ಬುಧವಾರ, ಜೂನ್ 23, 2021
29 °C

ಇಂದು ಚಳ್ಳಕೆರೆಯಮ್ಮನ ಸಿಡಿ ಉತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಳ್ಳಕೆರೆ: ಚಳ್ಳಕೆರೆ ಪಟ್ಟಣದ ನಗರ ದೇವತೆ ಚಳ್ಳಕೆರೆಯಮ್ಮ ದೊಡ್ಡ ಜಾತ್ರಾ ಮಹೋತ್ಸವದ ಪ್ರಸಿದ್ಧ ಸಿಡಿ ಉತ್ಸವ ಮಾರ್ಚ್ 1ರಂದು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನೆರವೇರಲಿದೆ.ಇಂತಹ ಸಿಡಿಉತ್ಸವ ನೋಡಲು ಸಾವಿರಾರು ಮಂದಿ ಭಕ್ತರು ದೂರದ ಊರುಗಳಿಂದ ಚಳ್ಳಕೆರೆ ಪಟ್ಟಣಕ್ಕೆ ಆಗಮಿಸುವುದುಂಟು. ಹರಕೆ ಹೊತ್ತ ಭಕ್ತರು ಒಂದ್ಹೊತ್ತಿನಲ್ಲಿ ಸಿಡಿ ಮರವನ್ನೇರಿ ನೆರೆದವರಲ್ಲಿ ರೋಮಾಚಂನ ಉಂಟುಮಾಡುವ ದೃಶ್ಯ ಗುರುವಾರ ಮದ್ಯಾಹ್ನ 3ಕ್ಕೆ ಜರುಗಲಿದೆ.5ವರ್ಷಗಳಿಗೊಮ್ಮೆ ಆಚರಿಸುವ ಬುಡಕಟ್ಟು ಜನರ ಪಾರಂಪರಿಕ ಆಚರಣೆಯಾಗಿ ಈ ಸಿಡಿ ಉತ್ಸವ ಜಾತ್ರಾ ಮಹೋತ್ಸವದಲ್ಲಿ ಪ್ರಮುಖ ಘಟ್ಟವಾಗಿದೆ. ಬಳ್ಳಾರಿ ರಸ್ತೆಯ ತುಂಬೆಲ್ಲಾ ಜನಜಂಗುಳಿಯೇ ಜಮಾಯಿಸಿರುವುದರಿಂದ ಭಕ್ತರನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ.ಹೆಂಗಳೆಯರು, ಮಕ್ಕಳು ಸೇರಿದಂತೆ ವೃದ್ಧರಾದಿಯಾಗಿ ಸಿಡಿ ಉತ್ಸವವನ್ನು ವೀಕ್ಷಿಸಲು ಎಲ್ಲಾ ಸಿದ್ಧತೆಗಳು ಮುಗಿದಿವೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.