ಸೋಮವಾರ, ಮೇ 10, 2021
25 °C

ಇಎಸ್‌ಜಿಗೆ ವಿಶ್ವಸಂಸ್ಥೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಕೆರೆಗಳ ಸಂರಕ್ಷಣೆಯ ಕಾರ್ಯಕ್ಕಾಗಿ ಬೆಂಗಳೂರಿನ ಸ್ವಯಂಸೇವಾ ಸಂಸ್ಥೆ `ಪರಿಸರ ಉತ್ತೇಜನಾ ಸಮೂಹ~ಕ್ಕೆ (ಇಎಸ್‌ಜಿ) ವಿಶ್ವಸಂಸ್ಥೆಯ 2012 ನೇ ಸಾಲಿನ `ಜೀವನಕ್ಕಾಗಿ ಜಲ~ ಪ್ರಶಸ್ತಿ ಲಭಿಸಿದೆ.

ರೋಮ್‌ನ ಆಹಾರ ಮತ್ತು ಕೃಷಿ ಸಂಘಟನೆಯ ಕೇಂದ್ರಸ್ಥಾನದಲ್ಲಿ ಮಾರ್ಚ್ 22 ರಂದು ನಡೆದ ಸಮಾರಂಭದಲ್ಲಿ ಸಂಸ್ಥೆಯ ಟ್ರಸ್ಟಿ ಎಫ್.ಸಲ್ಡಾನಾ ಅವರು ಸಂಘಟನೆಯ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು.

ಇಎಸ್‌ಜಿ ಸಂಸ್ಥೆಯು ಕಳೆದ ಒಂದು ದಶಕದಿಂದ ನಗರದ ಕೆರೆಗಳ ಹಾಗೂ ನೀರಿನ ಸಂರಕ್ಷಣೆಯ ಬಗ್ಗೆ ಕಾರ್ಯಕ್ರಮಗಳನ್ನು ರೂಪಿಸುತ್ತಾ ಬಂದಿದೆ. ಸರ್ಕಾರದ ಯೋಜನೆಗಳ ಜೊತೆಗೆ ಸ್ಥಳೀಯ ಆಡಳಿತಗಳನ್ನು ಬಳಸಿಕೊಂಡು ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ನೀರಿನ ಮಹತ್ವದ ಬಗ್ಗೆ ಅರಿವು ಮೂಡಿಸುವ ಕಾರ್ಯದಲ್ಲಿ ಸಂಸ್ಥೆ ತೊಡಗಿದೆ.

ನೀರಿನ ಮಹತ್ವದ ಬಗ್ಗೆ ಬಹುವಾರ್ಷಿಕ ಯೋಜನೆಗಳನ್ನು ಕಾರ್ಯಗತಗೊಳಿಸುತ್ತಿರುವ ಸುಸ್ಥಿರ ನಿರ್ವಹಣೆಗಾಗಿ ಸಂಸ್ಥೆಗೆ ಪ್ರಶಸ್ತಿ ಲಭಿಸಿದೆ. ವಿಶ್ವಸಂಸ್ಥೆಯ ವಿಶ್ವ ಜಲ ನಿರ್ವಹಣಾ ಅವಲೋಕನ ಯೋಜನೆಯ 2012 ರ ಆವೃತ್ತಿಗಾಗಿ 22 ಅರ್ಜಿಗಳು ಬಂದಿದ್ದು, ಅವುಗಳಲ್ಲಿ 2005 ರಿಂದ 2015 ರವರೆಗಿನ ಜಲ ನಿರ್ವಹಣೆಯ ಕಾರ್ಯಕ್ಕಾಗಿ ಇಎಸ್‌ಜಿ ಸಂಸ್ಥೆಯನ್ನು ಗುರುತಿಸಲಾಗಿದೆ.

ನಗರದ ಕೆರೆಗಳ ಸಂರಕ್ಷಣೆಯ ಬಗ್ಗೆ ಕಾನೂನು ಸಮರದಲ್ಲಿಯೂ ತೊಡಗಿರುವ ಇಎಸ್‌ಜಿ ಸಂಸ್ಥೆಯು ಇದೇ ವಿಚಾರವಾಗಿ ದಾಖಲಿಸಿರುವ ಪ್ರಕರಣಗಳು ರಾಜ್ಯ ಹೈಕೋರ್ಟ್‌ನಲ್ಲಿ ಇನ್ನೂ ಸಾಕಷ್ಟು ಬಾಕಿ ಉಳಿದಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.