ಮಂಗಳವಾರ, ಜನವರಿ 21, 2020
27 °C

ಇಂದು ಕಡಲೆಕಾಯಿ ಪರಿಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೆಲಮಂಗಲ:  ಪಟ್ಟಣದ ಸಮೀಪದ ಸೊಂಡೆಕೊಪ್ಪ ರಸ್ತೆಯ ಬಯಲು ಉದ್ಭವ ಶ್ರೀ ವಿನಾಯಕಸ್ವಾಮಿಯ ಬ್ರಹ್ಮ ರಥೋತ್ಸವ (ಕಡಲೆಕಾಯಿ ಪರಿಷೆ) ಮಂಗಳವಾರ ನಡೆಯಲಿದೆ.ಈ ರಥೋತ್ಸವವು ಕಡಲೆಕಾಯಿ ಪರಿಷೆ ಎಂದೇ ಪ್ರಖ್ಯಾತವಾಗಿದ್ದು, ಸುತ್ತಮುತ್ತಲ ಹಳ್ಳಿಗಳ ಸಾವಿರಾರು ಜನ ಬರುತ್ತಾರೆ.ಪರಿಷೆ ಪ್ರಯುಕ್ತ ಸುಮಾರು 2ಕಿ.ಮೀ.ನಷ್ಟು ದೂರದ­ವರೆಗೂ ರಸ್ತೆಯ ಅಕ್ಕಪಕ್ಕದಲ್ಲಿ ವ್ಯಾಪಾ­ರಸ್ಥರು ತಮ್ಮ ಅಂಗಡಿಗಳನ್ನು ತೆರೆದಿರುತ್ತಾರೆ.ಈಗಾಗಲೇ ಒಂದು ವಾರದಿಂದ ಸಿದ್ಧತಾ ಕಾರ್ಯ ಭರದಿಂದ ಸಾಗಿದೆ.ಮಂಗಳವಾರ ಮಧ್ಯಾಹ್ನ 12:30ಕ್ಕೆ ರಥೋತ್ಸವ ನಡೆಯಲಿದ್ದು, ಪ್ರಸಾದ ವ್ಯವಸ್ಥೆ ಮಾಡಲಾಗಿ­ರುತ್ತದೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ.

ಪ್ರತಿಕ್ರಿಯಿಸಿ (+)