ್ನು ಶಾಸಕ ಶಾಮನೂರು ಶಿವಶಂಕರಪ್ಪ ಉದ್ಘಾಟಿಸುವರು.

16ರಂದು ಜಗಳೂರು ತಾಲ್ಲೂಕು ಕಲ್ಲೇದೇವರ ಪುರದಲ್ಲಿ, 17ರಂದು ಚನ್ನಗಿರಿ ತಾಲ್ಲೂಕು ಪಾಂಡೋಮಟ್ಟಿ, 18ರಂದು ಹೊನ್ನಾಳಿ ತಾಲ್ಲೂಕಿನಲ್ಲಿ, 19ರಂದು ಹರಿಹರದಲ್ಲಿ ಹಾಗೂ 20ರಂದು ಹರಪನಹಳ್ಳಿಯಲ್ಲಿ ಸಹಕಾರಿ ಸಪ್ತಾಹ ಆಚರಿಸಲಾಗುವುದು ಎಂದು ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಎಚ್.ಬಿ. ಮಂಜುನಾಥ, ಕೆ.ಆರ್. ಸಿದ್ದೇಶ್, ಬಾಡ ಪ್ರಕಾಶ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.