ಸಂಗೀತ ಪ್ರಿಯರಿಗೆ ವಿಶೇಷ ಬಗೆಯ ರಸದೌತಣ ನೀಡಲು ನಗರ ಈಗ ಸಜ್ಜುಗೊಂಡಿದೆ. ಶನಿವಾರ ನಡೆಯುವ ‘ಸ್ಮಿರ್ನ್ಆಫ್’ ಕಾರ್ಯಕ್ರಮ ಸಂಗೀತ ಮೋಹಿಗಳಿಗೆ ನಾದ- ಲೋಕದ ವಿಶಿಷ್ಟ ಅನುಭೂತಿ ಕಟ್ಟಿಕೊಡಲಿದೆ.

ಡಬ್ಸ್ಟೆಪ್ ಐಕಾನ್ ‘ನೆರೊ’ ಮತ್ತು ‘ರುಸ್ಕೊ’ ಅವರ ನೇತೃತ್ವದಲ್ಲಿ ನಡೆಯುವ ಈ ವಿಶೇಷ ಶೈಲಿಯ ಕಾರ್ಯಕ್ರಮವು ತಂತ್ರಜ್ಞಾನ, ಸಂಗೀತ ಮತ್ತು ದೃಶ್ಯ ಕಲಾ ಮಾಧ್ಯಮದ ನಡುವಿನ ಗೆರೆಗಳನ್ನೇ ಮಸುಕಾಗಿಸಿ, ಮೂರೂ ಪ್ರಕಾರಗಳನ್ನು ಒಂದಾಗಿಸಿ ಭಿನ್ನ ಸ್ವರೂಪದ ನಾದವನ್ನು ಹೊಮ್ಮಿಸಲಿದೆ.

ಭಾರತೀಯ ಸಂಗೀತ ಲೋಕದ ಇತಿಹಾಸದಲ್ಲಿಯೇ ಈ ಬಗೆಯ ಪ್ರಯತ್ನ ಮೊಟ್ಟ ಮೊದಲನೆಯದು ಎಂದು ಹೇಳಿಕೊಳ್ಳುತ್ತಾರೆ ಕಾರ್ಯಕ್ರಮ ಆಯೋಜಿಸಿರುವ ಆಯೋಜಕರು.

ಗ್ರ್ಯಾಮಿ ಪ್ರಶಸ್ತಿ ವಿಜೇತ ತಾರೆ ನೆರೊ ತಂಡ, ಭಾರತದ ನೆಲದಲ್ಲಿ ಇದೇ ಮೊದಲ ಬಾರಿಗೆ ತಮ್ಮ ವಿಶಿಷ್ಟ ನಾದದ ಝೇಂಕಾರದ ರುಚಿಯನ್ನು ಇಲ್ಲಿನ ಸಂಗೀತ ಪ್ರೇಮಿಗಳಿಗೆ ಉಣಬಡಿಸಲಿದ್ದಾರೆ. ಸ್ಥಳ: ಮ್ಯಾನ್ಫೊ ಕನ್ವೆನ್ಷನ್ ಸೆಂಟರ್, ಹೆಬ್ಬಾಳ. ಸಂಜೆ 7.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.