ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ಫೊಸಿಸ್‌ ಮುಖ್ಯಸ್ಥ ವಿಶಾಲ್‌ ಸಿಕ್ಕಾ ಸಂಬಳ ₹ 73 ಕೋಟಿ

Last Updated 19 ಮೇ 2016, 19:45 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಇನ್ಫೊಸಿಸ್‌ನ ಮುಖ್ಯಸ್ಥ ವಿಶಾಲ್‌ ಸಿಕ್ಕಾ ಅವರು 2015–16ನೆ ಹಣಕಾಸು ವರ್ಷದಲ್ಲಿ ₹ 49 ಕೋಟಿಗಳಷ್ಟು ವಾರ್ಷಿಕ ವೇತನ ಪಡೆದಿದ್ದು, 2017ರ ಜನವರಿಯಿಂದ ಅವರ ವೇತನವು ₹ 74 ಕೋಟಿಗಳಷ್ಟಾಗಲಿದೆ.

2015–16ನೆ ಸಾಲಿನಲ್ಲಿ ಪಡೆದಿರುವ ₹ 49 ಕೋಟಿ ಸಂಬಳದಲ್ಲಿ ಮೂಲ ವೇತನ (₹ 6 .07 ಕೋಟಿ), ಬೋನಸ್‌ ಮತ್ತು ಪ್ರೋತ್ಸಾಹ ಧನ (₹ 42.88 ಕೋಟಿ) ಮತ್ತು ₹ 33 ಲಕ್ಷದಷ್ಟು ನಿವೃತ್ತಿ ಲಾಭಗಳು ಸೇರಿವೆ.

2014ರ ಜೂನ್‌ ತಿಂಗಳಿನಲ್ಲಿ ಸಿಕ್ಕಾ ಅವರು, ದೇಶದ ಎರಡನೆ ಅತಿದೊಡ್ಡ ಸಾಫ್ಟ್‌ವೇರ್‌ ರಫ್ತು ಸಂಸ್ಥೆಯಾಗಿರುವ ಇನ್ಫೊಸಿಸ್‌ನ ಉನ್ನತ ಹುದ್ದೆಗೆ ಏರಿದ್ದರು. ಆ ಸಂದರ್ಭದಲ್ಲಿ ಅವರ ವೇತನ ₹ 4.56 ಕೋಟಿಗಳಷ್ಟಿತ್ತು. ಪ್ರೋತ್ಸಾಹ ಧನ, ಬೋನಸ್‌ ಮತ್ತು ಷೇರು ಆಯ್ಕೆ ಒಳಗೊಂಡ ಒಟ್ಟು ವೇತನವು ಈಗ 10 ಪಟ್ಟು ಹೆಚ್ಚಾಗಿದೆ ಎಂದು ಸಂಸ್ಥೆಯ ವಾರ್ಷಿಕ ವರದಿಯಲ್ಲಿ ತಿಳಿಸಲಾಗಿದೆ.

ಇನ್ಫೊಸಿಸ್‌ ಸಂಸ್ಥೆಯನ್ನು ಪುನಶ್ಚೇತನದ ಹಾದಿಗೆ ತರುವಲ್ಲಿ ಸಿಕ್ಕಾ ಯಶಸ್ವಿಯಾಗಿದ್ದಾರೆ. ಇದೇ ಕಾರಣಕ್ಕೆ ಅವರ ಅಧಿಕಾರಾವಧಿಯನ್ನು ಸಂಸ್ಥೆಯ ಆಡಳಿತ ಮಂಡಳಿಯು 2021ರ ಮಾರ್ಚ್‌ವರೆಗೆ ವಿಸ್ತರಿಸಿದೆ. ಜತೆಗೆ ಅವರ ವೇತನವನ್ನೂ ಹೆಚ್ಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT