ಶುಕ್ರವಾರ, ಜೂನ್ 18, 2021
28 °C

ಇನ್ನೊಂದು ಚಿತ್ರೋತ್ಸವ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇನ್ನೊಂದು ಚಿತ್ರೋತ್ಸವ!

ಬೆಂಗಳೂರಿನಲ್ಲಿ ಸಿನಿಮಾ ಸಂಸ್ಕೃತಿ ಹೆಚ್ಚಾಗುತ್ತಿದೆಯೇ? ಅಂಥದೊಂದು ಭಾವನೆ ಮೂಡಿಸುವಂತೆ ಈಗ ಇನ್ನೊಂದು ಚಿತ್ರೋತ್ಸವ ನಡೆಯಲಿದೆ. ಯು.ಬಿ. ಸಿಟಿಯಲ್ಲಿ 16ರಿಂದ 20ರವರೆಗೆ ಚಿತ್ರರಸಿಕರಿಗೆ ರಸದೌತಣ.ಇತ್ತೀಚೆಗೆ ತಾನೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಕಂಡ ಬೆಂಗಳೂರು ಜನತೆ ಮತ್ತೊಂದು ಚಿತ್ರೋತ್ಸವಕ್ಕೆ ಸಿದ್ಧವಾಗಬೇಕಿದೆ. `ಸಿನಿಮಾಗಳಿರುವುದು ಮನರಂಜನೆಗಾಗಿ ಮಾತ್ರವಲ್ಲ.ಅದರಲ್ಲಿ ಸಾಮಾಜಿಕ ಜವಾಬ್ದಾರಿ ಬಹುಮುಖ್ಯ~ ಎಂಬ ದೃಷ್ಟಿಯನ್ನು ಇಟ್ಟುಕೊಂಡು ದಿ ಕಲೆಕ್ಷನ್ ಮತ್ತು ಯುಬಿ ಸಿಟಿ ಒಟ್ಟಾಗಿ ಸೇರಿ `ಫಿಲ್ಮ್ ಹಾರ್ವೆಸ್ಟ್-2012~ ಚಲನಚಿತ್ರೋತ್ಸವವನ್ನು ಆಯೋಜಿಸಿದೆ.

 

ಮಾ.16ರಿಂದ 20ರವರೆಗೆ ಯುಬಿ ಸಿಟಿಯ `ಆಂಫಿ ಥಿಯೇಟರ್~ನಲ್ಲಿ ಈ ಚಿತ್ರೋತ್ಸವ ನಡೆಯಲಿದೆ. ಕಿರುಚಿತ್ರ, ಸಾಕ್ಷ್ಯಚಿತ್ರಗಳೊಂದಿಗೆ ಪರಿಪೂರ್ಣ ಸಿನಿಮಾಗಳು ಇಲ್ಲಿ ಪ್ರದರ್ಶನವಾಗಲಿವೆ.ಸಂಗೀತ ನಿರ್ದೇಶಕ ರಿಕಿ ಕೇಜ್ ಮೊದಲ ದಿನ ತಮ್ಮ ಲೈವ್ ಆರ್ಕೆಸ್ಟ್ರಾದ ಮೂಲಕ ಚಿತ್ರೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. 35 ಸಂಗೀತಗಾರರು ಮತ್ತು ಆರು ಗಾಯಕರ ತಂಡದ ನೇತೃತ್ವ ವಹಿಸಲಿರುವ ರಿಕಿ ಕೇಜ್, ಆಯ್ದ 20 ಸಿನಿಮಾ ಹಾಡುಗಳನ್ನು ಪ್ರಸ್ತುತಪಡಿಸಲಿದ್ದಾರೆ.`ಇದೊಂದು ವಿನೂತನ ಚಿತ್ರೋತ್ಸವ. ಸಿನಿಮಾ ನಿರ್ಮಾಪಕರಿಗೆ ದೊಡ್ಡದೊಂದು ವೇದಿಕೆ ಒದಗಿಸುವ ದೃಷ್ಟಿಯಿಂದ ಇದನ್ನು ಆಯೋಜಿಸಲಾಗಿದೆ~ ಎಂದು ರಿಕಿ ಸಂತಸ ಹಂಚಿಕೊಂಡರು.`ಫಿಲ್ಮ್ ಹಾರ್ವೆಸ್ಟ್-2012~ ಚಿತ್ರೋತ್ಸವದ ನಿರ್ದೇಶಕರಾಗಿರುವ ಕನ್ನಡ ಸಿನಿಮಾ ನಿರ್ದೇಶಕ ಗಿರೀಶ್ ಕಾಸರವಳ್ಳಿ ಗಂಭೀರ ಸಿನಿಮಾಗಳನ್ನು ಇಷ್ಟಪಡುವ ಬೆಂಗಳೂರಿಗರಿಗೆ ಇದೊಂದು ಅದ್ಭುತ ಅವಕಾಶ ಎಂದರು. `ಬೆಂಗಳೂರಿನಲ್ಲಿ ಆರರಿಂದ ಏಳು ಭಾಷೆಯ ಸಿನಿಮಾಗಳು ಪ್ರದರ್ಶನಗೊಳ್ಳುತ್ತವೆ.ಆದರೆ ಅಂತರರಾಷ್ಟ್ರೀಯ ಸಿನಿಮಾಗಳು ನಮಗೆ ಸಿಗುವುದಿಲ್ಲ. ಅಂಥ ಅವಕಾಶವನ್ನು ಈ ಚಿತ್ರೋತ್ಸವ ಒದಗಿಸಲಿದೆ. ಬೆಳಗಿನ ಕೆಲಸಗಳನ್ನು ಮುಗಿಸಿ ಸಂಜೆಯ ನಂತರ ಸಿನಿಮಾಗಳ ಪ್ರದರ್ಶನ ಆಯೋಜಿಸಿರುವುದು ಪ್ರತಿಯೊಬ್ಬರಿಗೂ ಅನುಕೂಲಕರವಾಗಿದೆ.ಬೆಂಗಳೂರಿನ ಜನ ಇದಕ್ಕೆ ಪ್ರೋತ್ಸಾಹ ನೀಡುತ್ತಾರೆ ಎಂಬ ನಂಬಿಕೆ ನನಗಿದೆ~ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಚಿತ್ರೋತ್ಸವಕ್ಕೆ ಸಿನಿಮಾಗಳನ್ನು ಆಯ್ಕೆ ಮಾಡಿರುವ ಶ್ರೀನಿವಾಸ್ ಸಂತಾನಂ ಇಂಥ ಚಿತ್ರೋತ್ಸವಗಳನ್ನು ಏರ್ಪಡಿಸುವುದರಲ್ಲಿ 16 ವರ್ಷಗಳ ಅನುಭವವುಳ್ಳವರು. `ಜನ ಸಿನಿಮಾ ನೋಡಿ ಖುಷಿ ಪಡಲಿ ಎಂಬುದೇ ನಮ್ಮ ಉದ್ದೇಶ~ ಎಂದ ಅವರಿಗೂ ಕೂಡ ಬೆಂಗಳೂರಿನ ಜನರ ಸಿನಿಮಾ ಪ್ರೀತಿಯ ಬಗ್ಗೆ ಅಪಾರ ನಂಬಿಕೆ ಇದೆ.ಚಿತ್ರೋತ್ಸವದ ಅಧ್ಯಕ್ಷೆ ಉಜ್ಮಾ ಇರ್ಫಾನ್ ಅವರು ಸಾಮಾಜಿಕ ಜವಾಬ್ದಾರಿ ಇರುವ ಸಿನಿಮಾಗಳ ಬಗ್ಗೆ ತೋರಿದ ಆಸಕ್ತಿ ಇಂದು ಚಿತ್ರೋತ್ಸವ ನಡೆಯುತ್ತಿರುವುದಕ್ಕೆ ಕಾರಣವಾಗಿದೆಯಂತೆ. ತಮ್ಮ ಕನಸು ಈಡೇರುತ್ತಿರುವುದಕ್ಕೆ ಸಂತಸಪಟ್ಟ ಅವರು ಚಿತ್ರೋತ್ಸವ ಯಶಸ್ವಿಯಾಗಬೇಕೆಂದು ಬಯಸಿದರು.ಮರಾಠಿ ಚಿತ್ರ ನಿರ್ದೇಶಕರಾದ ಸುಮಿತ್ರಾ ಭಾವೆ ಮತ್ತು ಸುನೀಲ್ ಸುಕ್ತಂಕರ್ ಮತ್ತು ಮಲಯಾಳಂ ನಿರ್ದೇಶಕ ಜಯರಾಮ್ ತಮ್ಮ ಸಿನಿಮಾಗಳ ಪ್ರದರ್ಶನದ ದಿನ ವೀಕ್ಷಕರೊಂದಿಗೆ ಚರ್ಚೆಯಲ್ಲಿ ಭಾಗವಹಿಸುತ್ತಾರೆ. `ಫಿಲ್ಮ್ ಹಾರ್ವೆಸ್ಟ್-2012~ ಚಿತ್ರೋತ್ಸವದಲ್ಲಿ 11 ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ಅವುಗಳಲ್ಲಿ 9 ಅಂತರರಾಷ್ಟ್ರೀಯ ಸಿನಿಮಾಗಳಿದ್ದರೆ, 3 ಭಾರತೀಯ ಸಿನಿಮಾಗಳು. ಸಿನಿಮಾಗಳನ್ನು ನೋಡಲು ನೋಂದಣಿ ದರ 700 ರೂಪಾಯಿ. ಹೆಚ್ಚಿನ ಮಾಹಿತಿಗೆ www.filmharvest.in ಸಂಪರ್ಕಿಸಬಹುದು.ಚಿತ್ರೋತ್ಸವದಲ್ಲಿ ಪ್ರದರ್ಶನವಾಗುವ ಸಿನಿಮಾಗಳು

ಮಾ. 16 ರಾತ್ರಿ 8 ಗಂಟೆಗೆ ಆರಂಭೋತ್ಸವಮಾ. 16 `ಟ್ರೀ ಆಫ್ ಲೈಫ್~ (ಅಮೆರಿಕ)ಮಾ.17 `ದಿ ಕಿಡ್ ವಿಥ್ ಎ ಬೈಕ್~ (ಬೆಲ್ಜಿಯಂ/ಫ್ರಾನ್ಸ್/ಇಟಲಿ), ಲಾಸ್ ಅಕೆಶಿಯಾಸ್ (ಅರ್ಜೆಂಟಿನಾ/ಸ್ಪೇನ್), ಮೈಕಲ್ (ಆಸ್ಟ್ರಿಯಾ),ಮಾ.18 `ಕನಸೆಂಬೊ ಕುದುರೆಯನೇರಿ~ (ಕನ್ನಡ), `ದಿ ಮಿಲ್ ಅಂಡ್ ದಿ ಕ್ರಾಸ್~ (ಪೋಲೆಂಡ್/ ಸ್ವೀಡನ್)ಮಾ.19 `ಜೊನ್ನಾ~ (ಪೋಲೆಂಡ್), `ಇಲೆನಾ~ (ರಷ್ಯಾ), `ಮೌರ್ನಿಂಗ್~ (ಇರಾನ್)ಮಾ. 20 `ಇಂಡಿಯಾ ಈಸ್ ಮೈ ಕಂಟ್ರಿ~ (ಮರಾಠಿ), `ಪಗರ್‌ನ್ನಾಟ್ಟಂ~ (ಮಲಯಾಳಂ)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.