ಹರಪನಹಳ್ಳಿ: ಹಿರಿಯ ರಾಜಕೀಯ ಮುತ್ಸದ್ಧಿ, ಸಾಂಸ್ಕೃತಿಕ ರಾಯಭಾರಿ ಮಾಜಿ ಉಪ ಮುಖ್ಯಮಂತ್ರಿ ದಿವಂಗತ ಎಂ.ಪಿ. ಪ್ರಕಾಶ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ನುಡಿನಮನ ಕಾರ್ಯಕ್ರಮ ಹಾಗೂ ‘ಪ್ರಕಾಶ್ ಮತ್ತು ಪ್ರಸ್ತುತ ರಾಜಕೀಯ’ ಕುರಿತ ವಿಚಾರ ಸಂಕಿರಣವನ್ನು ಪ್ರಕಾಶ್ ಅಭಿಮಾನಿ ಬಳಗ ಮಾರ್ಚ್ 14ರಂದು ಬೆಳಿಗ್ಗೆ 11ಕ್ಕೆ ಪಟ್ಟಣದ ಎಡಿಬಿ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದೆ ಎಂದು ಕೆಪಿಸಿಸಿ ಸದಸ್ಯ ಸಿ. ಚಂದ್ರಶೇಖರ್ ಭಟ್ ತಿಳಿಸಿದರು.

ಸ್ಥಳೀಯ ತೆಗ್ಗಿನಮಠದ ಚಂದ್ರಮೌಳೀಶ್ವರ ಸ್ವಾಮೀಜಿ ನೇತೃತ್ವದಲ್ಲಿ ನಡೆಯುವ ನುಡಿ ನಮನ ಕಾರ್ಯಕ್ರಮವನ್ನು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಉದ್ಘಾಟಿಸುವರು. ಶಾಸಕ ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆ ವಹಿಸಲಿದ್ದು, ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ.ಮಲ್ಲಿಕಾ ಘಂಟಿ ಅವರು ‘ಎಂ.ಪಿ. ಪ್ರಕಾಶ್ ಮತ್ತು ಪ್ರಸ್ತುತ ರಾಜಕೀಯ’ ಕುರಿತು ಉಪನ್ಯಾಸ ಮಂಡಿಸುವರು ಎಂದು ಬುಧವಾರ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ, ಮಾಜಿ ಸಚಿವ ಹಾಗೂ ಚಲನಚಿತ್ರ ನಟ ಅಂಬರೀಶ್, ವಿಧಾನಸಭೆಯ ಮಾಜಿ ಅಧ್ಯಕ್ಷ ರಮೇಶ್ಕುಮಾರ್, ಶಾಸಕ ಕೆ.ಸಿ. ಕೊಂಡಯ್ಯ, ಮಾಜಿ ಶಾಸಕರಾದ ಎಚ್.ಸಿ. ಮಹಾದೇವಪ್ಪ, ಎಸ್.ಎಸ್. ಮಲ್ಲಿಕಾರ್ಜುನ್, ಮಹಿಮ ಜೆ. ಪಟೇಲ್, ಪಿ.ಟಿ. ಪರಮೇಶ್ವರನಾಯ್ಕ ಹಾಗೂ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ, ಪ್ರಕಾಶ್ ಪುತ್ರರೂ ಆದ ಎಂ.ಪಿ. ರವೀಂದ್ರ ಮತ್ತು ಕುಟುಂಬ ವರ್ಗ ಸಮಾರಂಭದಲ್ಲಿ ಭಾಗವಹಿಸುವರು ಎಂದು ವಿವರಿಸಿದರು.

ಸಂಜೆ 6ಗಂಟೆಗೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದ ನೇತೃತ್ವವನ್ನು ನೀಲಗುಂದ ಗುಡ್ಡದ ವಿರಕ್ತಮಠದ ಚನ್ನಬಸವ ಶಿವಾಚಾರ್ಯ ವಹಿಸುವರು. ಕೆಪಿಸಿಸಿ ಸದಸ್ಯ ಚಂದ್ರಶೇಖರ್ ಭಟ್ ಕಾರ್ಯಕ್ರಮ ಉದ್ಘಾಟಿಸುವರು. ಹಿರಿಯ ವಕೀಲ ಟಿ.ಎಚ್.ಎಂ. ವಿರೂಪಾಕ್ಷಯ್ಯ, ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಎಂ.ಪಿ. ರವೀಂದ್ರ, ಹಿರಿಯ ಸಾಹಿತಿ ಕುಂ.ಬಾ. ಸದಾಶಿವಪ್ಪ, ಪ್ರಾಧ್ಯಾಪಕ ಡಾ.ಕೆ. ರುದ್ರಪ್ಪ ಭಾಗವಹಿಸಲಿದ್ದಾರೆ.

ಎಂ.ಪಿ. ಪ್ರಕಾಶ್ ಕನ್ನಡಕ್ಕೆ ಅನುವಾದಿಸಿರುವ ‘ಸೂರ್ಯ ಶಿಕಾರಿ’ ನಾಟಕವನ್ನು ಬೆಂಗಳೂರಿನ ಅದಮ್ಯ ರಂಗಸಂಸ್ಕೃತಿ ತಂಡದಿಂದ ಕಲಾವಿದರು ಪ್ರದರ್ಶಿಸುವರು. ಜತೆಗೆ, ಬೆಂಗಳೂರಿನ ಅರ್ಚನಾ ಉಡುಪ ಹಾಗೂ ತಂಡದವರು ‘ಗಾಯನ ನಮನ’ ಹಾಗೂ ‘ಸುಗಮ ಸಂಗೀತ’ ಕಾರ್ಯಕ್ರಮ ನಡೆಯಲಿದೆ. ಕನಿಷ್ಠ 10ಸಾವಿರಕ್ಕೂ ಅಧಿಕ ಅಭಿಮಾನಿಗಳು ಸೇರುವ ನಿರೀಕ್ಷೆ ಇದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಕೆ. ಹಾಲೇಶ್, ಮುಖಂಡರಾದ ಪಟೇಲ್ ಬೆಟ್ಟನಗೌಡ, ಎಂ.ವಿ. ಅಂಜಿನಪ್ಪ, ಎಚ್.ಬಿ. ಪರಶುರಾಮಪ್ಪ, ಮತ್ತಿಹಳ್ಳಿ ಅಜ್ಜಣ್ಣ, ಚಂದ್ರೇಗೌಡ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.