ಶನಿವಾರ, ಮೇ 21, 2022
26 °C

ಇಂದು ವೀರಣ್ಣಸ್ವಾಮಿ ಜಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ಇತಿಹಾಸ ಪ್ರಸಿದ್ಧ ಯಲಿಯೂರು ವೀರಣ್ಣ ಸ್ವಾಮಿ ಜಾತ್ರೆಯು ಸಕಲ ಸಂಪ್ರದಾಯಗಳಂತೆ ಮಂಗಳವಾರ ನಡೆಯಲಿದೆ. ಜಾತ್ರೆ ಅಂಗವಾಗಿ ಮಧ್ಯಾಹ್ನ 1ಗಂಟೆಯಿಂದ ಸಂಜೆ 5ಗಂಟೆ ವರೆಗೆ ಪೂಜಾ ಕಾರ್ಯಗಳು ಜರುಗಲಿವೆ. ಗ್ರಾಮಸ್ಥರಿಂದ ಆರತಿ ಬೆಳಗುವು ಕಾರ್ಯ ಜರುಗಿದ ನಂತರ ದೇವರ ಉತ್ಸವ ಸಹ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.ಪ್ರತಿ 10 ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಯಲ್ಲಿ ಸುತ್ತ ಮುತ್ತಲಿನ ಗ್ರಾಮಗಳಾದ ಚಿಕ್ಕತತ್ತಮಂಗಲ, ದೊಡ್ಡತತ್ತಮಂಗಲ, ತಮ್ಮೇನಹಳ್ಳಿ, ರಾಮನಹಳ್ಳಿ ಮತ್ತು ರಾಮನಹಳ್ಳಿ ಖಾನಿ, ಹಳಿಯೂರು ಮತ್ತು ಯಲಿಯೂರು ಗ್ರಾಮಗಳ ಗ್ರಾಮಸ್ಥರು ಪಾಲ್ಗೊಳ್ಳುತ್ತಾರೆ.`ಭಕ್ತರು ಹರಕೆ ಹೊತ್ತು ಮನಸ್ಸಿನಲ್ಲಿ ಅಂದುಕೊಂಡ ಬಯಕೆಗಳು ಈಡೇರುತ್ತವೆ ಎಂಬುದಕ್ಕೆ ಪುರಾಣದ ಕತೆಗಳಿವೆ. ಜಾತ್ರೆ ವೇಳೆ ಇಲ್ಲಿ ಪ್ರಾಣಿಗಳನ್ನು ಬಲಿ ಕೊಡುವುದು ನಿಷೇದಿಸಲಾಗಿದೆ. ಮುಖ್ಯ ಅರ್ಚಕರಾದ ಕಾಂತಕುಮಾರ್ ಅವರ ಮಾತ್ರ ಗರ್ಭಗುಡಿಯೊಳಗೆ ಹೋಗಿ ಪೂಜಾ ಕಾರ್ಯ ನೆರವೇರಿಸುತ್ತಾರೆ.300 ವರ್ಷಗಳ ಇತಿಹಾಸ ಇರುವ ಈ ದೇವಸ್ಥಾನದಲ್ಲಿರುವ ವೀರಣ್ಣಸ್ವಾಮಿ ದೇವರ ವಿಗ್ರಹದ ಕಿರೀಟ ಭಾಗ ಮಾತ್ರ ಇದೆ. ಉಳಿದ ಭಾಗವು ಕೋಲಾರ ಸಮೀಪದ ವನರಾಸಿಯಲ್ಲಿದೆ. ಅಲ್ಲಿ ಪ್ರತಿ ನಿತ್ಯ ಪೂಜೆ ವಿಧಿ ವಿಧಾನಗಳು ನಡೆಯುತ್ತವೆ~ ಎನ್ನುತ್ತಾರೆ ಕಾಂತಕುಮಾರ್.ಮೊಯ್ಲಿ ಭೇಟಿ

ದೇವನಹಳ್ಳಿ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿ ಎಂಟು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಕಾಲೇಜುಗಳಿಗೆ ಮಂಗಳವಾರ ಮತ್ತು ಬುಧವಾರ ಕೇಂದ್ರ ಕಂಪನಿ ವ್ಯವಹಾರ ಸಚಿವ ಡಾ.ವೀರಪ್ಪ ಮೊಯ್ಲಿ ಭೇಟಿ ನೀಡಲಿದ್ದಾರೆ.2011-12ನೇ ಸಾಲಿನ 10ನೇ ತರಗತಿ ವಿದ್ಯಾರ್ಥಿಗಳಿಗೆ ದಸರಾ ರಜೆಯ ದಿನಗಳಂದು ಹಮ್ಮಿಕೊಳ್ಳಲಾಗಿದ್ದ ಪರಿಹಾರ ಬೋಧನಾ ಶಿಬಿರದ ಪ್ರತಿಕ್ರಿಯೆಯನ್ನು ವಿದ್ಯಾರ್ಥಿಗಳಿಂದ ಪಡೆಯಲು ಅವರು ಎರಡು ದಿನಗಳ ಭೇಟಿಯನ್ನು ಹಮ್ಮಿಕೊಂಡಿದ್ದಾರೆ.ಭೇಟಿ ನೀಡಲಿರುವ ಶಾಲಾ ಕಾಲೇಜುಗಳು: ಮಂಗಳವಾರ ಬೆಳಿಗ್ಗೆ 11.15ಕ್ಕೆ ಯಲಹಂಕ ಸರ್ಕಾರಿ ಪದವಿ ಪೂರ್ವ ಕಾಲೇಜು, ಮಧ್ಯಾಹ್ನ 12.30ಕ್ಕೆ ಸರ್ಕಾರಿ ಪದವಿ ಪೂರ್ವ ಕಾಲೇಜು ದೊಡ್ಡಬಳ್ಳಾಪುರ, 02.15ಕ್ಕೆ ಸರ್ಕಾರಿ ಪ್ರೌಢಶಾಲೆ ಕೋಟೆ ಗೌರಿಬಿದನೂರು, 03.30ಕ್ಕೆ ಸರ್ಕಾರಿ ಬಾಲಕರ ಪೌಢಶಾಲೆ ಗುಡಿಬಂಡೆ, ಸಂಜೆ 04.30ಕ್ಕೆ ಸರ್ಕಾರಿ ಬಾಲಕಿಯರ ಮಾದರಿ ಪ್ರಾಥಮಿಕ ಶಾಲೆ ಬಾಗೇಪಲ್ಲಿ.ಬುಧವಾರ ಬೆಳಿಗ್ಗೆ 10.30ಕ್ಕೆ ಸರ್ಕಾರಿ ಪದವಿ ಪೂರ್ವ ಕಾಲೇಜು ನೆಲಮಂಗಲ, ಮಧ್ಯಾಹ್ನ 12.12ಕ್ಕೆ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ವಾಪಸಂದ್ರ ಚಿಕ್ಕಬಳ್ಳಾಪುರ, ಮಧ್ಯಾಹ್ನ 02.00ಕ್ಕೆ ಸರ್ಕಾರಿ ಪದವಿ ಪೂರ್ವ ಕಾಲೇಜು ದೇವನಹಳ್ಳಿ, ಮಧ್ಯಾಹ್ನ  03.30ಕ್ಕೆ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಹೊಸಕೋಟೆಗೆ ಭೇಟಿ ನೀಡಲಿದ್ದಾರೆ ಎಂದು ತಿಳಿಸಿದೆ.ಎಂದು ಕಿಸಾನ್ ಸಭಾ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.